ಮಾಸ್ಕೋ: ಅರ್ಮೇನಿಯಾದ ಗಡಿಯ ಸಮೀಪ ಅಜರ್ಬೈಜಾನ್ (Azerbaijan) ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಈ ದಾಳಿಯಲ್ಲಿ ರಷ್ಯಾದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ದಾಳಿಯ ನಂತರ ರಷ್ಯಾದ (Russia) ಪ್ರತಿಕ್ರಿಯೆಗೆ ಹೆದರಿರುವ ಅಜೆರ್ಬೈಜಾನ್ ಈ ಘಟನೆಯ ಬಗ್ಗೆ ಕ್ಷಮೆಯಾಚಿಸಿದೆ. ಅದೇ ಸಮಯದಲ್ಲಿ  ಹತ್ಯೆಗೀಡಾದ ಸಿಬ್ಬಂದಿಯ ಕುಟುಂಬಕ್ಕೆ ಸರಿಯಾದ ಪರಿಹಾರವನ್ನು ನೀಡುವ ಬಗ್ಗೆಯೂ ಉಲ್ಲೇಖಿಸಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅರ್ಮೇನಿಯಾ ಪ್ರದೇಶದಲ್ಲಿ ರಷ್ಯಾದ ಹೆಲಿಕಾಪ್ಟರ್ :
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಸೋಮವಾರ ಅದರ MI-24 ಅನ್ನು ಅರ್ಮೇನಿಯಾದ (Armenia) ಯಾರ್ಸಖ್ ಗ್ರಾಮದ ಪ್ರದೇಶದಲ್ಲಿ ಅಜೆರ್ಬೈಜಾನ್ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಹೆಲಿಕಾಪ್ಟರ್ ನ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಸದಸ್ಯ ಗಂಭೀರವಾಗಿ ಗಾಯಗೊಂಡಿದ್ದಾನೆ. ಅರ್ಮೇನಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ರಷ್ಯಾದ 102 ನೇ ಮಿಲಿಟರಿ ನೆಲೆಯ ಭದ್ರತೆಯಲ್ಲಿ ಹೆಲಿಕಾಪ್ಟರ್ ಇತ್ತು. ರಷ್ಯಾದ ಸೈನ್ಯದ ಪ್ರಕಾರ ಹೆಲಿಕಾಪ್ಟರ್ ದಾಳಿ ಮಾಡಿದ ಸ್ಥಳವು ನಾಗೋರ್ನೊ-ಕಾರ್ಬಖ್ನಲ್ಲಿನ ಸಕ್ರಿಯ ಯುದ್ಧಭೂಮಿಯಲ್ಲಿ ಬರುವುದಿಲ್ಲ.


Armenia-Azerbaijan war: 5ಸಾವಿರಕ್ಕೂ ಹೆಚ್ಚು ಮಂದಿ ಸಾವು, ಮತ್ತೆ ವಿಶ್ವ ಯುದ್ಧದ ಬೆದರಿಕೆ


ಅಜರ್ಬೈಜಾನ್ ವಿಷಾದ :
ಘಟನೆಯ ನಂತರ ರಷ್ಯಾದ ಕಠಿಣ ಪ್ರತಿಕ್ರಿಯೆಯಿಂದ ಭಯಭೀತರಾಗಿರುವ ಅಜೆರ್ಬೈಜಾನ್ ಈ ವಿಷಯದಲ್ಲಿ ಕ್ಷಮೆಯಾಚಿಸಿದೆ. ಅರ್ಮೇನಿಯಾ ಗಡಿಯ ಬಳಿ ರಷ್ಯಾದ ಹೆಲಿಕಾಪ್ಟರ್ ಅನ್ನು ತನ್ನ ಪಡೆಗಳು ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಅಜೆರ್ಬೈಜಾನ್ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಈ ಘಟನೆಯಿಂದ ತೀವ್ರ ದುಃಖಿತರಾಗಿರುವುದಾಗಿ ತಿಳಿಸಿರುವ ಅಜರ್ಬೈಜಾನ್ ಈ ಘಟನೆಗೆ ವಿಷಾದಿಸುವುದಾಗಿ ಮಾಸ್ಕೋಗೆ ತಿಳಿಸಿದೆ. ಈ ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿ ಸದಸ್ಯರ ಕುಟುಂಬಗಳಿಗೆ ಪರಿಹಾರ ನೀಡಲು ಅವರು ಸಿದ್ಧರಾಗಿದ್ದಾರೆ ಎಂದು ಅದು ಹೇಳಿದೆ.


29 ದಿನಗಳ ನಂತರ ಅರ್ಮೇನಿಯಾ-ಅಜೆರ್ಬೈಜಾನ್‌ನಲ್ಲಿ ಮರಳಿದ ಶಾಂತಿ


ಕಳೆದ ಒಂದು ತಿಂಗಳಿನಿಂದ ಭೀಕರ ಯುದ್ಧ:
ಶಿಯಾನ ಪ್ರಾಬಲ್ಯದ ಅಜೆರ್ಬೈಜಾನ್ ಮತ್ತು ಕ್ರಿಶ್ಚಿಯನ್ ಪ್ರಾಬಲ್ಯದ ಅರ್ಮೇನಿಯಾ ನಡುವೆ ನಾಗಾನೊ-ಕರಬಖ್ ನಡುವೆ ಕಳೆದ ಒಂದು ತಿಂಗಳಿನಿಂದ ಭೀಕರ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಎರಡೂ ಕಡೆಯಿಂದ ಸಾವಿರಾರು ಜನರು ಬಲಿಯಾಗಿದ್ದಾರೆ.  ಈ ಯುದ್ಧದಲ್ಲಿ ಟರ್ಕಿ ಬಹಿರಂಗವಾಗಿ ಅಜರ್ಬೈಜಾನ್ ಅನ್ನು ಬೆಂಬಲಿಸುವ ಮೂಲಕ ಇಸ್ಲಾಮಿಕ್ ಕಾರ್ಡ್ ಆಡುತ್ತಿದೆ. ರಷ್ಯಾ, ಫ್ರಾನ್ಸ್ ಮತ್ತು ಅಮೆರಿಕವು ಅರ್ಮೇನಿಯಾಕ್ಕೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಆಶಯ ವ್ಯಕ್ತಪಡಿಸಿವೆ.