ಬೀಜಿಂಗ್: ಮೊದಲೇ  ಕರೋನಾವೈರಸ್ನಿಂದಾಗಿ ತತ್ತರಿಸಿರುವ ಚೀನಾ (China) ದಲ್ಲಿ ಪ್ರವಾಹ ಒಂದು ರೀತಿಯ ಭೀತಿ ಸೃಷ್ಟಿಸಿತ್ತು. ಇದೀಗ ನಿನ್ನೆ ಮಧ್ಯಾಹ್ನ 1:37ರ ಸುಮಾರಿಗೆ 6.2 ತೀವ್ರತೆಯ ಭೂಕಂಪ (Earthquake) ಚೀನಾವನ್ನು ಬೆಚ್ಚಿ ಬೀಳುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ದಕ್ಷಿಣ ಟಿಬೆಟ್‌ಗೆ ಸಮೀಪ ಸಂಭವಿಸಿರುವ ಭೂಕಂಪದಲ್ಲಿ ಯಾವುದೇ ಆಸ್ತಿ-ಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಗಳಿಲ್ಲ. ಆದರೆ ಇಲ್ಲಿಂದ ಸುಮಾರು 380 ಮೈಲಿ ದೂರದಲ್ಲಿರುವ ಕಠ್ಮಂಡುವಿನಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ. 


ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿರುವ ಭೂಕಂಪದಿಂದಾಗಿ ಭಯಭೀತರಾದ ಜನರು ಮನೆಗಳಿಂದ ಹೊರಗೆ ಬಂದಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.


2 ತಿಂಗಳಲ್ಲಿ 13 ಬಾರಿ ಭೂಮಿಯ ಕಂಪನ ದೊಡ್ಡ ಭೂಕಂಪದ ಸಂಕೇತವೇ?


ಈ ಹಿಂದೆ ಅಲಾಸ್ಕಾ ಪರ್ಯಾಯ ದ್ವೀಪದಲ್ಲಿ 7.8 ತೀವ್ರತೆಯ ಭೂಕಂಪನ ಸಂಭವಿಸಿತ್ತು ಅದರ ನಂತರ ಸುನಾಮಿ ಎಚ್ಚರಿಕೆ ನೀಡಲಾಯಿತು. ಆದರೆ ನಂತರ ಅದನ್ನು ರದ್ದುಪಡಿಸಲಾಯಿತು. ಅದೇ ಸಮಯದಲ್ಲಿ ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಮಂಗಳವಾರ ರಾತ್ರಿ 11.12 ಕ್ಕೆ ಪೆಸಿಫಿಕ್ ನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಅಲಾಸ್ಕಾದ ಆಗ್ನೇಯಕ್ಕೆ 96 ಕಿಲೋಮೀಟರ್ ದೂರದಲ್ಲಿರುವ 9.6 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿತ್ತು.


ಭೂಕಂಪದ ನಂತರ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ದಕ್ಷಿಣ ಅಲಾಸ್ಕಾ, ಅಲಾಸ್ಕನ್ ಪೆನಿನ್ಸುಲಾ ಮತ್ತು ಅಲ್ಯೂಟೇನ್‌ಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದು ಬುಧವಾರ ತಿಳಿಸಿದೆ. ಆದರೆ ನಂತರ ಅದನ್ನು ರದ್ದುಪಡಿಸಲಾಗಿದೆ. ಅಲಾಸ್ಕಾದ ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದರೆ ಅದು ಕೇಂದ್ರಬಿಂದುವಿನಿಂದ 400 ಮೈಲಿ ದೂರದಲ್ಲಿದೆ. ಸ್ಥಳೀಯ ಜನರ ಪ್ರಕಾರ ಭೂಕಂಪದ ಸಮಯದಲ್ಲಿ ಹಾಸಿಗೆಗಳು ಮತ್ತು ಪರದೆಗಳು ನಡುಗುತ್ತಿದ್ದವು. ಇದರ ನಂತರ ನಡುಕ ಉಂಟಾಯಿತು. ಇದರ ತೀವ್ರತೆ 5.7 ರಷ್ಟಿತ್ತು ಎಂದು ತಿಳಿದುಬಂದಿದೆ.