Antarctica ಶ್ವೇತ ಹಿಮಚಾದರದ ಮೇಲೆ ದಿಗ್ಭ್ರಮೆಗೊಳಿಸುವ ವಿಚಿತ್ರ ಆಕೃತಿ.! NASA ಪಂಡಿತರಿಗೂ ಸಿಗುತ್ತಿಲ್ಲ ಉತ್ತರ..!
ಅಂಟಾರ್ಟಿಕಾ (Antarctica) ಮತ್ತೊಮ್ಮೆ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಿಮಿಸಿದೆ. ಸಾವಿರಾರು ಕಿಲೋಮೀಟರ್ ವಿಸ್ತೀರ್ಣದ ಶ್ವೇತ ಹಿಮಚಾದರದ ಮೇಲೆ ವಿಚಿತ್ರ ಆಕೃತಿಯೊಂದು ಸೃಷ್ಟಿಯಾಗಿದೆ. ಯಾವುದೊ ಒಂದು ವಸ್ತು ವೇಗವಾಗಿ ಕೆಳಗೆ ಜಾರಿಕೊಂಡು ಹೋದ ಮೇಲೆ ಸೃಷ್ಟಿಯಾದ ಆಕೃತಿಯಂತೆ ಅದು ಕಾಣಿಸುತ್ತಿದೆ.
ನವದೆಹಲಿ: ಅಂಟಾರ್ಟಿಕಾ (Antarctica) ಮತ್ತೊಮ್ಮೆ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಿಮಿಸಿದೆ. ಸಾವಿರಾರು ಕಿಲೋಮೀಟರ್ ವಿಸ್ತೀರ್ಣದ ಶ್ವೇತ ಹಿಮಚಾದರದ ಮೇಲೆ ವಿಚಿತ್ರ ಆಕೃತಿಯೊಂದು ಸೃಷ್ಟಿಯಾಗಿದೆ. ಯಾವುದೊ ಒಂದು ವಸ್ತು ವೇಗವಾಗಿ ಕೆಳಗೆ ಜಾರಿಕೊಂಡು ಹೋದ ಮೇಲೆ ಸೃಷ್ಟಿಯಾದ ಆಕೃತಿಯಂತೆ ಅದು ಕಾಣಿಸುತ್ತಿದೆ. ಆ ಆಕೃತಿಯಲ್ಲಿ ಚೂಪಾದ ಹಲ್ಲುಗಳಿರುವ ಲಕ್ಷಣಗಳೂ ಕಂಡು ಬಂದಿದೆ. ಶ್ವೇತ ಹಿಮದ ಮೇಲೆ ಕಂಡುಬಂದ ಚೂಪಾದ ಹಲ್ಲುಗಳಿರುವಂತೆ ತೋರುವ ಈ ಆಕೃತಿ ಏನು ಎಂಬ ಪ್ರಶ್ನೆಗೆ ಸದ್ಯ ನಾಸಾ ಬಳಿಯೂ ಉತ್ತರವಿಲ್ಲ. ಯಾವುದೇ ಒಂದು ನಿರ್ಣಯಕ್ಕೆ ಬರಲು ನಾಸಾ (NASA)ಪಂಡಿತರು ಒದ್ದಾಡುತ್ತಿದ್ದಾರೆ . ಯಾವುದೇ ವಸ್ತುಗಳ ಪರಸ್ಪರ ಸಂಘರ್ಷದಿಂದ ಈ ಆಕೃತಿ ಸೃಷ್ಟಿಯಾಗಿರಬಹುದು ಎಂಬುದು ಕೆಲವು ಪರಿಣಿತರ ಅಭಿಪ್ರಾಯವಾಗಿದೆ. ಯಾವುದೋ ಒಂದು ವಸ್ತು ಅತ್ಯಂತ ವೇಗದಲ್ಲಿ ಕೆಳಗೆ ಜಾರಿ ಹೋಗಿರಬಹುದು ಎಂಬ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗುತ್ತದೆ. ನಾಸಾ ಪಂಡಿತರ ಪ್ರಕಾರ ಇದೊಂದು ಅಪರೂಪದ ಗ್ಲೇಸಿಯರ್ (Glacier).
ನಾಸಾ ವಿಜ್ಞಾನಿ ಡಾ. ಕೆಲ್ಲಿ ಬ್ರಂಟ್ ಅವರ ಪ್ರಕಾರ, ಇದೊಂದು ಅಪರೂಪದ ಗ್ಲೇಸಿಯರ್ (Glacier). ಹೆಪ್ಪುಗಟ್ಟಿದ ಸಮುದ್ರದಲ್ಲಿ ಎರಬಸ್ ಪರ್ವತದಿಂದ ಹರಿಯುವ ಲಕ್ಷಾಂತರ ಟನ್ ಹಿಮದಿಂದ ಕೂಡಿದ ಅಪರೂಪದ ಹಿಮನದಿ ಇದು ಎಂದು ಹೇಳುತ್ತಾರೆ. ಮೌಂಟ್ ಎರಬಸ್ (Mount Erebus) ಪರ್ವತಕ್ಕೆ ಒಂದು ಕರಾಳ ಹಿನ್ನೆಲೆ ಇದೆ. ಅಲ್ಲೇನಾಗಿತ್ತು ಗೊತ್ತಾ..?
ಇದನ್ನೂ ಓದಿ :NASA: ಮಂಗಳನ ಅಂಗಳದಲ್ಲಿ ಭಾರಿ ಪ್ರವಾಹ ಬಂದಿತ್ತಂತೆ, ಈ ಹಿಂದೆ ನೀವೆಂದು ನೋಡಿರಲಿಕ್ಕಿಲ್ಲ ಈ pics
ಮೌಂಟ್ ಎರೆಬಸ್ ನಲ್ಲಿ ಸಂಭವಿಸಿತ್ತು ಭೀಕರ ವಿಮಾನ ದುರಂತ..!
1979ರ ನವೆಂಬರ್ ನಲ್ಲಿ ಇದೇ ಮೌಂಟ್ ಎರಬಸ್ ನಲ್ಲಿ ಭೀಕರ ವಿಮಾನ (Flight) ದುರಂತ ಸಂಭವಿಸಿತ್ತು. ಅಂದು Auckland Airport ನಿಂದ ಏರ್ ನ್ಯೂಜಿಲೆಂಡ್ (Air New Zealand) ವಿಮಾನ ತನ್ನ ಗಮ್ಯಕ್ಕಾಗಿ ಉಡ್ಡಯನ ನಡೆಸಿತ್ತು. ಹವಾಮಾನ, ವಿಸಿಬಿಲಿಟಿ ಎಲ್ಲಾ ಚೆನ್ನಾಗಿದೆ ಎಂದು ಪೈಲೆಟ್ ಗಳು (Pilot) ಸಂದೇಶ ರವಾನಿಸಿದ್ದರು. ಆದರೆ, ಏರ್ ನ್ಯೂಜಿಲ್ಯಾಂಡ್ ವಿಮಾನ ಮೌಂಟ್ ಎರಬಸ್ ಪರ್ವತದ ಬಳಿ ಬಂದಾಗ ನಡೆದ ಘಟನೆಗೆ ಪೈಲೆಟ್ ಗಳು ಬೆಚ್ಚಿಬಿದ್ದಿದ್ದರು. ಏನು ಮಾಡಬೇಕೆಂದು ಅವರಿಗೆ ಗೊತ್ತಾಗಿರಲಿಲ್ಲ. ಸಾವು ಕಣ್ಣ ಮುಂದೆ ನಿಂತಿತ್ತು. ಆಗಿದ್ದು ಮತ್ತೇನೂ ಅಲ್ಲ. ಅಲ್ಲಿವರೆಗೆ ವಾತಾವರಣ ಸ್ಪಷ್ಟವಾಗಿತ್ತು.
ಎರಬಸ್ ಪರ್ವತದ ಬಳಿ ಬರುತ್ತಿದ್ದಂತೆಯೇ ಪೈಲೆಟ್ ಅಪ್ಟಿಕಲ್ ಗೊಂದಲ (optical illusion) ದಲ್ಲಿ ಸಿಲುಕಿದ್ದರು. ಅವರಿಗೆ ಎಲ್ಲೆಡೆ ಕೇವಲ ಬಿಳಿ ಹಾಳೆಗಳೇ ಕಾಣಿಸುತ್ತಿತ್ತು. ಮುಂದೇನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ.ಮುಂದೆ ಉಡ್ಡಯನಗೊಳ್ಳದೇ ಅಲ್ಲೆ ಪತನಗೊಳ್ಳುತ್ತೆ ನತದೃಷ್ಟ ಏರ್ ನ್ಯೂಜಿಲೆಂಡ್ ವಿಮಾನ.
20 ಸಿಬ್ಬಂದಿ ಮತ್ತು 237 ಪ್ರಯಾಣಿಕರು ಅಲ್ಲೇ ಸಾವನ್ನಪ್ಪುತ್ತಾರೆ. ಆ ವಿಮಾನ ಪತನದ ಕಾರಣ ಹುಡುಕಲು ಪ್ರತಿವರ್ಷ ಸಾವಿರಾರು ಸಂಶೋಧಕರು ಮೌಂಟ್ ಎರೆಬಸ್ ತಲುಪುತ್ತಾರೆ.
ಇದನ್ನೂ ಓದಿ : ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA
ಇದೀಗ ಅದೇ ಸ್ಥಳದಲ್ಲಿ ವಿಚಿತ್ರ ಆಕೃತಿಯೊಂದು ಸೃಷ್ಟಿಯಾಗಿದೆ. ಈ ಆಕೃತಿಗೂ ಮೌಂಟ್ ಎರಬಸ್ ಹಿಮಪರ್ವತಕ್ಕೂ ಸಂಬಂಧ ಇರಬಹುದಾ ಎಂದು ನಾಸಾ (NASA) ಪಂಡಿತರು ತಲೆಕೆಡಿಸಿಕೊಂಡಿದ್ದಾರೆ.