ಫಿಲಿಪೈನ್ಸ್: Philippines Plane Crash - ದಕ್ಷಿಣ ಫಿಲಿಪೈನ್ಸ್ ನಲ್ಲಿ ಭಾನುವಾರ ಬೆಳಗ್ಗೆ ಭಾರಿ ವಿಮಾನ ದುರಂತ ಸಂಭವಿಸಿದ ಕುರಿತು ವರದಿಯಾಗಿದೆ. ಇದೊಂದು ಮಿಲಿಟರಿ ವಿಮಾನ ಆಗಿತ್ತು ಎನ್ನಲಾಗಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ವಿಮಾನದಲ್ಲಿ 85 ಜನರಿದ್ದರು ಎನ್ನಲಾಗಿದೆ. ಅಪಘಾತದ ಕುರಿತು ಮಾಹಿತಿ ನೀಡಿರುವ ಫಿಲಿಪೈನ್ಸ್ ಮಿಲಿಟರಿ ಮುಖ್ಯಸ್ಥ ಸಿರಿಲಿಟೋ ಸೋಬೇಜ್ನಾ, ಈ ಅಪಘಾತ ದಕ್ಷಿಣ ಫಿಲಿಪೈನ್ಸ್ ನಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ. ಮಾಧ್ಯಮಗಳ ವರದಿಗಳ ಪ್ರಕಾರ ಇದುವರೆಗೆ ಸುಮಾರು 15 ಜನರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.
BREAKING NEWS: A C-130 aircraft of Philippine Air Force (PAF) with a tail number 5125 and with 85 people onboard crashed today at vicinity of Patikul, Sulu. Fire suppression is ongoing. Standby for more updates. I 📸: Bridge Bridge#PlaneCrash #Patikul #Sulu pic.twitter.com/EyEgTaucXz
— Philippine Emergency Alerts - PEA (@AlertsPea) July 4, 2021
ಮಾಹಿತಿಯ ಪ್ರಕಾರ, ಫಿಲಿಪೈನ್ಸ್ ವಾಯುಪಡೆಯ (PAF) ಸಿ -130 ವಿಮಾನದಲ್ಲಿ 85 ಜನರು ವಿಮಾನದಲ್ಲಿದ್ದರು, ಭಾನುವಾರ ಬೆಳಗ್ಗೆ ಪಟಿಕುಲ್ ಸುಲು ಬಳಿ ಈ ಅಪಘಾತ ಸಂಭವಿಸಿದ್ದು, ಸುಲು ಪ್ರಾಂತ್ಯದ ಜಿಲೋ ದ್ವೀಪದಲ್ಲಿ ವಿಮಾನ (Plane) ಇಳಿಯಲು ಪ್ರಯತ್ನಿಸುತ್ತಿದ್ದಾಗ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ವಿಮಾನ ನೆಲಕ್ಕೆ ವಿಮಾನ ನೆಲಕ್ಕೆ ಅಪ್ಪಳಿಸಿದಾಗ ಇಡೀ ವಿಮಾನ ಹೊತ್ತಿ ಉರಿದಿದೆ ಎನ್ನಲಾಗಿದೆ.
ಇದನ್ನೂ ಓದಿ- Coronavirus Latest Update - ಇನ್ಮುಂದೆ ಮಾಸ್ಕ್ ಮೂಲಕ Corona Positive ಪತ್ತೆಹಚ್ಚಲಾಗುವುದು
ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದುವರೆಗೆ ಸುಮಾರು 15 ಜನರನ್ನು ಹೊರ ತೆಗೆದು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಆದರೆ, ಈ ವಿಮಾನ ದುರಂತ ಸಂಭವಿಸಿದ್ದಾದರು ಹೇಗೆ ಎಂಬ ಮಾಹಿತಿ ಇದುವರೆಗೆ ದೊರೆತಿಲ್ಲ. ಸದ್ಯ ವಿಮಾನದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ- Covishield, Covaxin ಲಸಿಕೆ ಪಡೆದವರಿಗೆ ಯುರೋಪ್ ಪ್ರವಾಸಕ್ಕೆ ಅನುಮತಿ ಕೋರಿದ ಭಾರತ
Philippines Plane Crash Updates- ಮಾಧ್ಯಮ ವರದಿಗಳ ಪ್ರಕಾರ ಇದುವರೆಗೆ ಈ ಅಪಘಾತದಲ್ಲಿ 17 ಜನ ಮೃತಪಟ್ಟಿದ್ದು, 40 ಜನರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ. ಅಪಘಾತದ ಕುರಿತು ಮಾಹಿತಿ ನೀಡಿರುವ ಸೋಬೇಜ್ನಾ, ವಿಮಾನ ದಕ್ಷಿಣ ಕಾಗಾಯನ್ ಡಿ ಒರೋ ನಗರದಿಂದ ಸೇನಾ ಪಡೆಯನ್ನು ಹೊತ್ತೊಯ್ಯುತ್ತಿತ್ತು. ಮುಸ್ಲಿಂ ಬಹುಸಂಖ್ಯಾತ ಪ್ರಾಂತ್ಯವಾಗಿರುವ ಸುಲುದಲ್ಲಿ ಅಬು ಸಯ್ಯಫ್ ಉಗ್ರರ ವಿರುದ್ಧ ಸರ್ಕಾರಿ ಪಡೆಗಳು ದಶಕಗಳಿಂದ ಹೋರಾಡುತ್ತಿವೆ. ಇದು ತುಂಬಾ ದುರದೃಷ್ಟಕರ ಎಂದು ಸೊಬೆಜಾನಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ವಿಮಾನವು ರನ್ ವೇನಲ್ಲಿ ಇಳಿದಿಲ್ಲ. ಆದರೂ ಕೂಡ ಪೈಲಟ್ ವಿಮಾನವನ್ನು ಸಾಧ್ಯವಾದಷ್ಟು ನಿಯಂತ್ರಿಸಲು ಯತ್ನಿಸಿದ್ದಾನೆ. ಆದರೆ, ಅವನ ಶ್ರಮ ಫಲ ನೀಡಿಲ್ಲ ಮತ್ತು ವಿಮಾನ ಅಪಘಾತಕ್ಕೀಡಾಗಿದೆ ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.