ಬಾಂಗ್ಲಾದೇಶದಲ್ಲಿ ಕಂಟೈನರ್ ಡಿಪೋದಲ್ಲಿ ಅಗ್ನಿ ದುರಂತ: 25 ಜನ ದುರ್ಮರಣ, 450ಕ್ಕೂ ಹೆಚ್ಚು ಮಂದಿಗೆ ಗಾಯ
ಬಾಂಗ್ಲಾದೇಶದ ಚಿತ್ತಗಾಂಗ್‌ನ ಸೀತಾಕುಂಡ ಉಪಜಿಲಾದಲ್ಲಿರುವ ಖಾಸಗಿ ಕಂಟೈನರ್ ಡಿಪೋದಲ್ಲಿ ಶನಿವಾರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 25 ಜನ ಅಸುನೀಗಿದ್ದಾರೆ ಮತ್ತು 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದ ಚಿತ್ತಗಾಂಗ್‌ನ ಸೀತಾಕುಂಡ ಉಪಜಿಲಾದಲ್ಲಿರುವ ಖಾಸಗಿ ಕಂಟೈನರ್ ಡಿಪೋದಲ್ಲಿ ಶನಿವಾರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 25 ಜನ ಅಸುನೀಗಿದ್ದಾರೆ ಮತ್ತು 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: NRIಗಳಿಗೆ ಮಾಹಿತಿ: ಭಾರತದಲ್ಲಿ ಮಾಡಿದ ಹೂಡಿಕೆಗೆ ತೆರಿಗೆ ಸಲ್ಲಿಸುವಾಗ ತ್ವರಿತ ಮಾರ್ಗದರ್ಶಿ ಪಾಲಿಸಿ
ಬಾಂಗ್ಲಾದೇಶದ ಪ್ರಮುಖ ಬಂದರು ಚಿತ್ತಗಾಂಗ್‌ನ ಹೊರಗೆ 40 ಕಿಲೋಮೀಟರ್ ದೂರದಲ್ಲಿರುವ ದೇಶೀಯ ಕಂಟೇನರ್ ಸಂಗ್ರಹಣಾ ಘಟಕದಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಮುನ್ನವೇ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಬೆಂಕಿ ಮತ್ತಷ್ಟು ವ್ಯಾಪಿಸಿತು ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಎಸ್‌ಐ ನೂರುಲ್ ಆಲಂ ತಿಳಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡರೂ, ಹಲವು ಗಂಟೆಗಳ ನಂತರ ರಾತ್ರಿ 11:45 ಕ್ಕೆ ಭಾರೀ ಸ್ಫೋಟ ಸಂಭವಿಸಿದೆ. ಇದರ ಬೆನ್ನಲ್ಲೇ ಕಂಟೈನರ್ ಒಂದರಲ್ಲಿ ರಾಸಾಯನಿಕ ಅಂಶವಿದ್ದ ಕಾರಣ ಬೆಂಕಿ ಒಂದು ಕಂಟೇನರ್ ನಿಂದ ಮತ್ತೊಂದು ಕಂಟೇನರ್ ಗೆ ವ್ಯಾಪಿಸಿದೆ. ರೆಡ್ ಕ್ರೆಸೆಂಟ್ ಯೂತ್ ಚಿತ್ತಗಾಂಗ್‌ನ ಆರೋಗ್ಯ ಮತ್ತು ಸೇವಾ ವಿಭಾಗದ ಮುಖ್ಯಸ್ಥ ಇಸ್ತಾಕುಲ್ ಇಸ್ಲಾಂ ಅವರು ಬಾಂಗ್ಲಾದೇಶದ ಸ್ಥಳೀಯ ಮಾಧ್ಯಮಕ್ಕೆ ಸಾವುಗಳನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ರಸ್ತೆಗೆ ಇಳಿಯಿತು 260 ವರ್ಷ ಹಳೆಯ ಗೋಲ್ಡನ್ ರಥ: ಚಿನ್ನದ ತೇರಿನ ವಿಶೇಷತೆ ಏನ್ ಗೊತ್ತಾ!
ಮೂಲಗಳ ಪ್ರಕಾರ, ಸ್ಫೋಟವು ನೆರೆಹೊರೆಯವರನ್ನು ಬೆಚ್ಚಿಬೀಳಿಸಿದೆ ಮತ್ತು ಹತ್ತಿರದ ಮನೆಗಳ ಕಿಟಕಿಗಳ ಗಾಜುಗಳು ಒಡೆದುಹೋಗಿವೆ. ಚಿತ್ತಗಾಂಗ್ ಅಗ್ನಿಶಾಮಕ ಸೇವೆ ಮತ್ತು ಸಿವಿಲ್ ಡಿಫೆನ್ಸ್ ಸಹಾಯಕ ನಿರ್ದೇಶಕ ಎಂಡಿ ಫಾರೂಕ್ ಹೊಸೈನ್ ಸಿಕ್ದರ್ ಪ್ರಕಾರ, ಸುಮಾರು 19 ಅಗ್ನಿಶಾಮಕ ಘಟಕಗಳು ಬೆಂಕಿಯನ್ನು ನಂದಿಸಲು ಕೆಲಸ ಮಾಡುತ್ತಿವೆ ಮತ್ತು ಆರು ಆಂಬ್ಯುಲೆನ್ಸ್‌ಗಳು ಸಹ ಸ್ಥಳದಲ್ಲಿ ಲಭ್ಯವಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.