500 ರೂ. ನೋಟಿನಲ್ಲಿ ಗಾಂಧಿ ಫೋಟೋ ಬದಲಿಗೆ ಭಗವಾನ್‌ ʼಶ್ರೀರಾಮʼ ಚಿತ್ರ..!?

Ram photo in 500rs note : ರಾಮಮಂದಿರ ಮತ್ತು ರಾಮನ ಫೋಟೋದೊಂದಿಗೆ ಹೊಸ 500 ರೂಪಾಯಿ ನೋಟುಗಳನ್ನು ಜನವರಿ 22ರಂದು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತ ಸತ್ಯಾಂಶ ಇಲ್ಲಿದೆ ನೋಡಿ..

Written by - Krishna N K | Last Updated : Feb 7, 2024, 08:06 PM IST
  • ಹೊಸ 500 ರೂಪಾಯಿ ಸರಣಿಯ ನೋಟುಗಳನ್ನು ಶೀರ್ಘ್ರದಲ್ಲೇ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ.
  • ಈ ಕುರಿತು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
  • ರಿಸರ್ವ್ ಬ್ಯಾಂಕ್ ಅಪ್‌ ಇಂಡಿಯಾ ಹೊಸ 500 ರೂಪಾಯಿ ನೋಟು ಬಿಡುಗಡೆ ಮಾಡಲಿದೆ.
500 ರೂ. ನೋಟಿನಲ್ಲಿ ಗಾಂಧಿ ಫೋಟೋ ಬದಲಿಗೆ ಭಗವಾನ್‌ ʼಶ್ರೀರಾಮʼ ಚಿತ್ರ..!? title=

New 500 note : ರಾಮಮಂದಿರ ಮತ್ತು ಭಗವಾನ್‌ ಶ್ರೀರಾಮನ ಫೋಟೋ ಹೊಂದಿರುವ ಹೊಸ 500 ರೂಪಾಯಿ ಸರಣಿಯ ನೋಟುಗಳನ್ನು ಶೀರ್ಘ್ರದಲ್ಲೇ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈ ಕುರಿತು ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದರ ಹಿಂದಿನ ಸತ್ಯಾಂಶ ಇಲ್ಲಿದೆ ನೋಡಿ..

ಹೌದು.. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರ ಕುಂಬಾಭಿಷೇಕ ನಡೆಯುತು. ದೇಶಾದ್ಯಂತ ಜನರು ರಾಮ ಮಂದಿರದ ಉದ್ಘಾಟನೆಯನ್ನು ಕಣ್ತುಂಬಿಕೊಂಡರು. ಇನ್ನು ಇದರ ಪ್ರಯುಕ್ತ ರಿಸರ್ವ್ ಬ್ಯಾಂಕ್ ಅಪ್‌ ಇಂಡಿಯಾ ಹೊಸ 500 ರೂಪಾಯಿ ನೋಟು ಬಿಡುಗಡೆ ಮಾಡಲಿದ್ದು, ಇದರಲ್ಲಿ ಶ್ರೀರಾಮನ ಫೋಟೋ ಇದೆ ಎನ್ನಲಾಗಿದೆ. 

ಇದನ್ನೂ ಓದಿ: ನಟ ಕಬೀರ್ ಬೇಡಿ ಆತ್ಮಕಥನಕ್ಕೆ ನಿರ್ಬಂಧ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಇನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ನೋಟಿನಲ್ಲಿ ಅಯೋಧ್ಯೆ ಶ್ರೀರಾಮ ಮತ್ತು ಶ್ರೀರಾಮ ಮಂದಿರದ ಚಿತ್ರಗಳಿದೆ. ಇನ್ನು ಮುಂದೆ ಗಾಂಧಿಜೀ ಬದಲಾಗಿ ರಾಮನ ಫೋಟೋ 500 ರೂ. ನೋಟಿನಲ್ಲಿ ಇರಲಿದೆ ಎನ್ನುವ ಸುದ್ದಿಯನ್ನು ಜನ ನಿಜವೆಂದು ನಂಬಿದ್ದಾರೆ.

ಇನ್ನು ಈ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಶ್ರೀರಾಮನ ಚಿತ್ರವಿರುವ ಹೊಸ 500 ರೂಪಾಯಿ ನೋಟುಗಳ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯಕ್ಕೆ ಬಿಡುಗಡೆಯಾಗಿರುವ ಮಾಹಿತಿಯ ಪ್ರಕಾರ ಶ್ರೀರಾಮನ ಚಿತ್ರಗಳೊಂದಿಗೆ ವೈರಲ್ ಆಗುತ್ತಿರುವ 500 ರೂ. ನೋಟು ನಕಲಿ ಎಂದು ಖಚಿತ ಪಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News