Earthquake In Turkey: ಟರ್ಕಿಯಲ್ಲಿ ಸೋಮವಾರ ಬೆಳಿಗ್ಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 04:17ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಗಾಜಿಯಾಂಟೆಪ್ ಬಳಿ 17.9 ಕಿಲೋಮೀಟರ್  ಆಳದಲ್ಲಿದೆ ಎಂದು ಹೇಳಲಾಗಿದೆ. ಗಾಜಿಯಾಂಟೆಪ್‌ನ ದಕ್ಷಿಣ ಪ್ರದೇಶ -- ಟರ್ಕಿಯ ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ಸಿರಿಯಾದ ಗಡಿಯಾಗಿದೆ. ಎಎಫ್‌ಪಿ ವರದಿಗಾರರ ಪ್ರಕಾರ ಲೆಬನಾನ್, ಸಿರಿಯಾ ಮತ್ತು ಸೈಪ್ರಸ್‌ನಲ್ಲಿ ಕಂಪನದ ಅನುಭವವಾಗಿದೆ.


ಇದನ್ನೂ ಓದಿ- Chinese Balloon: ಚೀನಾದ ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ..!


ಮಾಧ್ಯಮ ವರದಿಗಳ ಪ್ರಕಾರ, ಈ ತೀವ್ರ ಭೂಕಂಪದಿಂದಾಗಿ ಅನೇಕ ಕಟ್ಟಡಗಳು ನೆಲಕ್ಕುರುಳಿವೆ. ಇದರೊಂದಿಗೆ ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Viral News: ಹಲ್ಲಿನಿಂದ ಕಚ್ಚಿ ಹೆಬ್ಬಾವಿನ ತಲೆಯನ್ನು ಅದರ ದೇಹದಿಂದ ಬೇರ್ಪಡಿಸಿದ ವ್ಯಕ್ತಿ ..ಮುಂದೇನಾಯ್ತು ಗೊತ್ತಾ?


ಆದಾಗ್ಯೂ, ಟರ್ಕಿಯ ಆಡಳಿತವು ಈ ಭೂಕಂಪದ ಬಗ್ಗೆ ಮತ್ತು ಯಾವುದೇ ಹಾನಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಬಗ್ಗೆ ಕಾಣಬಹುದಾಗಿದೆ.


https://bit.ly/3hDyh4G


Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.