Chinese Balloon: ಚೀನಾದ ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ..!

ಅಧ್ಯಕ್ಷ ಜೋ ಬಿಡೆನ್ ಸೂಚನೆಯ ಮೇರೆಗೆ ಅಮೆರಿಕದ ಸೇನಾಪಡೆ ಚೀನಾದ ಕಣ್ಗಾವಲು ಬಲೂನ್ ಅನ್ನು ಅಟ್ಲಾಂಟಿಕ್ ಸಾಗರದಲ್ಲಿ ಶನಿವಾರ ಸ್ಥಳೀಯ ಕಾಲಮಾನ 2:39ಕ್ಕೆ ಹೊಡೆದುರುಳಿಸಿತು ಎಂದು ಯುಎಸ್ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Written by - Puttaraj K Alur | Last Updated : Feb 5, 2023, 10:52 AM IST
  • ಶಂಕಿತ ಚೀನಾದ ಪತ್ತೇದಾರಿ ಬಲೂನ್ ಹೊಡೆದುರುಳಿಸಿದೆ ಅಮೆರಿಕ
  • ಅಧ್ಯಕ್ಷ ಜೋ ಬಿಡೆನ್ ಸೂಚನೆ ಮೇರೆಗೆ ಬಲೂನ್ ಶೂಟ್ ಮಾಡಿದ ಸೇನೆ
  • ಇದು ‘ಅಂತರರಾಷ್ಟ್ರೀಯ ಗಂಭೀರ ಉಲ್ಲಂಘನೆ' ಎಂದು ಡ್ರ್ಯಾಗನ್ ದೇಶದ ವಾರ್ನಿಂಗ್
Chinese Balloon: ಚೀನಾದ ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ..! title=
ಬಲೂನ್ ಹೊಡೆದುರುಳಿಸಿದೆ ಅಮೆರಿಕ!

ನವದೆಹಲಿ: ಅಮೆರಿಕದ ಸೇನೆಯು ಶಂಕಿತ ಚೀನಾದ ಪತ್ತೇದಾರಿ ಬಲೂನ್ ಅನ್ನು ಶನಿವಾರ ಹೊಡೆದುರುಳಿಸಿದೆ. ಇದರಿಂದ ಡ್ರ್ಯಾಗನ್ ದೇಶ ಚೀನಾ ಅಮೆರಿಕಕ್ಕೆ ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ. ಅಮೆರಿಕವು ಬಲೂನ್ ಹೊಡೆದುರುಳಿಸಿರುವುದು ‘ಅಂತರರಾಷ್ಟ್ರೀಯ ಗಂಭೀರ ಉಲ್ಲಂಘನೆ' ಎಂದು ಚೀನಾ ಹೇಳಿಕೊಂಡಿದೆ.

ಶನಿವಾರ ಮಧ್ಯಾಹ್ನ ದಕ್ಷಿಣ ಕೆರೊಲಿನಾ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ಚೀನಾದ ಈ ಕಣ್ಗಾವಲು ಬಲೂನ್ ಅನ್ನು ಅಮೆರಿಕವು ಹೊಡೆದುರುಳಿಸಿತು. ಅಧ್ಯಕ್ಷ ಜೋ ಬಿಡೆನ್ ಸೂಚನೆಯ ಮೇರೆಗೆ ಅಮೆರಿಕ ಸೇನೆಯು ಸ್ಥಳೀಯ ಕಾಲಮಾನ 2:39ಕ್ಕೆ ಅಟ್ಲಾಂಟಿಕ್ ಸಾಗರದಲ್ಲಿ ಚೀನಾದ ಕಣ್ಗಾವಲು ಬಲೂನ್ ಅನ್ನು ಹೊಡೆದುರುಳಿಸಿತು ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ದಕ್ಷಿಣ ಕೆರೊಲಿನಾದ ಅಮೆರಿಕದ ಕರಾವಳಿಯಿಂದ 6 ಮೈಲುಗಳಷ್ಟು ದೂರದಲ್ಲಿ ಬಲೂನ್ ಅನ್ನು ಹೊಡೆದುರುಳಿಸಲಾಗಿದೆ. ಬಲೂನ್ ಅನ್ನು ಹೊಡೆದುರುಳಿಸುವಾಗ ಅಮೇರಿಕದ ನಾಗರಿಕರಿಗೆ ಯಾವುದೇ  ಜೀವಹಾನಿ ಅಥವಾ ಆಸ್ತಿ ನಷ್ಟವಾಗಿಲ್ಲವೆಂದು ತಿಳಿದುಬಂದಿದೆ.  

ಇದನ್ನೂ ಓದಿ: Strange Tradition: ಇಲ್ಲಿ ಮದುವೆಗೂ ಮುನ್ನ ವಧುವಿನ ಮೇಲೆ ತಂದೆ ಉಗುಳಬೇಕು: ಇದು ವಿವಾಹದ ಕಡ್ಡಾಯ ಸಂಪ್ರದಾಯ!

ಈ ಕ್ರಮವನ್ನು ಕೆನಡಾ ಸರ್ಕಾರದ ಸಂಪೂರ್ಣ ಸಹಕಾರದೊಂದಿಗೆ ಸಮನ್ವಯದಿಂದ ತೆಗೆದುಕೊಳ್ಳಲಾಗಿದೆ. ಬಲೂನ್ ಹೊಡೆದುರುಳಿಸಿದ ತಕ್ಷಣ, ಬಲೂನ್ ಸಂಗ್ರಹಿಸಿದ ಸೂಕ್ಷ್ಮ ಮಾಹಿತಿಯನ್ನು ಹಿಂಪಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದ ಚೀನಾಕ್ಕೆ ಅದರ ಗುಪ್ತಚರ ಮೌಲ್ಯವು ಕಳೆದುಹೋಗುತ್ತದೆ ಎಂದು ಪೆಂಟಗನ್ ಅಧಿಕಾರಿ ಹೇಳಿದ್ದಾರೆ. ಹಲವಾರು ಹಡಗುಗಳು ಮತ್ತು ಡೈವರ್‌ಗಳು ಇದೀಗ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಬಲೂನ್‌ನಲ್ಲಿ ಕ್ಷಿಪಣಿಗಳು

ವರ್ಜೀನಿಯಾದ ಲ್ಯಾಂಗ್ಲಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನವು ಕ್ಷಿಪಣಿಯನ್ನು ಬಿಡುಗಡೆ ಮಾಡಿತು ಎಂದು ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ, ಇದರಿಂದಾಗಿ ಬಲೂನ್ ಅಮೆರಿಕದ ವಾಯುಪ್ರದೇಶದೊಳಗೆ ಸಾಗರಕ್ಕೆ ಬಿದ್ದಿತು.

‘ಬಲೂನ್ ಶೂಟ್ ಮಾಡಲು ನಾನು ಹೇಳಿದ್ದೆ’

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮೇರಿಲ್ಯಾಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ಚೀನಾದ ಶಂಕಾಸ್ಪದ ಬಲೂನ್ ಅನ್ನು ಶೂಟ್ ಮಾಡಲು ನಾನು ಸೇನಾ ಸಿಬ್ಬಂದಿಗೆ ಹೇಳಿದ್ದೆ ಎಂದು ತಿಳಿಸಿದ್ದಾರೆ. ಬುಧವಾರದಂದು ಬಲೂನ್ ಬಗ್ಗೆ ನನಗೆ ಮಾಹಿತಿ ನೀಡಿದಾಗ ಸಾಧ್ಯವಾದಷ್ಟು ಬೇಗ ಅದನ್ನು ಶೂಟ್ ಮಾಡಲು ಪೆಂಟಗನ್‌ಗೆ ಆದೇಶಿಸಿದೆ. ಸೇನಾ ಸಿಬ್ಬಂದಿ ಯಾರಿಗೂ ಹಾನಿಯಾಗದಂತೆ ಬಲೂನ್ ಶೂಟ್ ಮಾಡಲು ನಿರ್ಧರಿಸಿದ್ದರು. ಬಲೂನ್ ಸಮುದ್ರದ ಮೇಲೆ ಇರುವಾಗ ಸೂಕ್ತ ಸಮಯ ನೋಡಿಕೊಂಡು ಶೂಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಿದ್ದಾರೆ.  

ಇದನ್ನೂ ಓದಿ: Viral News: ಹಲ್ಲಿನಿಂದ ಕಚ್ಚಿ ಹೆಬ್ಬಾವಿನ ತಲೆಯನ್ನು ಅದರ ದೇಹದಿಂದ ಬೇರ್ಪಡಿಸಿದ ವ್ಯಕ್ತಿ ..ಮುಂದೇನಾಯ್ತು ಗೊತ್ತಾ?

ಅನೇಕ ದಿನಗಳಿಂದ ಹಾರುತ್ತಿದ್ದ ಚೀನಾದ ಬಲೂನ್ ಮೇಲೆ ಪೆಂಟಗನ್ ಕಣ್ಣಿಟ್ಟಿತ್ತು ಎಂದು ಹಿರಿಯ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ. ಜನವರಿ 28ರಂದು ಬಲೂನ್ ಅಲಾಸ್ಕಾವನ್ನು ಪ್ರವೇಶಿಸಿತ್ತು. ಇದರ ನಂತರ ಅದು ಜನವರಿ 30ರಂದು ಕೆನಡಾದ ವಾಯುಪ್ರದೇಶವನ್ನು ಪ್ರವೇಶಿಸಿತು. ಬಳಿಕ ಜನವರಿ 31ರಂದು ಮತ್ತೆ ಅಮೆರಿಕದ ವಾಯುಪ್ರದೇಶವನ್ನು ಪ್ರವೇಶಿಸಿತ್ತು ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News