ದುಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟಕ್ಕೆ ಬ್ರೇಕ್
ಕರೋನಾ ಸಾಂಕ್ರಾಮಿಕ ಯುಗದಲ್ಲಿ ವಿಶ್ವದ ವಿವಿಧ ದೇಶಗಳಿಂದ ಭಾರತೀಯ ನಾಗರಿಕರನ್ನು ಕರೆತರಲು ಭಾರತ ಸರ್ಕಾರ ಮಾಡಿದ ಪ್ರಯತ್ನಗಳಿಗೆ ದೊಡ್ಡ ಹೊಡೆತ ಬಿದ್ದಿದೆ.
ದುಬೈ: ಕೊರೊನಾವೈರಸ್ ಯುಗದಲ್ಲಿ ವಿವಿಧ ದೇಶಗಳಿಂದ ಬಂದ ಭಾರತೀಯ ನಾಗರಿಕರನ್ನು ತಮ್ಮ ದೇಶಕ್ಕೆ ಕರೆತರಲು ಭಾರತ ಸರ್ಕಾರ ಮಾಡಿದ ಪ್ರಯತ್ನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಗಲ್ಫ್ ದೇಶಗಳಲ್ಲಿ ವಾಸಿಸುವ ಭಾರತೀಯರಿಗೆ ಇದರ ಬಿಸಿ ತಾಕಲಿದೆ. ಏಕೆಂದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ (ದುಬೈ ಇಂಡಿಯಾ) ವಿಮಾನಗಳು ಮುಂದಿನ 15 ದಿನಗಳವರೆಗೆ ಹಾರಲು ಸಾಧ್ಯವಾಗುವುದಿಲ್ಲ. ಕರೋನಾ ಸೋಂಕಿತ ವ್ಯಕ್ತಿಯು ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ದುಬೈ ಆಡಳಿತ ಈ ನಿರ್ಧಾರ ಕೈಗೊಂಡಿದೆ.
ವಿಮಾನಯಾನ ಸಂಸ್ಥೆಗಳಿಂದ ಗ್ರಾಹಕರಿಗೆ ಗುಡ್ ನ್ಯೂಸ್
ಕಠಿಣ ಕ್ರಮಗಳನ್ನು ಕೈಗೊಂಡ ದುಬೈ ಆಡಳಿತ :
ಕರೋನಾ ಸೋಂಕಿತ ವ್ಯಕ್ತಿಯು ಸೆಪ್ಟೆಂಬರ್ 4 ರಂದು ಜೈಪುರದಿಂದ ದುಬೈಗೆ (Dubai) ವಿಮಾನದಲ್ಲಿ ಪ್ರಯಾಣಿಸಿದ್ದಾನೆ ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದ ಎಸ್‌ಎ ಸಾರಿಗೆ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ತಿಳಿಸಿವೆ. ಕರೋನಾ ಸೋಂಕಿತ ವ್ಯಕ್ತಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸಿದ ಎರಡನೇ ಪ್ರಕರಣ ಇದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದ್ದು ಅಕ್ಟೋಬರ್ 2 ರವರೆಗೆ ಈ ನಿಷೇಧ ಮುಂದುವರಿಯುತ್ತದೆ.
ವಿಮಾನ ಅಪಘಾತದ ಬಳಿಕ ಪ್ರಧಾನಿ, ಗೃಹ ಸಚಿವ, ವಿದೇಶಾಂಗ ಸಚಿವ, ರಕ್ಷಣಾ ಸಚಿವರು ಹೇಳಿದ್ದೇನು?
ವಾಸ್ತವವಾಗಿ 4 ಸೆಪ್ಟೆಂಬರ್ 2020 ರಂದು ಪ್ರಯಾಣಿಕರೊಬ್ಬರು ಜೈಪುರದಿಂದ ದುಬೈಗೆ ಏರ್ ಇಂಡಿಯಾ (Air India) ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ಪ್ರಯಾಣಿಕನಿಗೆ ಮೊದಲೇ ಕರೋನಾ ಪಾಸಿಟಿವ್ ಆಗಿತ್ತು ಎಂದು ತಿಳಿದು ಬಂದಿದೆ. ದುಬೈನ ನಾಗರಿಕ ವಿಮಾನಯಾನ ಪ್ರಾಧಿಕಾರ ಇದನ್ನು ನಿಯಮಗಳ ಉಲ್ಲಂಘನೆ ಎಂದು ಹೇಳಿದೆ ಮತ್ತು ಅದಕ್ಕಾಗಿಯೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎಲ್ಲಾ ವಿಮಾನಗಳನ್ನು ಅಕ್ಟೋಬರ್ 2 ರವರೆಗೆ ನಿಷೇಧಿಸಲಾಗಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ?
ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಭಾರತದ ಮೊದಲ ಸಾರ್ವಜನಿಕ ವಲಯದ ಬಜೆಟ್ ವಿಮಾನಯಾನ ಸಂಸ್ಥೆಯಾಗಿದೆ. ಇದು ಏರ್ ಇಂಡಿಯಾದ ಒಂದು ಘಟಕ. ಏಪ್ರಿಲ್ 2005 ರಲ್ಲಿ ಪ್ರಾರಂಭವಾದ ಈ ವಿಮಾನಯಾನ ಸಂಸ್ಥೆ ಪ್ರಸ್ತುತ ದೆಹಲಿ, ಮುಂಬೈ, ತಿರುವನಂತಪುರ ಮತ್ತು ಕೊಚ್ಚಿಯಿಂದ ದುಬೈ, ಮಸ್ಕತ್, ಅಬುಧಾಬಿ ಮತ್ತು ಇತರ ಕೆಲವು ನಗರಗಳನ್ನು ಒಳಗೊಂಡಂತೆ ಕೊಲ್ಲಿ ಪ್ರದೇಶಕ್ಕೆ ವಿಮಾನಯಾನ ನಡೆಸುತ್ತಿದೆ. ಆದರೆ ಈಗ ಅಕ್ಟೋಬರ್ 2 ರವರೆಗೆ ಯಾವುದೇ ವಿಮಾನಗಳು ದುಬೈಗೆ ಹಾರುವಂತಿಲ್ಲ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಬಳಸುತ್ತಿತ್ತು.