ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ʼಶಕ್ತಿʼ ಯೋಜನೆಯಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ಬಸ್‌ಗಳು ಪ್ರತಿದಿನ ಫುಲ್‌ ರಷ್‌ ಆಗಿರುತ್ತವೆ. ಕರ್ನಾಟಕದ ಯಾವುದೇ ಬಸ್‌ಸ್ಟ್ಯಾಂಡ್‌ ನೋಡಿ ನಾರಿಮಣಿಗಳಿಂದ ತುಂಬಿರುತ್ತವೆ. ಸೀಟು ಹಿಡಿಯಲು ಅನೇಕರು ಪ್ರಾಣ ಕಳೆದುಕೊಂಡಿದ್ದು ಇದೆ. ಈ ನಡುವೆ ಬಸ್‌ನಲ್ಲಿ ಸೀಟು ಹಿಡಿಯಲು ಜನರ ನಡವೆ ಫೈಟ್‌ ನಡೆಯುತ್ತಲೇ ಇರುತ್ತದೆ.


COMMERCIAL BREAK
SCROLL TO CONTINUE READING

ಬಹುತೇಕ ಘಟನೆಗಳಲ್ಲಿ ಬಸ್ಸಿನ ಸೀಟಿಗಾಗಿ ಹೆಣ್ಣುಮಕ್ಕಳೇ ಜಗಳವಾಡುವುದು, ಹೊಡೆದಾಡುವುದು ಮಾಡಿಕೊಂಡಿರುತ್ತಾರೆ. ಅದೇ ರೀತಿಯ ಮತ್ತೊಂದು ಘಟನೆ ಇದೀಗ ವರದಿಯಾಗಿದೆ. ಹೌದು, ಫ್ರೀ ಎಫೆಕ್ಟ್‌ನಿಂದ ರಾಜ್ಯದಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳು ಫುಲ್‌ ರಷ್‌ ಆಗಿರುತ್ತವೆ. ಕಿಟಕಿಗಾಗಿ ಮಹಿಳೆಯರ ನಡುವೆ ದೊಡ್ಡ ಫೈಟ್‌ ನಡೆದಿದೆ.


ಇದನ್ನೂ ಓದಿ: ನಟ ಕಬೀರ್ ಬೇಡಿ ಆತ್ಮಕಥನಕ್ಕೆ ನಿರ್ಬಂಧ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್


500 ರೂ. ನೋಟಿನಲ್ಲಿ ಗಾಂಧಿ ಫೋಟೋ ಬದಲಿಗೆ ಭಗವಾನ್‌ ʼಶ್ರೀರಾಮʼ ಚಿತ್ರ..!?


ಮೆಜೆಸ್ಟಿಕ್‌ನಿಂದ‌ ಪೀಣ್ಯಾ ಕಡೆ ಈ ಬಸ್ ಸಂಚರಿಸುತ್ತಿತ್ತು. ರಾಜಾಜಿನಗರ ಠಾಣಾ ವ್ಯಾಪ್ತಿಯ ಮೂಲಕ ಹೋಗುತ್ತಿದ್ದ ಈ ಬಸ್‌ನಲ್ಲಿ ಕಿಟಕಿ ತೆಗೆಯೋ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಕಿರಿಕ್ ಆಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಚಪ್ಪಲಿ, ಶೂನಿಂದ ಪರಸ್ಪರ ಆ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಜನರು ಫ್ರೀ ಬಸ್‌ ಎಫೆಕ್ಟ್‌ ಬಗ್ಗೆ ಪರ-ವಿರೋಧವಾಗಿ ವ್ಯಾಪಕ ಚರ್ಚೆ ಮಾಡುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.