ನವದೆಹಲಿ: ವಿಶ್ವಾದ್ಯಂತದ ವಿಜ್ಞಾನಿಗಳು ಕಣ್ಣಲ್ಲಿ ಕಣ್ಣಿಟ್ಟು ವಿಕ್ಷೀಸುತ್ತಿದ್ದ ಒಂದು ನಿಘೂಡ ನಕ್ಷತ್ರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಈ ಕುರಿತು ವಿಜ್ಞಾನಿಗಳು ಹೇಳಿರುವ ಪ್ರಕಾರ, ಸೂರ್ಯನಿಗಿಂತ 2.5 ಮಿಲಿಯನ್ (25ಲಕ್ಷ) ಪಟ್ಟು ಹೆಚ್ಚು ಪ್ರಕಾಶಮಾನವಾಗಿದ್ದ ಈ ದೈತ್ಯಾಕಾರದ ನಕ್ಷತ್ರವು 2019ರಲ್ಲಿ ಯಾವುದೇ ಸುಳಿವು ನೀಡದೆ ಮತ್ತು ಯಾವುದೇ ರೀತಿಯ ಗುರುತನ್ನು ಬಿಡದೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಯಲ್ ಅಸ್ಟ್ರೋನೋಮಿಕಲ್ ಸೊಸೈಟಿಯ ಮಾಸಿಕ ನೋಟಿಸ್ ನಲ್ಲಿ ಪ್ರಕಾಶಿತಗೊಂಡ ಒಂದು ಅಧ್ಯಯನದಲ್ಲಿ, ಖಗೋಳಶಾಸ್ತ್ರಜ್ಞರ ಒಂದು ತಂಡ ಈ ನಕ್ಷತ್ರ ಕಣ್ಮರೆಯಾಗಿರುವುದರ ಹಿಂದಿರುವ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.


ಈ ಕುರಿತು ಹೇಳಿಕೆ ನೀಡಿರುವ ಟ್ರಿನಿಟಿ ಕಾಲೇಜ್ ಆಫ್ ಡಬಲೀನ್ ನ ಓರ್ವ ಖಗೋಳ ಶಾಸ್ತ್ರಜ್ಞ ಹಾಗೂ ನ್ಯೂ ಪೇಪರ್ ಆನ್ ದಿ ಸ್ಟಾರ್ ನ ಸಹ ಲೇಖಕರಾಗಿರುವ ಜೋಸ್ ಗ್ರೆಹ್ "ನಾವು ಸ್ಥಳೀಯ ಬ್ರಹ್ಮಾಂಡದ ವಿಶಾಲವಾದ ನಕ್ಷತ್ರಗಳಲ್ಲಿನ ಒಂದು ನಕ್ಷತ್ರವನ್ನು ಪತ್ತೆಹಚ್ಚಿರಬಹುದು. ಈ ನಕ್ಷತ್ರ ನಿಧಾನಕ್ಕೆ ತನ್ನ ಜೀವನದ ಅಂತಿಮ ಕಾಲ ಸಮೀಪಿಸುತ್ತಿತ್ತು. ಇದು ಒಂದು ವೇಳೆ ನಿಜವಾದರೆ, ಬ್ರಹ್ಮಾಂಡದಲ್ಲಿರುವ ಮತ್ತು ತನ್ನಷ್ಟಕ್ಕೆ ತಾನೇ ಕಣ್ಮರೆಯಾಗುವ ಇಂತಹ ಮಾನ್ಸ್ಟರ್ ನಕ್ಷತ್ರಗಳನ್ನು ಪತ್ತೆ ಹಚ್ಚುವ ಅಗತ್ಯತೆ ಇದೆ" ಎಂದಿದ್ದಾರೆ.


ಈ ನಕ್ಷತ್ರ ಕಣ್ಮರೆಯಾಗಿದ್ದಾದರು ಏಕೆ?
ನಕ್ಷತ್ರದ ಕಣ್ಮರೆ ಕುರಿತಾತ ಎಲ್ಲಾ ಕಾರಣಗಳನ್ನು ಸಂಶೋಧಕರು ಬರೆದಿದ್ದಾರೆ. ಸಂಶೋಧಕರ ಪ್ರಕಾರ, ಈ ನಕ್ಷತ್ರವು ಯಾವುದೇ ರೀತಿಯ ಸೂಪರ್ನೋವಾ ರಚಿಸದೆಯೇ ಕಪ್ಪು ಕುಳಿಯೊಳಗೆ ಹೋಗಿರಬಹುದು ಎನ್ನಲಾಗಿದೆ.


ಈ ನಕ್ಷತ್ರವು ಭೂಮಿಯಿಂದ 7.5 ಪ್ರಕಾಶವರ್ಷಗಳಷ್ಟು ದೂರದಲ್ಲಿತ್ತು. ಖಗೋಳಶಾಸ್ತ್ರಜ್ಞರ ಅನೇಕ ತಂಡಗಳು ಈ ದೈತ್ಯ ನಕ್ಷತ್ರವನ್ನು 2001 ರಿಂದ 2011 ರವರೆಗೆ ಅಧ್ಯಯನ ಮಾಡಿವೆ. ಆದರೆ 2019 ರಲ್ಲಿ, ಖಗೋಳಶಾಸ್ತ್ರಜ್ಞರು ಈ ನಕ್ಷತ್ರವನ್ನು ದೊಡ್ಡ ಗಾತ್ರದ ದೂರದರ್ಶಕದ ಮೂಲಕ ಅಧ್ಯಯನ ಮಾಡಲು ಬಯಸಿದ್ದಾರೆ. ಆದರೆ, ಈ ನಕ್ಷತ್ರ ಆಕಸ್ಮಿಕವಾಗಿ ಕಣ್ಮರೆಯಾಗಿದ್ದನ್ನು ಕಂಡು ವಿಜ್ಞಾನಿಗಳು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.