ಮೊಗದಿಶು: ಸೊಮಾಲಿಯಾದ ರಾಜಧಾನಿ ಮೊಗದಿಶುನಲ್ಲಿ ಶನಿವಾರ ತನಿಖಾ ಕೇಂದ್ರದ ಬಳಿ ಕಾರ್ ಬಾಂಬ್ ಸ್ಫೋಟಗೊಂಡು 25 ಜನರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ ಕ್ಸಿನ್ಹುವಾ ಪ್ರಕಾರ, ಸರ್ಕಾರಿ ವಕ್ತಾರ ಇಸ್ಮಾಯಿಲ್ ಮುಖ್ತಾರ್ ಒಮರ್ ಅವರು ಅಫ್ಗೊಯ್ ರಸ್ತೆಯ ಪೊಲೀಸ್ ಚೆಕ್ ಪೋಸ್ಟ್ ಬಳಿ ಆತ್ಮಾಹುತಿ ಬಾಂಬರ್ ತನ್ನ ವಾಹನವನ್ನು ಸ್ಫೋಟಿಸಿದ್ದಾರೆ ಎಂದು ಹೇಳಿದರು.


ದಾಳಿಯಲ್ಲಿ ಅನೇಕ ವಿದ್ಯಾರ್ಥಿಗಳು ಸೇರಿದಂತೆ 25 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಅವರು ಖಚಿತಪಡಿಸಿದ್ದಾರೆ.


ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತೆರಿಗೆ ಕಚೇರಿಯನ್ನು ಗುರಿಯಾಗಿಸಿ ಈ ಸ್ಫೋಟ ನಡೆಸಲಾಗಿದೆ ಎಂದು ಹೇಳಿದರು.


ರಸ್ತೆಯ ಮೂಲಕ ಹಾದುಹೋಗುವ ವಾಹನಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ, ಒಂದು ಕಾರು ಸ್ಫೋಟಗೊಂಡು ಅನೇಕ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಕೂಡ ಯಾವುದೇ ಭಯೋತ್ಪಾದನಾ ಸಂಘಟನೆ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ ಎನ್ನಲಾಗಿದೆ.


ಸುದ್ದಿ ಸಂಸ್ಥೆ ಎಫೆ ಪ್ರಕಾರ, 2012 ರಲ್ಲಿ ಅಲ್ ಖೈದಾಗೆ ನಿಷ್ಠೆ ತೋರಿದ ಅಲ್ ಶಬಾಬ್ ಎಂಬ ಭಯೋತ್ಪಾದಕ ಸಂಘಟನೆಯು ಮೊಗದಿಶುದಲ್ಲಿ ಪದೇ ಪದೇ ದಾಳಿ ನಡೆಸಿದೆ. ಮಧ್ಯ ಮತ್ತು ದಕ್ಷಿಣ ಸೊಮಾಲಿಯಾದ ಕೆಲವು ಭಾಗಗಳಲ್ಲಿ ಅಲ್ ಖೈದಾ ತನ್ನ ನಿಯಂತ್ರಣವನ್ನು ಹೊಂದಿದೆ.