Vande Sadharan ರೈಲಿನ ಒಳನೋಟ ಹೇಗಿದೆ? 'ಅಗ್ಗದ ಎಕ್ಸ್ ಪ್ರೆಸ್' ರೈಲಿನ ಮೊದಲ ವಿಡಿಯೋ ಬಹಿರಂಗ!

Vande Ordinary Inside Look: ದೇಶದ ಮೊದಲ ವಂದೇ ಸಾಧಾರಣ ರೈಲು ಶೀಘ್ರದಲ್ಲೇ ಹಳಿಗೆ ಇಳಿಯಲಿದೆ. ಇದರ ಒಳ ನೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. (Viral News In Kannada)

Written by - Nitin Tabib | Last Updated : Oct 24, 2023, 06:47 PM IST
  • ವಂದೇ ಭಾರತ್ ಮತ್ತು ವಂದೇ ಮೆಟ್ರೋದ ಸ್ಲೀಪರ್ ಆವೃತ್ತಿಯ ಮೇಲೂ ಕೂಡ ರೈಲ್ವೇ ಇಲಾಖೆ ವೇಗವಾಗಿ ಕೆಲಸ ಮಾಡುತ್ತಿದೆ.
  • ಇತ್ತೀಚೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ರೈಲಿನ ಸ್ಲೀಪರ್ ಆವೃತ್ತಿಯ ಪರಿಕಲ್ಪನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
  • ಮುಂದಿನ ವರ್ಷ ಮಾರ್ಚ್ ವೇಳೆಗೆ ಅದು ಹಳಿಗೆ ಇಳಿಯುವ ಸಾಧ್ಯತೆ ಇದೆ.
Vande Sadharan ರೈಲಿನ ಒಳನೋಟ ಹೇಗಿದೆ? 'ಅಗ್ಗದ ಎಕ್ಸ್ ಪ್ರೆಸ್' ರೈಲಿನ ಮೊದಲ ವಿಡಿಯೋ ಬಹಿರಂಗ! title=

ನವದೆಹಲಿ: ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಒಂದು ರೈಲು ಎಂದರೆ ಅದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಫೆಬ್ರವರಿ 2019 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಮತ್ತು ದೇಶದ ರಾಜಧಾನಿ ದೆಹಲಿ ನಡುವೆ ಈ ಇಂತಹ ಮೊದಲ ರೈಲಿಗೆ ಚಾಲನೆ ನೀಡಿದ್ದಾರೆ.  ಅಂದಿನಿಂದ, ದೇಶದಲ್ಲಿ ಒಟ್ಟು 34 ಜೋಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತಿದೆ. ಆದಾಗ್ಯೂ, ಪ್ರಸ್ತುತ ಈ ರೈಲು ಎಸಿ ಚೇರ್ ಕಾರ್‌ನಲ್ಲಿ ಮಾತ್ರ ಲಭ್ಯವಿದೆ. ಇದರ ದರವು ಇತರ ಸಾಮಾನ್ಯ ರೈಲುಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇದನ್ನು ಜನಸಾಮಾನ್ಯರ ವ್ಯಾಪ್ತಿಗೆ ತರಲು ರೈಲ್ವೇ ತನ್ನ ನಾನ್ ಎಸಿ ಆವೃತ್ತಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಈ ವಂದೇ ಸಾಧಾರಣ ರೈಲಿನ ಫಸ್ಟ್ ಲುಕ್ ರಿವೀಲ್ ಆಗಿದೆ. ಈ ವಂದೇ ಆರ್ಡಿನರಿ ರೈಲು ಎಷ್ಟು ವಿಶೇಷವಾಗಿದೆ ಎಂಬುದನ್ನು ನೋಡೋಣ ಮತ್ತು ತಿಳಿದುಕೊಳ್ಳೋಣ ಬನ್ನಿ, 

ನಾನ್ ಎಸಿ ಎಕ್ಸ್‌ಪ್ರೆಸ್ ರೈಲು
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶದ ಮೊದಲ ಅರೆ ವೇಗದ ರೈಲಾಗಿದೆ. ಮತ್ತೊಂದೆಡೆ ಸಾಮಾನ್ಯ ಜನರಿಗಾಗಿ ನಾನ್-ಎಸಿ ರೈಲು ವಂದೇ ಸಾಧಾರಣ ಕೂಡ ಸಿದ್ಧವಾಗುತ್ತಿದೆ. ಇದನ್ನು ನಾನ್ ಎಸಿ ಪುಶ್ ಪುಲ್ ಟ್ರೈನ್ ಎಂದೂ ಕರೆಯಲಾಗುತ್ತಿದೆ. ಅಂದರೆ ರೈಲಿನ ಮುಂಭಾಗ ಮತ್ತು ಹಿಂಭಾಗ ಎರಡರಲ್ಲೂ ಇಂಜಿನ್‌ಗಳಿದ್ದು, ರೈಲು ಎರಡೂ ಕಡೆಗಳಿಂದ ವೇಗವನ್ನು ಪಡೆಯಬಹುದು. ಈ ವರ್ಷಾಂತ್ಯಕ್ಕೆ ಈ ರೈಲು ಹಳಿಗೆ ಇಳಿಯುವ ಸಾಧ್ಯತೆ ಇದೆ. ಇದರ ಪರೀಕ್ಷೆ ಈ ತಿಂಗಳ ಅಂತ್ಯದ ವೇಳೆಗೆ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF, ಚೆನ್ನೈ) ನಲ್ಲಿ ಇದನ್ನು ತಯಾರಿಸಲಾಗುತ್ತಿದೆ. ಈ ರೈಲಿನ ಸೆಟ್ ಸಿದ್ಧವಾಗಿದ್ದು, 22 ಕೋಚ್‌ಗಳನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ಲೊಕೊಮೊಟಿವ್ ಎಂಜಿನ್‌ಗಳನ್ನು ಅಳವಡಿಸಲಾಗಿದೆ. ಇದು 12 ಸ್ಲೀಪರ್ ಕ್ಲಾಸ್ ಕೋಚ್‌ಗಳು, 8 ಜನರಲ್ ಕೋಚ್‌ಗಳು ಮತ್ತು 2 ಗಾರ್ಡ್ ಕೋಚ್‌ಗಳನ್ನು ಹೊಂದಿದೆ. ಚಿತ್ತರಂಜನ್ ಲೊಕೊಮೊಟಿವ್ ಫ್ಯಾಕ್ಟರಿಯಲ್ಲಿ (ಸಿಎಲ್‌ಡಬ್ಲ್ಯೂ) ವಂದೇ ಸಾಧಾರಣಕ್ಕಾಗಿ ಎರಡು ಎಂಜಿನ್‌ಗಳನ್ನು ವಿಶೇಷವಾಗಿ ತಯಾರಿಸಲಾಗುತ್ತಿದೆ.

ಇದನ್ನೂ ಓದಿ-ಶಕ್ತಿಶಾಲಿ ಗೂಳಿಯನ್ನೇ ಹಿಮ್ಮೆಟ್ಟಿಸಿದ ಮೇಕೆ, ಕಾನ್ಫಿಡೆನ್ಸ್ ಅಂದ್ರೆ ಇದಪ್ಪ ಎಂದ ನೆಟ್ಟಿಗರು!

ಮೊದಲ ವಂದೇ ಭಾರತ್ ರೈಲು ಯಾವಾಗ ಹಳಿಗೆ ಇಳಿದಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2019 ರಲ್ಲಿ ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ರೈಲು ವಾರಣಾಸಿ ಮತ್ತು ನವದೆಹಲಿ ನಡುವೆ ಚಲಿಸುತ್ತದೆ. ಇದರ ನಂತರ, ಇದು ನವದೆಹಲಿಯಿಂದ ಮಾತಾ ವೈಷ್ಣೋ ದೇವಿ ಮತ್ತು ಮುಂಬೈ ಸೆಂಟ್ರಲ್ ನಿಂದ ಗಾಂಧಿನಗರದ ನಡುವೆ ಚಲಿಸುತ್ತದೆ. ಅಂದಿನಿಂದ, ದೇಶದಲ್ಲಿ ಒಟ್ಟು 34 ಜೋಡಿ ವಂದೇ ಭಾರತ್ ರೈಲುಗಳನ್ನು ಓಡಿಸಲಾಗಿದೆ.

ಇದನ್ನೂ ಓದಿ-ಇದೇ ನೋಡಿ ವಿಶ್ವದ ಅತ್ಯಂತ ಸುಲಭ ನೌಕರಿ, ಕೆಲಸವಿಲ್ಲದೆ ಕುಳಿತುಕೊಳ್ಳಲು ಎಷ್ಟು ವೇತನ ಸಿಗುತ್ತೆ ಗೊತ್ತಾ?

ಈ ರೈಲುಗಳಿಗೆ ಸಿದ್ಧತೆಯೂ ನಡೆಯುತ್ತಿದೆ
ವಂದೇ ಭಾರತ್ ಮತ್ತು ವಂದೇ ಮೆಟ್ರೋದ ಸ್ಲೀಪರ್ ಆವೃತ್ತಿಯ ಮೇಲೂ ಕೂಡ ರೈಲ್ವೇ ಇಲಾಖೆ ವೇಗವಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ರೈಲಿನ ಸ್ಲೀಪರ್ ಆವೃತ್ತಿಯ ಪರಿಕಲ್ಪನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಅದು ಹಳಿಗೆ ಇಳಿಯುವ ಸಾಧ್ಯತೆ ಇದೆ. ಈ ರೈಲಿನಲ್ಲಿ ಒಟ್ಟು 16 ಕೋಚ್‌ಗಳಿದ್ದು, ಅದರಲ್ಲಿ 11 ಎಸಿ 3 ಟೈಯರ್, 4 ಎಸಿ 2 ಟೈಯರ್ ಮತ್ತು 1 ಕೋಚ್ 1ನೇ ಎಸಿ ಇಡ್ರಲಿದೆ. ಈ ರೈಲಿನ ಸೆಟ್ ಮುಂದಿನ ವರ್ಷ ಮಾರ್ಚ್ ಮೊದಲು ಸಿದ್ಧವಾಗಲಿದ್ದು, ನಂತರ ಮೊದಲ ರೈಲನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಅದೇ ಸಮಯದಲ್ಲಿ, ಫೆಬ್ರವರಿ-ಮಾರ್ಚ್ ವೇಳೆಗೆ ಆಗಮಿಸುವ ನಿರೀಕ್ಷೆಯಿರುವ ವಂದೇ ಮೆಟ್ರೋ ಬಗ್ಗೆಯೂ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News