ನವದೆಹಲಿ: ಫ್ರಾನ್ಸ್‌ನ ಎರಡನೇ ರಾಷ್ಟ್ರೀಯ ಲಾಕ್‌ಡೌನ್ ಪ್ರಾರಂಭವಾಗುತ್ತಿದ್ದಂತೆ ಪ್ಯಾರಿಸ್ ತನ್ನ ರಸ್ತೆಗಳಲ್ಲಿ ದಾಖಲೆಯ ಮಟ್ಟದಲ್ಲಿ ದಟ್ಟಣೆಯನ್ನು ಕಂಡಿತು.ಮತ್ತೆ ಪುನರುಜ್ಜೀವನಗೊಳ್ಳುವ ಕೊರೊನಾವೈರಸ್ ಸೋಂಕಿನ ಹರಡುವಿಕೆಯನ್ನು ನಿಧಾನಗೊಳಿಸಲು ಲಾಕ್‌ಡೌನ್ ಘೋಷಿಸಲಾಗಿದೆ.


ಯಾವುದೇ ರೀತಿಯ Lockdown ಇಲ್ಲದೆ Coronavirus ವಿರುದ್ಧ ಹೋರಾಟ ಗೆದ್ದ ಜಪಾನ್


COMMERCIAL BREAK
SCROLL TO CONTINUE READING

ಪ್ಯಾರಿಸ್ ನಲ್ಲಿ ದಟ್ಟಣೆಯನ್ನು ಅಳೆಯುವ ಸೈಟಾಡಿನ್‌ನಿಂದ ಡೌನ್‌ಲೋಡ್ ಮಾಡಲಾದ ಡೇಟಾ, ಗುರುವಾರ ರಾತ್ರಿ 9 ಗಂಟೆಯ ಮೊದಲು ಫ್ರೆಂಚ್ ರಾಜಧಾನಿಯಲ್ಲಿ 700 ಕಿಲೋಮೀಟರ್‌ಗಿಂತ ಹೆಚ್ಚಿನ ದಟ್ಟಣೆ ಇದೆ ಎಂದು ತೋರಿಸಿದೆ, ಇದು ಪ್ರಾದೇಶಿಕ ಕರ್ಫ್ಯೂಮತ್ತು ಹೊಸ ರಾಷ್ಟ್ರೀಯ ಲಾಕ್‌ಡೌನ್‌ ನಿಂದ ಉಂಟಾಗಿದೆ ಎನ್ನಲಾಗಿದೆ.ರಾಜಧಾನಿಯಲ್ಲಿ ಸಂಜೆ 6 ರಿಂದ 7 ರವರೆಗೆ ಸಂಚಾರ ಹೆಚ್ಚಾಗಿದೆ.


ಲಾಕ್‌ಡೌನ್‌ನ ಅಡ್ಡಪರಿಣಾಮ: ಈ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಬಹುತೇಕ ಜನ, ಅದರ 7 ರೋಗಲಕ್ಷಣಗಳಿವು

ಲಾಕ್‌ಡೌನ್ 2.0:


ಫ್ರಾನ್ಸ್‌ನ ಎರಡನೇ ಲಾಕ್‌ಡೌನ್ ಕನಿಷ್ಠ ಡಿಸೆಂಬರ್ 1 ರವರೆಗೆ ಜನರನ್ನು ತಮ್ಮ ಮನೆಗಳಿಗೆ ನಿರ್ಬಂಧಿಸುತ್ತದೆ ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಬುಧವಾರ ಭಾಷಣದಲ್ಲಿ ಘೋಷಿಸಿದರು,ಈ ಭಾಷಣವನ್ನು ಸುಮಾರು 33 ಮಿಲಿಯನ್ ಜನರು ವಿಕ್ಷಿಸಿದ್ದಾರೆ.ಫ್ರಾನ್ಸ್ ನ ಎಲ್ಲ 67 ಮಿಲಿಯನ್ ಜನರು ಮನೆಯಲ್ಲಿಯೇ ಉಳಿಯಲು ಆದೇಶಿಸಿದ್ದಾರೆ.