ಟರ್ಕಿ ಮೂಲದ ವಿಮಾನಯಾನ ಕಂಪನಿಯೊಂದರ ಫ್ಲೈಟ್ ಅಟೆಂಡೆಂಟ್ ಇತ್ತೀಚೆಗೆ ವಿಮಾನದ ಊಟದಲ್ಲಿ ಕತ್ತರಿಸಿದ ಹಾವಿನ ತಲೆಯನ್ನು ಕಂಡು ಗಾಬರಿಗೊಂಡಿದ್ದಾರೆ. ವಿಮಾನಯಾನದ ಬ್ಲಾಗ್ ʼಒನ್ ಮೈಲ್ ಅಟ್ ಎ ಟೈಮ್ʼನ್ನು ಉಲ್ಲೇಖಿಸಿ ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ಜುಲೈ 21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್‌ಗೆ ಹೊರಟಿದ್ದ ಸನ್‌ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಒಂದು ಸಣ್ಣ ಹಾವಿನ ತಲೆ ಆಲೂಗಡ್ಡೆ ಮತ್ತು ತರಕಾರಿಗಳ ನಡುವೆ ಕಂಡುಬಂದಿದೆ. 


COMMERCIAL BREAK
SCROLL TO CONTINUE READING

ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಹಾವಿನ ತುಂಡಾದ ತಲೆ ಆಹಾರದ ಮಧ್ಯದಲ್ಲಿ ಇರುವದು ಕಾಣುತ್ತದೆ. 


ಇದನ್ನೂ ಓದಿ: ನೀವು ಆನ್‌ಲೈನ್‌ನಲ್ಲಿರುವುದು ಯಾರಿಗೂ ತಿಳಿಯಬಾರದೇ? ವಾಟ್ಸಾಪ್ ಪರಿಚಯಿಸಲಿದೆ ಹೊಸ ವೈಶಿಷ್ಟ್ಯ


ವಿಡಿಯೋ ನೋಡಿ: 


ವಾಯುಯಾನ ಉದ್ಯಮದಲ್ಲಿ 30 ವರ್ಷಗಳ ಅನುಭವವನ್ನು ಹೊಂದಿದ್ದೇವೆ. ನಮ್ಮ ವಿಮಾನದಲ್ಲಿ ಅತಿಥಿಗಳಿಗೆ ನಾವು ಒದಗಿಸುವ ಸೇವೆಗಳು ಉತ್ತಮ ಗುಣಮಟ್ಟದ್ದಾಗಿರಬೇಕು.  ಅಷ್ಟೇ ಅಲ್ಲದೆ ಪ್ರಯಾಣಿಕರು ಮತ್ತು ಉದ್ಯೋಗಿಗಳು ಆರಾಮದಾಯಕ ಹಾಗೂ ಸುರಕ್ಷಿತ ಹಾರಾಟದ ಅನುಭವವನ್ನು ಹೊಂದಿರುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ" ಎಂದು ಇಂಡಿಪೆಂಡೆಂಟ್ ಸುದ್ದಿ ಮಾಧ್ಯನಕ್ಕೆ ಏರ್ಲೈನ್ ​​ಸಿಬ್ಬಂದಿ ಮಾಹಿತಿ ನೀಡಿದ್ದಾರೆ. 


"ವಿಮಾನದಲ್ಲಿ ಆಹಾರ ಸೇವೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿನ ಆರೋಪಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಈ ವಿಷಯದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ" ಎಂದು ಸಂಸ್ಥೆ ಹೇಳಿದೆ.


ಮತ್ತೊಂದೆಡೆ, ಊಟ ಸರಬರಾಜು ಮಾಡಿದ ಕ್ಯಾಟರಿಂಗ್ ಕಂಪನಿಯು ಈ ಅಪವಾದವನ್ನು ತಳ್ಳಿಹಾಕಿದೆ. Sancak Inflight Service ವರದಿಯ ಪ್ರಕಾರ "ಅಡುಗೆ ಮಾಡುವಾಗ ಆಹಾರದಲ್ಲಿ ಇಂತಹ ತಪ್ಪುಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ನಾವು ಊಟವನ್ನು 280 ಡಿಗ್ರಿ ಸೆಲ್ಸಿಯಸ್‌ನಲ್ಲಿ ಬೇಯಿಸುತ್ತೇವೆ. ಹೀಗಿರುವಾಗ ಹಸಿಯಾಗಿ ಕಾಣುವ ಹಾವಿನ ತಲೆ ಆ ನಂತರ ಸೇರಿಕೊಂಡಿರಬಹುದು. ನಮ್ಮ ತಪ್ಪು ಇಲ್ಲ" ಎಂದು ಹೇಳಿಕೊಂಡಿದೆ. 


ಇದನ್ನೂ ಓದಿ: ಏಳು ವರ್ಷಗಳಿಂದ ಸಂತಾನಕ್ಕಾಗಿ ಹಂಬಲಿಸುತ್ತಿದ್ದ ಮಹಿಳೆಗೆ ಐದು ಮಕ್ಕಳ ಜನನ


ಈ ಮಧ್ಯೆ ವಾರದ ಆರಂಭದಲ್ಲಿ ಇದೇ ರೀತಿಯ ಘಟನೆಯೊಂದ ರಾಷ್ಟ್ರ ರಾಜಧಾನಿಯಲ್ಲಿ ನಡೆದಿತ್ತು. ದೆಹಲಿಯ ಜನಪ್ರಿಯ ಉಪಾಹಾರ ಗೃಹದಿಂದ ಒಬ್ಬ ವ್ಯಕ್ತಿ ಚಿಕನ್ ಸಲಾಡ್‌ ಆರ್ಡರ್‌ ಮಾಡಿದ್ದ. ಆ ಆಹಾರದಲ್ಲಿ ಸತ್ತ ಹಲ್ಲಿ ಇದ್ದದ್ದನ್ನು ಕಂಡು ಗಾಬರಿಗೊಂಡಿದ್ದ. "ನಾನು ಅತ್ಯಂತ ಪ್ರಸಿದ್ಧವಾದ ಡಿಗ್ಗಿನ್ ಕೆಫೆಯಿಂದ ಆಹಾರ ಆರ್ಡರ್‌ ಮಾಡಿದ್ದೆ. ಅದರಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ" ಎಂದು ವ್ಯಕ್ತಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.