ಯಾರ್ರೀ ಇವಾ…ಬಾಳೆಹಣ್ಣಿಗೆ Condom ಹಾಕಿ ನುಂಗಿದ ಭೂಪ!! ಮುಂದಾಗಿದ್ದೇನು ನೋಡಿದ್ರೆ ಶಾಕ್ ಆಗ್ತೀರ

Man Swallows Banana Wrapped Condom: ಡೈಲಿ ಮೇಲ್ ವರದಿಯ ಪ್ರಕಾರ, ಈ ಘಟನೆಯ ಬಗ್ಗೆ ವೈದ್ಯಕೀಯ ಅಧ್ಯಯನದ ಮೂಲಕ ದೃಢಪಡಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಗುರುತು ಮರೆಮಾಚಲಾಗಿದೆ. ಆದರೆ, ಎಕ್ಸ್-ರೇ ಚಿತ್ರಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರ ತೆಗೆದ ಚಿತ್ರಗಳು ಮುನ್ನೆಲೆಗೆ ಬಂದಿವೆ.

Written by - Bhavishya Shetty | Last Updated : Jan 30, 2023, 08:59 PM IST
    • ಕಾಂಡೋಮ್ ಇದ್ದ ಬಾಳೆಹಣ್ಣನ್ನು ತಿಂದ ಅಮೆರಿಕದ ವ್ಯಕ್ತಿ
    • 35 ವರ್ಷದ ಈ ವ್ಯಕ್ತಿ ಕೋಪದಿಂದ ಈ ಕೆಲಸ ಮಾಡಿದ್ದಾನೆ
    • ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾನೆ
ಯಾರ್ರೀ ಇವಾ…ಬಾಳೆಹಣ್ಣಿಗೆ Condom ಹಾಕಿ ನುಂಗಿದ ಭೂಪ!! ಮುಂದಾಗಿದ್ದೇನು ನೋಡಿದ್ರೆ ಶಾಕ್ ಆಗ್ತೀರ title=
condom

Man Swallows Banana Wrapped Condom: ಅನೇಕ ಬಾರಿ ಆಕಸ್ಮಿಕವಾಗಿ ಏನಾದರೂ ತಿಂದು ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯಿಂದ ಹೊರತೆಗೆಯಲಾಗುತ್ತದೆ. ಇಂತಹ ಹಲವು ಪ್ರಕರಣಗಳು ಜಗತ್ತಿನಾದ್ಯಂತ ಮುನ್ನೆಲೆಗೆ ಬರುತ್ತವೆ. ಈ ಪ್ರಕರಣಗಳು ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತವೆ. ಆದರೆ ಇತ್ತೀಚೆಗಷ್ಟೇ ಅಮೆರಿಕದ ವ್ಯಕ್ತಿಯೊಬ್ಬರು ತನ್ನ ಮಿತಿ ದಾಟಿದ್ದಾರೆ. ಆಕಸ್ಮಿಕವಾಗಿ ಕಾಂಡೋಮ್ ಇದ್ದ ಬಾಳೆಹಣ್ಣನ್ನು ತಿಂದಿದ್ದಾನೆ. ಇದಾದ ನಂತರ ಆತನ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದೆ.

ಇದನ್ನೂ ಓದಿ: Trending News: ಶಾಲಾ ಬಾಲಕಿ ಮೇಲೆ ಎರಗಿ ಕಚ್ಚಿ ಕಚ್ಚಿ ಎಳೆದಾಡಿದ ವಿಶ್ವದ ಭಯಾನಕ ಶ್ವಾನ ಪಿಟ್ಬುಲ್… ಮುಂದೇನಾಯ್ತು ಗೊತ್ತಾ?

ಈ ಘಟನೆ ನಡೆದಿರುವುದು ಅಮೆರಿಕದ ನಗರದಲ್ಲಿ. ಡೈಲಿ ಮೇಲ್ ವರದಿಯ ಪ್ರಕಾರ, ಈ ಘಟನೆಯ ಬಗ್ಗೆ ವೈದ್ಯಕೀಯ ಅಧ್ಯಯನದ ಮೂಲಕ ದೃಢಪಡಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಗುರುತು ಮರೆಮಾಚಲಾಗಿದೆ. ಆದರೆ, ಎಕ್ಸ್-ರೇ ಚಿತ್ರಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರ ತೆಗೆದ ಚಿತ್ರಗಳು ಮುನ್ನೆಲೆಗೆ ಬಂದಿವೆ. ಡೈಲಿ ಮೇಲ್ ತನ್ನ ವರದಿಯಲ್ಲಿ ಈ ಚಿತ್ರಗಳನ್ನು ಪ್ರಕಟಿಸಿದ್ದು, ವೈದ್ಯರು ಈ ವಿಷಯವನ್ನು ಹೇಗೆ ನಿಭಾಯಿಸಿದ್ದಾರೆ ಎಂದು ಹೇಳಿದೆ.

ಮಾಹಿತಿ ಪ್ರಕಾರ 35 ವರ್ಷದ ಈ ವ್ಯಕ್ತಿ ಕೋಪದಿಂದ ಈ ಕೆಲಸ ಮಾಡಿದ್ದಾನೆ. ಆತನ ಕೋಪಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಆ ಸಂದರ್ಭದಲ್ಲಿ ಬಾಳೆಹಣ್ಣಿಗೆ ಕಾಂಡೋಮ್ ಹಾಕಿ, ಅದನ್ನು ನುಂಗಿದ್ದಾನೆ. ಇದಾದ ಸ್ವಲ್ಪ ಸಮಯದಲ್ಲೇ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ, ಅವನಿಗೆ ಏನನ್ನೂ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:  ಫೇಸ್‌ಬುಕ್‌ನಲ್ಲೇ ಲವ್‌.. ಫಾರೀನ್‌ ಹುಡುಗಿ ಕೈಹಿಡಿದ ಪವನ್‌..! ನಾಳೆಯಿಂದ ನಾನೂ ಚಾಟ್‌ ಮಾಡ್ತೀನಿ

ಹೀಗಾಗಿ ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಎಕ್ಸ್‌ರೇ ಮಾಡಿಸಿದಾಗ ಆರನ ಕರುಳಿನ ಬಳಿ ಕಾಂಡೋಮ್‌ನಲ್ಲಿ ಸುತ್ತಿದ ಬಾಳೆಹಣ್ಣು ಕಾಣಿಸಿಕೊಂಡಿದೆ. ಇದು ಕರುಳಿನ ದಾರಿಯನ್ನು ನಿರ್ಬಂಧಿಸಿದ್ದು, ಸಾಕಷ್ಟು ಹಾನಿಯನ್ನುಂಟುಮಾಡಿದೆ. ಸುಮಾರು ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಕಾಂಡೋಮ್ ಸುತ್ತಿನ ಬಾಳೆಹಣ್ಣನ್ನು ಹೊರತೆಗೆದಿದ್ದಾರೆ. ಮೂರು ದಿನಗಳ ನಂತರ ಆ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News