ಕರೋನಾ ಹಾವಳಿಗೆ ಅಮೇರಿಕಾದಲ್ಲಿ ಒಂದೇ ದಿನ 2,108 ಬಲಿ, ಜಗತ್ತಿನಾದ್ಯಂತ 1,02,696ಕ್ಕೆ ಏರಿದ ಸಾವಿನ ಸಂಖ್ಯೆ
ಅಮೇರಿಕಾ ಹೊರತುಪಡಿಸಿ ಉಳಿದೆಲ್ಲಾ ದೇಶಗಳಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಕಡಿಮೆ ಇದೆ.
ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೊನಾವೈರಸ್ (Coronavirus) ಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವುಳ್ಳ ಅಮೇರಿಕಾದಲ್ಲಿ ನಿನ್ನೆ ಒಂದೇ ದಿನ 2,108 ಸಾವುಗಳು ಸಂಭವಿಸಿವೆ. ಕೊರೋನಾ ಮಹಾಮಾರಿಗೆ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಇದೇ ಮೊದಲಾಗಿದೆ. ಜಗತ್ತಿನಾದ್ಯಂತ ಈಗ ಕರೋನಾದಿಂದ ಸತ್ತವರ ಸಂಖ್ಯೆ 1.2,696ಕ್ಕೆ ಏರಿಕೆಯಾಗಿದೆ. ಅಲ್ಲದೆ ವಿಶ್ವದಾದ್ಯಂತ ಕೊರೋನಾ ಸೋಂಕು ಪೀಡಿತರ ಸಂಖ್ಯೆ 1,699,630ಕ್ಕೆ ಏರಿಕೆಯಾಗಿದೆ.
ಆರಂಭದಲ್ಲಿ ಸ್ವಲ್ಪ ಎಡವಿದರೂ ಕರೋನಾ ಎಂಬ ಸುನಾಮಿ ಅಪ್ಪಳಿಸುತ್ತಿದ್ದಂತೆ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಅಮೆರಿಕ(America)ದಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ ನಿಯಂತ್ರಣ ಆಗುತ್ತಿಲ್ಲ. ಕರೋನಾದಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ಕಮ್ಮಿ ಆಗುತ್ತಿಲ್ಲ. ಇದೇ ಮೊದಲ ಬಾರಿಗೆ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಜನ ಸಾವೀಗೀಡಾಗಿರುವುದು ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಚೀನಾಕ್ಕೆ ಛೀಮಾರಿ ಹಾಕಿದ ಭಾರತ
ಅಮೇರಿಕಾದಲ್ಲಿ ಸದ್ಯ 5,02,318 ಜನ ಕೊರೋನಾ ಸೋಂಕು ಪೀಡಿತರಿದ್ದಾರೆ. ಈ ಪೈಕಿ ನಿನ್ನೆ ಒಂದೇ ದಿನ 33,752 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅಲ್ಲಿ ಈಗಾಗಲೇ ಒಟ್ಟು 18,725 ಜನ ಕೊರೋನಾದಿಂದ ಸತ್ತಿದ್ದು ನಿನ್ನೆ ಒಂದು ದಿನ 3,108 ಜನ ಮೃತಪಟ್ಟಿದ್ದಾರೆ. ಇದರಿಂದಾಗಿ ಅಮೆರುಕಾವು ಕೊರೋನಾದಿಂದ ಸತ್ತವರ ಸಂಖ್ಯೆಯಲ್ಲಿ ಈಗ ಇಟಲಿ ಬಳಿ ಬಂದಿದೆ.
ಈವರೆಗೆ ಕೊರೋನಾದಿಂದ ಇಟಲಿ (Italy) ಯಲ್ಲಿ ಸತ್ತವರ ಸಂಖ್ಯೆ 18,849 ಆದರೆ ಅಮೆರಿಕಾದಲ್ಲಿ ಸತ್ತವರ ಸಂಖ್ಯೆ 18,725. ಮೂರನೇ ಸ್ಥಾನದಲ್ಲಿರುವ ಸ್ಪೇನ್ (Spain)ನಲ್ಲಿ 16,081 ಜನರು ಕೊರೋನಾಗೆ ಬಲಿಯಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಫ್ರಾನ್ಸ್ ನಲ್ಲಿ 13,197 ಜನ ಮೃತಪಟ್ಟಿದ್ದಾರೆ. ಐದನೇ ಸ್ಥಾನದಲ್ಲಿರುವ ಇಂಗ್ಲೆಂಡಿನಲ್ಲಿ 8,958 ಜನರ ಸಾವಾಗಿದೆ. ಕೊರೋನಾದ ತವರು ಚೀನಾ ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಮತ್ತು ಸಾವಿನ ಸಂಖ್ಯೆ ಕಡಿಮೆ ಆಗಿದೆ. ಅಲ್ಲಿ ಸತ್ತವರ ಸಂಖ್ಯೆ ಈಗ 3,339.
ಕೊರೋನಾ ವಿರುದ್ಧ ಹೋರಾಟಕ್ಕೆ 1 ಬಿಲಿಯನ್ ದೇಣಿಗೆ ನೀಡಿದ ಟ್ವಿಟರ್ ಓನರ್ ಜಾಕ್ ಡಾರ್ಸೆ
ಆದರೆ ಅಮೇರಿಕಾ ಹೊರತುಪಡಿಸಿ ಉಳಿದೆಲ್ಲಾ ದೇಶಗಳಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಕಡಿಮೆ ಇದೆ. ಅಮೇರಿಕಾದಲ್ಲಿ ಸದ್ಯ 5,02,318 ಜನ ಇದ್ದರೆ, ಇಟಲಿಯಲ್ಲಿ 147,577, ಸ್ಪೇನ್ ನಲ್ಲಿ 158,273, ಫ್ರಾನ್ಸ್ ನಲ್ಲಿ 124,869, ಇಂಗ್ಲೆಂಡಿನಲ್ಲಿ 73,758, ಚೀನಾದಲ್ಲಿ 81,953 ಮತ್ತು ಭಾರತದಲ್ಲಿ 7,600.