Fart Selling Girl: ಪ್ರಪಂಚದಲ್ಲಿ ಯಾವೆಲ್ಲಾ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಾರೆ ಎಂದು ತಿಳಿದರೆ ಒಮ್ಮೊಮ್ಮೆ ಅದಕ್ಕೆ ಉತ್ತರ ಸಿಗುವುದು ಕಷ್ಟ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಊಸುಗಳನ್ನು ಸಂಗ್ರಹಿಸಿ ಅದರಿಂದ ಲಕ್ಷಾಂತರ ರೂ ಹಣ ಗಳಿಕೆ ಮಾಡುತ್ತಿದ್ದಾಳೆ. ಈ ಸುದ್ದಿ ಕೊಂಚ ವಿಭಿನ್ನ ಎಂದೆನಿಸಿದರೂ ಸಹ ಸತ್ಯ ವರದಿಯಾಗಿದೆ.


COMMERCIAL BREAK
SCROLL TO CONTINUE READING

31 ವರ್ಷ ವಯಸ್ಸಿನ ಸ್ಟೆಫನಿ ಮ್ಯಾಟೊ ಎಂಬ ಮಹಿಳೆ ವೃತ್ತಿಯಲ್ಲಿ ಯೂಟ್ಯೂಬರ್ ಮತ್ತು ರಿಯಾಲಿಟಿ ಟಿವಿ ತಾರೆಯಾಗಿದ್ದು, '90 ಡೇ ಫಿಯನ್ಸ್' ಎಂಬ ಶೋನಲ್ಲಿ ಮಾಡಿದ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈಕೆ ತನ್ನ ಊಸುಗಳನ್ನು ಮಾರಾಟ ಮಾಡುವ ಮೂಲಕ ಸುಮಾರು $200,000 (ಸುಮಾರು ರೂ 1.4 ಕೋಟಿ) ಹಣ ಗಳಿಸಿದ್ದಾರೆ.


ಇದನ್ನೂ ಓದಿ: Okinoshima Island: ಮಹಿಳೆಯರ ಪ್ರವೇಶ ನಿಷೇಧವಿರುವ ಈ ದ್ವೀಪಕ್ಕೆ ಪುರುಷರಿಗೂ 'ರಹಸ್ಯ ಪ್ರಯಾಣ'ವಂತೆ!


ಆದರೆ ಈಕೆಯ ಈ ಕೆಲಸವೇ ಆರೋಗ್ಯಕ್ಕೆ ಮಾರಕ ಸಮಸ್ಯೆಯನ್ನು ತಂದೊಡ್ಡಿದೆ. ಈ ಬಳಿಕ ಸ್ವಯಂ ಘೋಷಿತ 'ಫಾರ್ಟೆಪ್ರೆನಿಯರ್' ಇಂತಹ ಕೆಲಸಕ್ಕೆ ನಿವೃತ್ತಿ ಘೋಷಿಸಿದ್ದಾರೆ.


ಕಳೆದ ವರ್ಷ ತೀವ್ರ ಎದೆನೋವಿನ ಸಮಸ್ಯೆಗೆ ಗುರಿಯಾದ ಸ್ಟೆಫನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎದೆಯಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದ ಆಕೆಗೆ ತುರ್ತು ವಿಭಾಗದಲ್ಲಿ ಚಿಕಿತ್ಸೆ ಕೂಡ ನೀಡಲಾಯಿತು. ರಕ್ತ ಪರೀಕ್ಷೆಗಳು ಮತ್ತು ಎಲೆಕ್ಟ್ರೋಕಾರ್ಡಿಯೋಗ್ರಾಮ್‌ ಕೂಡ ಮಾಡಲಾಯಿತು. ಡೈಲಿ ಮೇಲ್ ವರದಿಯ ಪ್ರಕಾರ, ಬೀನ್ಸ್, ಬಾಳೆಹಣ್ಣುಗಳು, ಮೊಟ್ಟೆಗಳು ಮತ್ತು ಪ್ರೋಟೀನ್ ಶೇಕ್‌ಗಳನ್ನು ಒಳಗೊಂಡಿರುವ ಹೆಚ್ಚಿನ ಫೈಬರ್ ಆಹಾರ ಸೇವಿಸಿದ ಕಾರಣದಿಂದಾಗಿ ಹೆಚ್ಚುವರಿ ಅನಿಲದ ಪರಿಣಾಮವಾಗಿದೆ ಎಂದು ವೈದ್ಯರು ತಿಳಿಸಿದರು.


ಮ್ಯಾಟೊ ಆರಂಭದಲ್ಲಿ ತನಗೆ ಹೃದಯಾಘಾತವಾಗಿದೆ ಎಂದು ಭಾವಿಸಿದ್ದಳು. ಡೈಲಿ ಮೇಲ್ ಗೆ ಮ್ಯಾಟೊ ನೀಡಿದ ಹೇಳಿಕೆಯಲ್ಲಿ, “ನನಗೆ ಪಾರ್ಶ್ವವಾಯು ಇದೆ ಮತ್ತು ಇದು ನನ್ನ ಅಂತಿಮ ಕ್ಷಣಗಳು ಎಂದು ನಾನು ಭಾವಿಸಿದೆ. ನಾನು ಈ ಕೆಲಸವನ್ನು ಅತಿಯಾಗಿ ಮಾಡುತ್ತಿದ್ದೆ, ಹೀಗಾಗಿ ಸಮಸ್ಯೆ ಕಾಣಿಸಿಕೊಂಡಿದೆ" ಎಂದು ಆಕೆ ಹೇಳಿದ್ದಾಳೆ.


ಮ್ಯಾಟೊ 2021 ರಲ್ಲಿ ಊಸು ಸಂಗ್ರಹಿಸುವ ಕೆಲಸ ಪ್ರಾರಂಭಿಸಿದ್ದಾಳೆ. ಜಾರ್‌ನಲ್ಲಿ ತನ್ನ ಊಸುಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ಅದನ್ನು ಪ್ರತಿ ಜಾರ್‌ಗೆ $1,000 (ರೂ. 74 ಸಾವಿರ) ನಂತೆ ಅಭಿಮಾನಿಗಳು ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ಪೆಷಲ್ ದಿನಗಳಲ್ಲಿ ಫಾರ್ಟ್(ಊಸು) ಜಾಡಿಗಳಿಗೆ ರಿಯಾಯಿತಿ ಕೂಡ ನೀಡುತ್ತಿದ್ದಳಂತೆ.


ಹೆಚ್ಚುತ್ತಿರುವ ಬೇಡಿಕೆಯ ಕಾರಣ, ಮ್ಯಾಟೊ ವಾರಕ್ಕೆ ಸುಮಾರು 50 ಫಾರ್ಟ್ ಜಾರ್‌ಗಳನ್ನು ಉತ್ಪಾದಿಸಲು ಗ್ಯಾಸ್ ಉತ್ಪಾದಿಸುವ ಆಹಾರ ಹೆಚ್ಚು ಸೇವಿಸಲು ಶುರು ಮಾಡಿದ್ದಾಳೆ. ಆದರೆ ಈ ಆಹಾರ ಪದ್ಧತಿ ಆಕೆಯ ಆರೋಗ್ಯದ ಮೇಲೆ ಅತೀವ ಪರಿಣಾಮ ಬೀರಿದ್ದು, ಡಯೆಟ್ ಪ್ಲಾನ್ ಬದಲಾಯಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.


ತನ್ನ ವೈರಲ್ ವ್ಯವಹಾರದ ಬಗ್ಗೆ ಮಾತನಾಡಿದ ಮ್ಯಾಟೋ, “ಬಾಳೆಹಣ್ಣಿನ ಪ್ರೋಟೀನ್ ಶೇಕ್ಸ್ ಪರಿಣಾಮಕಾರಿಯಾಗಿ ಹೆಚ್ಚು ಅಸಹ್ಯ-ವಾಸನೆಯ ಊಸುಗಳನ್ನು ಉತ್ಪಾದಿಸುತ್ತದೆ. ಮುಖ್ಯವಾಗಿ ಪ್ರೋಟೀನ್ ಮಫಿನ್‌ಗಳು, ಶೇಕ್‌ಗಳು ಮತ್ತು ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳ ಆಹಾರಕ್ರಮವನ್ನು ಅನುಸರಿಸಿ ಈ ವ್ಯವಹಾರವನ್ನು ಪ್ರಾರಂಭಿಸಿದೆ. ನಂತರ ಕಪ್ಪು ಬೀನ್ ಸಲಾಡ್, ಈರುಳ್ಳಿ, ಹ್ಯಾಮ್ ಮತ್ತು ಚಿಲ್ಲಿ ಆಮ್ಲೆಟ್‌ಗಳನ್ನು ಸೇವಿಸಲು ಪ್ರಾರಂಭಿಸಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Viral News: ಮೂವರು ಸಹೋದರಿಯರನ್ನ ಮದುವೆಯಾದ ಭೂಪ: ಒಬ್ಬೊಬ್ಬರಿಗೆ ಒಂದೊಂದು ದಿನ ಫಿಕ್ಸ್ ಮಾಡಿದ್ದಾನೆ ಈ ಚನ್ನಿಗರಾಯ!


ಈಕೆ ಈ ವೃತ್ತಿಯ ಬಗ್ಗೆ ಕೇಳಿದ ಜನರು ಒಂದು ಬಾರಿ ಅಸಹ್ಯ ಭಾವನೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಊಸುಗಳನ್ನು ಖರೀದಿಸುವ ಜನರು ಎಂಥವರಪ್ಪಾ ಎಂಬ ಪ್ರಶ್ನಾಭಾವವನ್ನು ಸಹ ಹೊರಹಾಕಿದ್ದಾರೆ.


https://bit.ly/3hDyh4G


Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.