America Green Card:ಗ್ರೀನ್‌ ಕಾರ್ಡ್‌ ಸಂಬಂಧಿತ ದೇಶವಾರು ಮಿತಿ ರದ್ದು: ಮಸೂದೆಗೆ ಅಂಗೀಕಾರ

ಕುಟುಂಬ ಆಧಾರಿತ ವಲಸೆ ವೀಸಾ ಹೊಂದಿದವರಿಗೆ ನೀಡಲಾಗುವ ಗ್ರೀನ್‌ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ಶೇ 7ರಿಂದ ಶೇ 15ಕ್ಕೆ ಹೆಚ್ಚಿಸಲು ಸಹ ಈ ಸಮಿತಿ ಅಂಗೀಕಾರ ನೀಡಿದೆ. ಇದು ಕಾಯ್ದೆ ರೂಪದಲ್ಲಿ ಜಾರಿಗೊಂಡರೆ, ಉದ್ಯೋಗ ಅರಸಿ ಅಮೆರಿಕಾಕ್ಕೆ ಬರುವ ಭಾರತ ಹಾಗೂ ಚೀನಾದವರಿಗೆ ಹೆಚ್ಚು ಅನುಕೂಲವಾಗಲಿದೆ.  

Written by - Zee Kannada News Desk | Last Updated : Apr 8, 2022, 01:04 PM IST
  • ಗ್ರೀನ್‌ ಕಾರ್ಡ್‌ ಸಂಬಂಧಿತ ದೇಶವಾರು ಮಿತಿ ರದ್ದು
  • ಮಸೂದೆಗೆ ಅಂಗೀಕಾರ ಸೂಚಿಸಿದ ಯುಎಸ್‌ ಸಂಸದೀಯ ಸಮಿತಿ
  • ದೇಶವಾರು ಮಿತಿಯನ್ನು ಶೇ 7ರಿಂದ ಶೇ 15ಕ್ಕೆ ಹೆಚ್ಚಿಸಲು ಅಂಗೀಕಾರ
America Green Card:ಗ್ರೀನ್‌ ಕಾರ್ಡ್‌ ಸಂಬಂಧಿತ ದೇಶವಾರು ಮಿತಿ ರದ್ದು: ಮಸೂದೆಗೆ ಅಂಗೀಕಾರ  title=
Green Card

ವಾಷಿಂಗ್ಟನ್: ಅಮೆರಿಕ(America)ದಲ್ಲಿ ನೆಲೆಸುವುದು ಅಥವಾ ಕೆಲಸ ಮಾಡುವುದು ಹಲವರ ಕನಸು. ಆದರೆ ಅಲ್ಲಿ ಉದ್ಯೋಗ ಆಧಾರಿತ ವಲಸೆ ವೀಸಾದ ಮೇಲೆ ಅಮೆರಿಕಕ್ಕೆ ಬರುವವರಿಗೆ ನೀಡುವ ಗ್ರೀನ್‌ಕಾರ್ಡ್‌ (Green Card) ಪಡೆಯುವುದು ಸ್ವಲ್ಪ ಕಷ್ಟಕರವಾದ ಕೆಲಸ. ಆದರೆ ಇದೀಗ ಅಲ್ಲಿನ ಸಂಸದೀಯ ಸಮಿತಿ ಗ್ರೀನ್‌ ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ತೆಗೆದುಹಾಕುವ ಮಸೂದೆಗೆ ಅಂಗೀಕಾರ ನೀಡಿದೆ. 

ಇದನ್ನು ಓದಿ: Supriya-Shashi Tharoor Troll: ಸುಪ್ರಿಯಾ ಜತೆಗಿನ ಸಂಭಾಷಣೆ ಬಗ್ಗೆ ತರೂರ್ ಹೇಳಿದ್ದೇನು ಗೊತ್ತಾ?

ಕುಟುಂಬ ಆಧಾರಿತ ವಲಸೆ ವೀಸಾ ಹೊಂದಿದವರಿಗೆ ನೀಡಲಾಗುವ ಗ್ರೀನ್‌ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ಶೇ 7ರಿಂದ ಶೇ 15ಕ್ಕೆ ಹೆಚ್ಚಿಸಲು ಸಹ ಈ ಸಮಿತಿ ಅಂಗೀಕಾರ ನೀಡಿದೆ. ಇದು ಕಾಯ್ದೆ ರೂಪದಲ್ಲಿ ಜಾರಿಗೊಂಡರೆ, ಉದ್ಯೋಗ ಅರಸಿ ಅಮೆರಿಕಾಕ್ಕೆ ಬರುವ ಭಾರತ ಹಾಗೂ ಚೀನಾದವರಿಗೆ ಹೆಚ್ಚು ಅನುಕೂಲವಾಗಲಿದೆ.

ಇದನ್ನು ಓದಿ: ಅಮೆಜಾನ್‌ನಲ್ಲಿ 3500 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ಪೋರ್ಟಬಲ್ ಏರ್ ಕೂಲರ್

ಬಾಲ್ಯದಲ್ಲಿ ತಂದೆ-ತಾಯಿಯೊಂದಿಗೆ ಅಮೆರಿಕಾಗೆ ಬಂದು 21 ವರ್ಷ ಮೇಲ್ಪಟ್ಟವರು ಸೂಪರ್ ಶುಲ್ಕ ಅಂದರೆ ಪೂರಕ ಶುಲ್ಕವನ್ನು ಕಡಿತಗೊಳಿಸಿ ಖಾಯಂ ನಿವಾಸ ಮತ್ತು ಪೌರತ್ವ ಪಡೆಯುತ್ತಾರೆ. ಯುಎಸ್‌ ಪ್ರತಿ ವರ್ಷ 1.40 ಮಿಲಿಯನ್ ಉದ್ಯೋಗ ಆಧಾರಿತ ಗ್ರೀನ್‌ಕಾರ್ಡ್‌ಗಳನ್ನು ನೀಡುತ್ತದೆ. ಯಾವುದೇ ದೇಶಕ್ಕೆ ಶೇ.7ಕ್ಕಿಂತ ಹೆಚ್ಚು ಗ್ರೀನ್ ಕಾರ್ಡ್ ನೀಡಬಾರದು ಎಂಬ ಷರತ್ತು ಇತ್ತು. ಆದರೆ ಇನ್ನು ಮುಂದೆ ಶೇ.15 ರಷ್ಟು ಗ್ರೀನ್ ಕಾರ್ಡ್‌ಗಳನ್ನು ನೀಡುವ ಯೋಜನೆ ಈ ಮಸೂದೆಯ ಮೂಲಕ ಚಾಲ್ತಿಗೆ ಬರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News