ಬೆಂಗಳೂರು : Plane Accident Video: ನೀವು ಅಂತರ್ಜಾಲದಲ್ಲಿ ವಿಮಾನ ಅಪಘಾತದ ಅನೇಕ ವೀಡಿಯೊಗಳನ್ನು ನೋಡಿರಬಹುದು. ಆದರೆ ವಿಮಾನವು ಎರಡು ಭಾಗಗಳಾಗಿ ವಿಭಜನೆಯಾದ ಘಟನೆಯನ್ನು ನೋಡಿರಲಿಕ್ಕಿಲ್ಲ. ದುರ್ಘಟನೆಯಲ್ಲಿ ವಿಮಾನ ಎರಡು ಭಾಗಗಳಾಗಿ ವಿಂಗಡಣೆಯಾಗಿದೆ ಎಂದರೆ ಅಪಘಾತದ ಭೀಕರತೆಯನ್ನು ತಿಳಿದುಕೊಳ್ಳಬಹುದು. ಮಧ್ಯ ಅಮೆರಿಕ, ಕೋಸ್ಟರಿಕಾ ದೇಶದಲ್ಲಿ ನಡೆದ ಅವಘಡವೊಂದು ಬೆಳಕಿಗೆ ಬಂದಿದೆ. ತುರ್ತು ಲ್ಯಾಂಡಿಂಗ್ ಸಮಯದಲ್ಲಿ, ವಿಮಾನ  ಎರಡು ಭಾಗಗಳಾಗಿ ವಿಭಜನೆಯಾಗಿದೆ.


COMMERCIAL BREAK
SCROLL TO CONTINUE READING

ತುರ್ತು ಭೂಸ್ಪರ್ಶದ ವೇಳೆ ಭೀಕರ ಅಪಘಾತ :
 ಕೋಸ್ಟರಿಕಾದ ಜುವಾನ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. . DHL ಕಂಪನಿಯ ಬೋಯಿಂಗ್ 757-200 ಕಾರ್ಗೋ ವಿಮಾನವು ಕಾರಣಾಂತರಗಳಿಂದ  ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. 


ಇದನ್ನೂ ಓದಿ : America Green Card:ಗ್ರೀನ್‌ ಕಾರ್ಡ್‌ ಸಂಬಂಧಿತ ದೇಶವಾರು ಮಿತಿ ರದ್ದು: ಮಸೂದೆಗೆ ಅಂಗೀಕಾರ


ವಿಮಾನವು ರನ್ ವೇ ಮೇಲೆ ಇಳಿದ ತಕ್ಷಣ ಸ್ವಲ್ಪ ದೂರ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಶತರಲ್ಲಿಯೇ ಅದರ ಬ್ಯಾಲೆನ್ಸ್ ತಪ್ಪುವುದನ್ನು ಕೂಡಾ ಗಮನಿಸಬಹುದು. ಇದಾದ ನಂತರ ಹಿಂದಿನ ಭಾಗದಲ್ಲಿ ಸ್ಪೋಟ ಸಂಭವಿಸುತ್ತದೆ. ಈ ಸ್ಪೋಟದೊಂದಿಗೆ ವಿಮಾನ ಎರಡು ಭಾಗವಾಗಿ ಬಿಡುತ್ತದೆ.  ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. 


 


ರಷ್ಯಾದ ಸದಸ್ಯತ್ವ ಅಮಾನತುಗೊಳಿಸುವ ನಿರ್ಣಯ ಮಂಡಿಸಿದ ವಿಶ್ವಸಂಸ್ಥೆ, ಮತದಾನದಿಂದ ದೂರ ಉಳಿದ ಭಾರತ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.