ನವದೆಹಲಿ: ಫಿಟ್‌ನೆಸ್ ಮತ್ತು ವರ್ಕೌಟ್‌ಗೆ ಸಂಬಂಧಿಸಿದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಜನರು ಕೂಡ ಅವುಗಳನ್ನು ನೋಡಲು ತುಂಬಾ ಇಷ್ಟಪಡುತ್ತಾರೆ. ಅಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಅದರಲ್ಲಿ ಮಹಿಳೆಯ ವರ್ಕೌಟ್ ಮಾಡುವ ವಿಧಾನ ಎಷ್ಟು ಅಪಾಯಕಾರಿ ಎಂದರೆ ನೀವು ಇಂತಹ ವರ್ಕೌಟ್ ಮಾಡಲು ಯೋಚಿಸುವುದೇ ಇಲ್ಲ. ಈ ವಿಡಿಯೋ ಗಿನ್ನಿಸ್ ವಿಶ್ವ ದಾಖಲೆ ವಿಜೇತ ಝೋರಾವರ್ ಸಿಂಗ್ ಸ್ಕಿಪ್ಪಿಂಗ್ ಗೆ ಸಂಬಂಧಿಸಿದ ಮತ್ತೊಂದು ಅಚ್ಚರಿಯ ವಿಧಾನವಾಗಿದೆ. ಆದರೆ, ವಿಡಿಯೋದಲ್ಲಿ ಅವರೊಬ್ಬರೇ ಇಲ್ಲ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಜೋರಾವರ್ ಸಿಂಗ್ ಜೊತೆಗೆ, ನೀವು ಅವರ ಪತ್ನಿ ಮತ್ತು ಪುತ್ರನನ್ನು ಸಹ ವೈರಲ್ ವೀಡಿಯೊದಲ್ಲಿ ನೋಡಬಹುದು. ಜೋರಾವರ್ ಮೊದಲು ನೆಲದ ಮೇಲೆ ಮಲಗಿರುವುದನ್ನು ನೀವು ನೋಡಬಹುದು. ಅದರ ನಂತರ ಅವರ ಪತ್ನಿ ಅವರ ಹೊಟ್ಟೆಯ ಮೇಲೆ ನಿಂತಿದ್ದಾಳೆ, ಬಳಿಕ ಪತ್ನಿ ಕೂಡ ತನ್ನ ಮಗನನ್ನು ತನ್ನ ಹೆಗಲ ಮೇಲೆ  ಕೂರಿಸುತ್ತಾಳೆ. ಇದರ ನಂತರ, ಅವಳು ಜೋರಾವರ್‌ನ ಹೊಟ್ಟೆಯ ಮೇಲೆ ನಿಂತು ಹಗ್ಗ ಜಿಗಿತದಾಟವಾಡಲು ಆರಂಭಿಸುತ್ತಾಳೆ. ಇಂಟರ್ನೆಟ್ ಬಳಕೆದಾರರು ಕುಟುಂಬದ ಈ ಸಾಹಸವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್  ನಲ್ಲಿ ಹಂಚಿಕೊಂಡು ಬರೆದುಕೊಂಡ ಜೋರಾವರ್ ಹುಚ್ಚುತನದ ಲೇವಲ್ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ-Viral Video: ಕಿಟಕಿಯ ಮೂಲಕ ಪ್ರಯಾಣಿಕನ ಫೋನ್ ಕಳ್ಳತನ ಮಾಡಲು ಹೋದ ಕಳ್ಳ, ಮುಂದೇನಾಯ್ತು ನೀವೇ ನೋಡಿ!


ಜೋರಾವರ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಅವರ ಫಿಟ್‌ನೆಸ್ ಚಾಲೆಂಜ್ ವೀಡಿಯೊಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. ಈ ವಿಡಿಯೋಗೆ 50 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಜನರು ತಮಾಷೆ ಭರಿತ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು- ಅವರು ದೇಶದ ನಿಜವಾದ ಮಾರ್ವೆಲ್ ಮ್ಯಾನ್ ಎಂದಿದ್ದಾರೆ. ಮತ್ತೊಬ್ಬರು- ಇದೆಲ್ಲವೂ ಲಸ್ಸಿಯ ಕಮಾಲ್ ಎಂದಿದ್ದಾರೆ.


ಇದನ್ನೂ ಓದಿ-Viral Video: ಭಾರಿ ಚಳಿಯಲ್ಲಿ ಸ್ಕೂಟಿ ಮೇಲೆ ಶಾಲು ಹೊತ್ತು ಹುಡುಗ-ಹುಡುಗಿ ರೋಮ್ಯಾನ್ಸ್, ವಿಡಿಯೋ ವೈರಲ್!


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ