Viral News: ಭಾರತೀಯ ರೈಲ್ವೇಯ ಪ್ರಯಾಣಿಕರ ಜೊತೆಗೆ ಆಗಾಗ್ಗೆ ಸಂಭವಿಸುವ ಘಟನೆಗಳು ಕೆಲವೊಮ್ಮೆ ಭಾರಿ ವೈರಲ್ ಆಗುತ್ತವೆ. ಕೆಲವೊಮ್ಮೆ ರೈಲು ಛಾವಣಿಯಿಂದ ಕಿಟಕಿ ಮತ್ತು ಗೇಟ್‌ಗೆ ಓವರ್‌ಲೋಡ್ ಆಗಿರುವುದು ಕಂಡರೆ, ಮತ್ತೆ ಕೆಲವೊಮ್ಮೆ ಪ್ರಯಾಣಿಕರು ತಮ್ಮ ಮನೆಯ ಅಂಗಳದಲ್ಲಿರುವಂತೆಯೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಲಕಳೆಯುವುದು ಕಂಡು ಬರುತ್ತದೆ. ಮುಂಬೈನ ಲೋಕಲ್ ನಲ್ಲಿ ಹುಡುಗರು ರೈಲು ಗೇಟ್‌ನಿಂದ ಜಿಗಿಯುವ ಮೂಲಕ ಸಾಹಸಗಳನ್ನು ಮಾಡುವುದನ್ನು ನೀವು ನೋಡಿರಬಹುದು, ಆದರೆ ಕೋಲವೊಮ್ಮೆ ಇಂತಹ ಕೆಲವು ದೃಶ್ಯಗಳು ಮೋಜು ಅಥವಾ ರೋಮಾಂಚನದ ಅನುಭವವನ್ನು ಬದಲು ಭಯಾನಕ ಅಥವಾ ಆಘಾತಕಾರಿ ಅನುಭವವನ್ನು ನೀಡುತ್ತವೆ. ಬಿಹಾರದ ಭಾಗಲ್ಪುರ್ ಮೂಲಕ ರೈಲು ಹಾದು ಹೋಗುವ ಒಂದು ರೈಲಿನಲ್ಲಿ ನಡೆದ ಒಂದು ಭಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದರಲ್ಲಿ ವ್ಯಕ್ತಿಯೊಬ್ಬ ರೈಲಿನ ಕಿಟಕಿಗೆ ನೇತಾಡುತ್ತಿರುವುದನ್ನು ನೀವು ನೋಡಬಹುದು (Viral News In Kannada).
ಇದನ್ನೂ ಓದಿ-Viral Video: ಭಾರಿ ಚಳಿಯಲ್ಲಿ ಸ್ಕೂಟಿ ಮೇಲೆ ಶಾಲು ಹೊತ್ತು ಹುಡುಗ-ಹುಡುಗಿ ರೋಮ್ಯಾನ್ಸ್, ವಿಡಿಯೋ ವೈರಲ್!
ಫೋನ್‌ಗಾಗಿ ಜೀವವನ್ನೇ ಅಪಾಯಕ್ಕೆ ದೂಡಿದ ವ್ಯಕ್ತಿ
ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಸಚ್ ಕಡ್ವಾ ಹೈ ವಿಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ನೀವು ಓಡುತ್ತಿರುವ ರೈಲನ್ನು ನೋಡಬಹುದು ಮತ್ತು ಆ ಚಲಿಸುವ ರೈಲಿನ ಕಿಟಕಿಗೆ ಒಬ್ಬ ವ್ಯಕ್ತಿ ನೇತಾಡುತ್ತಿರುವಂತೆ ಕಾಣಿಸುತ್ತಿದೆ. ಜನರು ಸಾಮಾನ್ಯವಾಗಿ ರೈಲಿನ ಗೇಟ್‌ನಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು, ಆದರೆ ಈ ವ್ಯಕ್ತಿಯು ಕಿಟಕಿಗೆ ನೇತಾಡುತ್ತಿರುವುದು ಕಂಡುಬರುವುದು ತುಂಬಾ ವಿರಳ, ಅಲ್ಲಿಂದ ಒಳಗೆ ಹೋಗುವುದು ತುಂಬಾ ಕಷ್ಟ. ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಇನ್‌ಸ್ಟಾಗ್ರಾಮ್ ಬಳಕೆದಾರರು ಶೀರ್ಷಿಕೆಯಲ್ಲಿ ಅದರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಅಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ಈ ವೀಡಿಯೊ ಬಿಹಾರದ ಭಾಗಲ್‌ಪುರ ಮೂಲಕ ಹಾದುಹೋಗುವ ರೈಲಿನದ್ದಾಗಿದೆ. ಈ ವ್ಯಕ್ತಿಯು ಕಿಟಕಿಯ ಬಳಿ ಕುಳಿತಿದ್ದ ಮಹಿಳೆಯ ಮೊಬೈಲ್ ಫೋನ್ ಅನ್ನು ಕದಿಯಲು ಪ್ರಯತ್ನಿಸುತ್ತಿದ್ದನು ಎನ್ನಲಾಗಿದೆ, ಆದರೆ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಅವನನ್ನು ಹಿಡಿದಿದ್ದಾರೆ.
ಕಳ್ಳ ಒಂದು ಕಿಲೋಮೀಟರ್ ನೇತಾಡಿದ್ದಾನೆ
ರೈಲು ಒಂದು ಕಿಲೋಮೀಟರ್ ದೂರವನ್ನು ಕ್ರಮಿಸುವವರೆಗೂ ರೈಲಿನೊಳಗೆ ಕುಳಿತಿದ್ದ ಜನರು ಆತನನ್ನು ಹಿಡಿದುಕೊಂಡಿದ್ದಾರೆ. ಆ ನಂತರ ಹಿಂಬದಿಯಿಂದ ಕೆಲವರು ಓಡಿ ಬಂದು ಆ ವ್ಯಕ್ತಿಯನ್ನು ಥಳಿಸಲು ಮುಂದಾದಾಗ ಆತನನ್ನು ಪ್ರಯಾಣಿಕರು ಬಿಟ್ಟಿದ್ದಾರೆ. ಆದಾಗ್ಯೂ, ಆ ಜನರು ಅವನ ಸಹಚರರು ಎಂದು ಹೇಳಲಾಗುತ್ತಿದೆ. ಅವನಿಗೆ ಪಾಠ ಕಲಿಸುತ್ತಿರುವಂತೆ ಅವರು ನಟಿಸಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ