ರಸ್ತೆಗೆ ಇಳಿಯಿತು 260 ವರ್ಷ ಹಳೆಯ ಗೋಲ್ಡನ್‌ ರಥ: ಚಿನ್ನದ ತೇರಿನ ವಿಶೇಷತೆ ಏನ್‌ ಗೊತ್ತಾ!

ಇಂಗ್ಲೆಂಡ್ ಸಿಂಹಾಸನದ ರಾಣಿ ಎಲಿಜಬೆತ್ II ಅವರು ತಮ್ಮ ಆಳ್ವಿಕೆ ಪ್ರಾರಂಭಿಸಿ 70 ವರ್ಷಗಳು ಕಳೆದಿದೆ. ಈ ಸಂದರ್ಭದಲ್ಲಿ, ಅದರ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರಾಣಿಯ ಪ್ಲಾಟಿನಂ ಜುಬಿಲಿ ಆಚರಣೆಗಳನ್ನು ಗುರುತಿಸಲು ನಡೆಯುತ್ತಿರುವ ನಾಲ್ಕು ದಿನಗಳ ಮೆರವಣಿಗೆಯ ಎರಡನೇ ದಿನದಂದು 'ಥ್ಯಾಂಕ್ಸ್‌ಗಿವಿಂಗ್' ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ 20 ವರ್ಷಗಳ ನಂತರ ರಾಣಿಯ ಈ ವಿಶೇಷ ಚಿನ್ನದ ರಥ ಬೀದಿಗಿಳಿದಿದೆ.

Written by - Bhavishya Shetty | Last Updated : Jun 4, 2022, 09:49 AM IST
  • ರಾಣಿ ಎಲಿಜಬೆತ್ II ಆಳ್ವಿಕೆ ಪ್ರಾರಂಭಿಸಿ 70 ವರ್ಷ ಪೂರ್ಣ
  • ಲಂಡನ್‌ನಲ್ಲಿ ಗ್ರ್ಯಾಂಡ್‌ ಪ್ಲಾಟಿನಂ ಜುಬಿಲಿ ಆಚರಣೆ
  • ಬ್ರಿಟನ್‌ನ ಬೀದಿಗಳಲ್ಲಿ ಚಿನ್ನದ ರಥದ ಅಬ್ಬರ
ರಸ್ತೆಗೆ ಇಳಿಯಿತು 260 ವರ್ಷ ಹಳೆಯ ಗೋಲ್ಡನ್‌ ರಥ: ಚಿನ್ನದ ತೇರಿನ ವಿಶೇಷತೆ ಏನ್‌ ಗೊತ್ತಾ! title=
Gold state coach

ಬ್ರಿಟನ್‌ನಲ್ಲಿ ರಾಣಿ ಎಲಿಜಬೆತ್ II ರ ಆಳ್ವಿಕೆಯ 70 ವರ್ಷಗಳ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಬ್ರಿಟನ್‌ನ ಬೀದಿಗಳಲ್ಲಿ ಚಿನ್ನದ ರಥವನ್ನು ಓಡಿಸಲಾಗಿತ್ತು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿ ನೋಡಿದ್ದಾರೆ. ಅದು 260 ವರ್ಷ ಹಳೆಯ ಚಿನ್ನದ ರಥವಾಗಿದ್ದು, 1953 ರಲ್ಲಿ ಪಟ್ಟಾಭಿಷೇಕದ ದಿನದಂದು ಯುವ ರಾಣಿ ಬಕಿಂಗ್ಹ್ಯಾಮ್ ಅರಮನೆಯಿಂದ ವೆಸ್ಟ್ಮಿನಿಸ್ಟರ್ ಪ್ಯಾಲೇಸ್‌ಗೆ ಅದೇ ರಥದಲ್ಲಿ ಆಗಮಿಸಿದ್ದರು. ಗೋಲ್ಡ್ ಸ್ಟೇಟ್ ಕೋಚ್ ಎಂಬ ಹೆಸರಿನ ಈ ರಥವು ಈಗ ಲಂಡನ್‌ನಲ್ಲಿ ಭಾನುವಾರ ನಡೆಯಲಿರುವ ಪ್ಲಾಟಿನಂ ಜುಬಿಲಿ ಪರೇಡ್ ಅನ್ನು ಮುನ್ನಡೆಸಲಿದೆ.

ಇದನ್ನು ಓದಿ: ಯಾರು ಈ ಭಾರತೀಯ ಮೂಲದ ಹರಿಣಿ ಲೋಗನ್?

ಇಂಗ್ಲೆಂಡ್ ಸಿಂಹಾಸನದ ರಾಣಿ ಎಲಿಜಬೆತ್ II ಅವರು ತಮ್ಮ ಆಳ್ವಿಕೆ ಪ್ರಾರಂಭಿಸಿ 70 ವರ್ಷಗಳು ಕಳೆದಿದೆ. ಈ ಸಂದರ್ಭದಲ್ಲಿ, ಅದರ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರಾಣಿಯ ಪ್ಲಾಟಿನಂ ಜುಬಿಲಿ ಆಚರಣೆಗಳನ್ನು ಗುರುತಿಸಲು ನಡೆಯುತ್ತಿರುವ ನಾಲ್ಕು ದಿನಗಳ ಮೆರವಣಿಗೆಯ ಎರಡನೇ ದಿನದಂದು 'ಥ್ಯಾಂಕ್ಸ್‌ಗಿವಿಂಗ್' ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ 20 ವರ್ಷಗಳ ನಂತರ ರಾಣಿಯ ಈ ವಿಶೇಷ ಚಿನ್ನದ ರಥ ಬೀದಿಗಿಳಿದಿದೆ. ಇದರ ವಿಶೇಷತೆ ಕುರಿತು ಹೇಳುವುದಾದರೆ, ನಾಲ್ಕು ಟನ್ ತೂಕದ ರಥವು 7 ಮೀಟರ್ ಉದ್ದ ಮತ್ತು 3.6 ಮೀಟರ್ ಎತ್ತರವಿದೆ. ಇದನ್ನು 8 ಕುದುರೆಗಳ ಸಹಾಯದಿಂದ ಎಳೆಯಲಾಗುತ್ತದೆ. ಈ ಭವ್ಯ ರಥದ ಮೇಲೆ ಕನಿಷ್ಠ ಏಳು ಪದರಗಳ ಚಿನ್ನವನ್ನು ಲೇಪಿಸಲಾಗಿದೆ. ಈ ವಿಶೇಷ ರಥವನ್ನು ಕಿಂಗ್ ಜಾರ್ಜ್ (III) ರ ವಾಸ್ತುಶಿಲ್ಪದ ಸಲಹೆಗಾರ ಸರ್ ವಿಲಿಯಂ ಚೇಂಬರ್ಸ್ ವಿನ್ಯಾಸಗೊಳಿಸಿದರು. ಸ್ಯಾಮ್ಯುಯೆಲ್ ಬಟ್ಲರ್ ನಿರ್ಮಿಸಿದರು.

ಇಂದು ಪ್ಲಾಟಿನಂ ಜುಬಿಲಿ ಆಚರಣೆಯ ಮೂರನೇ ದಿನ. ಇದಲ್ಲದೆ, ಯುಕೆಯಲ್ಲಿನ ಅತಿದೊಡ್ಡ ಚರ್ಚ್ ಬೆಲ್, 16-ಟನ್ ಗ್ರೇಟ್ ಪಾಲ್ ಈವೆಂಟ್ ನಂತರ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಸದ್ದು ಮಾಡಲಿದೆ. ಪ್ರಿನ್ಸ್ ಆಫ್ ವೇಲ್ಸ್, ಡಚೆಸ್ ಆಫ್ ಕಾರ್ನ್‌ವಾಲ್ ಮತ್ತು ಕೇಂಬ್ರಿಡ್ಜ್‌ನ ಡ್ಯೂಕ್ ಮತ್ತು ಡಚೆಸ್ ಸೇರಿದಂತೆ ಹಿರಿಯ ರಾಜಮನೆತನದವರು ಭಾಗವಹಿಸಲಿದ್ದಾರೆ, ಪ್ರಿನ್ಸ್ ಚಾರ್ಲ್ಸ್ ಅಧಿಕೃತವಾಗಿ ರಾಣಿಯನ್ನು ಪ್ರತಿನಿಧಿಸಿಲಿದ್ದಾರೆ. ಎರಡು ವರ್ಷಗಳ ಹಿಂದೆ ಬ್ರಿಟನ್ ತೊರೆದಿದ್ದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅವರಿಗೆ ಇದು ಮೊದಲ ರಾಯಲ್ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಸಹಾಯ ಮಾಡಿದ ಎಲ್ಲಾ ಜನರು ಮತ್ತು ಅತಿಥಿಗಳಿಗೆ ರಾಣಿ ಎಲಿಜಬೆತ್ (ಎರಡನೇ) ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಚಿನ್ನದ ರಥದ ಬಗ್ಗೆ ಹೇಳುವುದಾದರೆ, ಈ ವಿಶೇಷ ವಿವಿಐಪಿ ರಥವನ್ನು ಮರದಿಂದ ಮಾಡಲಾಗಿದ್ದು, ಅದರ ಮೇಲೆ ಚಿನ್ನದ ಲೇಪನ ಮಾಡಲಾಗಿದೆ. ರಾಣಿಯ 70 ವರ್ಷಗಳ ಆಳ್ವಿಕೆಯನ್ನು ಆಚರಿಸುವ 4 ದಿನಗಳ ಕಾರ್ಯಕ್ರಮ ಗುರುವಾರ ಪ್ರಾರಂಭವಾಗಿದೆ. ಈ ಚಿನ್ನದ ರಥವು ಪ್ಲಾಟಿನಂ ಜುಬಿಲಿ ಆಚರಣೆಯ ಮೆರವಣಿಗೆಯನ್ನು ಮುನ್ನಡೆಸುತ್ತದೆ.

ಚಿನ್ನದ ರಥವು ನೋಟದಲ್ಲಿ ಒಂದು ಕಾಲ್ಪನಿಕ ಕಥೆಯಂತಿದೆ. ರಾಜ ರಥವು ಐತಿಹಾಸಿಕ ಕಲೆಯ ಜೀವಂತ ಉದಾಹರಣೆಯಾಗಿದೆ. ಗೋಲ್ಡ್ ಸ್ಟೇಟ್ ಕೋಚ್ ಹೊರಗಿನಿಂದ ಎಷ್ಟು ಸುಂದರವಾಗಿದೆಯೋ, ಅದರ ಒಳಾಂಗಣವೂ ಅಷ್ಟೇ ಸುಂದರವಾಗಿದೆ. 

ಇದನ್ನು ಓದಿ: ತಾಲಿಬಾನ್ ಜೊತೆ ಭಾರತ ಮಹತ್ವದ ರಾಜತಾಂತ್ರಿಕ ಮಾತುಕತೆ

ಭಾನುವಾರ ಸಮಾರಂಭದ ಕೊನೆಯ ದಿನದಂದು ನಡೆಯುವ ಮೆರವಣಿಗೆಯಲ್ಲಿ ರಾಣಿ ಅದರ ಮೇಲೆ ಸವಾರಿ ಮಾಡುವುದಿಲ್ಲ. ಬದಲಾಗಿ, ಅವರು ಮೊದಲು ಪಟ್ಟಾಭಿಷೇಕ ಮಾಡಿದ ದಿನದ ವೀಡಿಯೊ ತುಣುಕನ್ನು ವಾಹನದ ಕಿಟಕಿಗಳ ಮೇಲೆ ಪ್ರೊಜೆಕ್ಟರ್‌ಗಳ ಮೂಲಕ ತೋರಿಸಲಾಗುತ್ತದೆ. ಎಲಿಜಬೆತ್ II 96 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಎಲಿಜಬೆತ್ ತನ್ನ 25 ವರ್ಷ ವಯಸ್ಸಿನಲ್ಲಿ ರಾಣಿ ಪಟ್ಟಕ್ಕೇರಿದವರು. 7 ದಶಕಗಳಿಂದ ಈ ಹುದ್ದೆಯನ್ನು ಸಂಪೂರ್ಣ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿರುವ ಇವರು ಅತಿ ಹೆಚ್ಚು ಕಾಲ ಈ ಸಿಂಹಾಸನವನ್ನು ಹಿಡಿದ ವ್ಯಕ್ತಿಯಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News