ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವರು ಬೈಮಿಸ್ಟೇಕ್  ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಮತ್ತು ಅವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಆದರೆ ಕೆಲವರು ಉದ್ದೇಶಪೂರ್ವಕವಾಗಿ ವೈರಲ್ ಆಗುವ ಅಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂತಹುದೇ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಗಗನಸಖಿಯೊಬ್ಬರು ವಿಮಾನದಲ್ಲಿ ಒಂದು ಕೆಲಸ ಮಾಡಿದ್ದಾರೆ ಮತ್ತು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಗನಸಖಿ ಮಾಡಿದ ಕೆಲಸ ಎಂಥದ್ದು ಎಂದರೆ, ಜನರು ಈ ವೀಡಿಯೊವನ್ನು ರಿಪೀಟ್ ಆಗಿ ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ.(Viral News In Kannada)


COMMERCIAL BREAK
SCROLL TO CONTINUE READING

ವಿಮಾನದಲ್ಲಿ ಗಗನಸಖಿಯ ವಿಚಿತ್ರ ವರ್ತನೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಗಗನಸಖಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಗಗನಸಖಿ ತನ್ನ ಕೈಯನ್ನು ಎರಡು ಆಸನಗಳ ಮೇಲೆ ಇರಿಸುವ ಮೂಲಕ ಒಂದು ಸ್ಟಂಟ್ ಪ್ರದರ್ಶಿಸಲು ಪ್ರಾರಂಭಿಸುತ್ತಾಳೆ. ವಿಮಾನದಲ್ಲಿ ಲಗೇಜ್ ಇಡುವ ಜಾಗದ ಮೇಲಿನ ಬಾಕ್ಸ್ ಗಳು ತೆರೆದಿರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು.


ಇದನ್ನೂ ಓದಿ-Viral Video: ಕಂಠಪೂರ್ತಿ ಕುಡಿದು, ಸಿಲುಕಬಾರದ ಜಾಗಕ್ಕೆ ಹೋಗಿ ಸಿಲುಕಿದ ಭೂಪ... ವಿಡಿಯೋ ನೋಡಿ!


ಅವುಗಳನ್ನು ಕೈಯಿಂದ ಮುಚ್ಚುವ ಬದಲು ಗಗನಸಖಿ ತನ್ನ ಎರಡೂ ಕೈಗಳನ್ನು ಎರಡು ಆಸನಗಳ ಮೇಲೆ ಇರಿಸಿ ಜಿಮ್ನ್ಯಾಸ್ಟಿಕ್ ಸ್ಟೈಲ್ ನಲ್ಲಿ ಕಾಲಿನಿಂದ ಮುಚ್ಚುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೇಗವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @TheFigen_ ಬಳಕೆದಾರ ಹೆಸರಿನೊಂದಿಗೆ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು 1.5 ಕೋಟಿ ಬಾರಿ ವೀಕ್ಷಣೆಗೆ ಒಳಗಾಗಿದೆ.


ಇದನ್ನೂ ಓದಿ-Viral Video: ಇದೀಗ ಬ್ರೆಜಿಲ್ ಪರ್ವತದಲ್ಲಿ ಕಂಡುಬಂದ 10 ಅಡಿ ಎತ್ತರದ ಎಲಿಯನ್ ಗಳು! ನಿಗೂಢ ಜೀವಿಗಳನ್ನು ಕಂಡು ಬೆಚ್ಚಿಬಿದ್ದ ನೆಟ್ಟಿಗರು!


ಜನರ ಪ್ರತಿಕ್ರಿಯೆ ಹೇಗಿದೆ?
ವೈರಲ್ ಆಗುತ್ತಿರುವ ಈ ವಿಡಿಯೋಗೆ ಹಲವರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ವಿಡಿಯೋಗೆ ಕಾಮೆಂಟ್ ಮಾಡಿದ ಓರ್ವ ಬಳಕೆದಾರರು ಬರೆದಿದ್ದಾರೆ, 'ಮಹಾನ್ ಉದ್ಯೋಗಿಯ ಪ್ರದರ್ಶನ' ಎಂದು ಹೇಳಿದ್ದಾರೆ. ಮತ್ತೊರ್ವ ಬಳಕೆದಾರ, 'ಅವಳು ಪ್ರಯಾಣಿಕರಿಂದ ತುಂಬಿದ ವಿಮಾನದಲ್ಲಿ ಇದನ್ನು ಮಾಡಬೇಕಿತ್ತು, ಸಾಕಷ್ಟು ಜನರ ಜನರ ಗಮನ ಸೆಳೆಯುತ್ತಿದ್ದರು' ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಖಾಲಿ ಸಮಯದ ಉತ್ತಮ ಬಳಕೆ' ಎಂದು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ