ಬೀಜಿಂಗ್ : ಚೀನಾದಲ್ಲಿ  (China) ನಡೆಯುತ್ತಿದ್ದ ವಿವಾಹದ ಸಂದರ್ಭದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದುವೆಗೆ ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಷ್ಟರಲ್ಲಿ ವಧು ತನ್ನ ಸಹೋದರಿ ಎಂಬ ಸತ್ಯ ವರನಿಗೆ ತಿಳಿದಿದೆ. ಚೀನಾದ ಜಿಯಾಂಗ್ಸು ಪ್ರಾಂತ್ಯದ ಸೊಜೊವ್ ನಲ್ಲಿ ನಡೆದ ವಿವಾಹ  ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವಧುವಿನ ಕೈಯಲ್ಲಿದ್ದ ಮಚ್ಚೆಯಿಂದಾಗಿ ಈ ಸತ್ಯ ಬೆಳಕಿಗೆ ಬಂತು ಎನ್ನಲಾಗಿದೆ.  


COMMERCIAL BREAK
SCROLL TO CONTINUE READING

ಬರ್ತ್ ಮಾರ್ಕ್ ನಿಂದಾಗಿ ವಧುವನ್ನು ಪತ್ತೆ ಹಚ್ಚಿದ ತಾಯಿ :
ಮದುವೆ ನಡೆಯುತ್ತಿದ್ದ ವೇಳೆ ,  ವಧುವಿನ ಕೈಯಲ್ಲಿರುವ  ಬರ್ತ್ ಮಾರ್ಕ್(Birth Mark)  ಮೇಲೆ ವರನ ತಾಯಿಯ ಕಣ್ಣು ಬಿದ್ದಿದೆ. ಇದನ್ನು ನೋಡಿದ ತಕ್ಷಣ ತಾಯಿ (Mother)  ಜೋರಾಗಿ ಅಳಲು ಆರಂಭಿಸಿದ್ದಾರೆ. ಈ ವಧು ಬಾಲ್ಯದಲ್ಲಿ ಕಳೆದುಹೋಗಿರುವ ತನ್ನದೇ ಮಗಳು ಎಂಬ ವಿಚಾರವನ್ನು ಹೇಳಿದ್ದಾರೆ. ಈ ಮಾತು ಕೇಳಿದ ಎಲ್ಲರೂ ಅರೆ ಕ್ಷಣ ಗಾಬರಿಯಾಗಿದ್ದಾರೆ. ನಂತರ, ಹುಡುಗಿಯ ಪೋಷಕರನ್ನು ಪ್ರಶ್ನಿಸಲಾಗಿದೆ. ಈ ವೇಳೆ, 20 ವರ್ಷಗಳ ಹಿಂದೆ ಹುಡುಗಿಯನ್ನು ದತ್ತು (Adopted) ಪಡೆದಿರುವ ವಿಷಯವನ್ನು ಅವರೂ ಬಹಿರಂಗಪಡಿಸಿದ್ದಾರೆ. ಬಾಲಕಿ ರಸ್ತೆ ಬದಿಯಲ್ಲಿ ಪತ್ತೆಯಾಗಿರುವುದಾಗಿ ಹೇಳಿದ್ದಾರೆ.  


ಇದನ್ನೂ ಓದಿ : Indonesia: ಭಾರೀ ಮಳೆ ಪ್ರವಾಹದಿಂದಾಗಿ 23 ಮಂದಿ ಸಾವು


ವಿಚಾರ ತಿಳಿದ ಮೇಲೂ ವಿವಾಹ ನೆರವೇರಿತು : 
ತನ್ನ ನಿಜವಾದ ತಾಯಿಯನ್ನು (Mother)  ನೋಡಿ, ವಧು ಭಾವುಕಳಾಗಿದ್ದಂತು ಸುಳ್ಳಲ್ಲ. ಈ ಎಲ್ಲಾ ಸತ್ಯ ತಿಳಿದ ಮೇಲೂ ಮದುವೆ (Marriage) ನಡೆದೇ ಹೋಯಿತು. ಮದುವೆಗೆ ಯಾರೂ ಅಡ್ಡಿಪಡಿಸಲಿಲ್ಲ. ಹೌದು ಇಡೀ ಘಟನೆಗೆ ತಿರುವು ಸಿಕ್ಕಿದ್ದೇ ಮತ್ತೊಂದು ಸತ್ಯ ಗೊತ್ತಾದ ಮೇಲೆ.  ತನ್ನ ಮಗಳನ್ನು ಕಳೆದುಕೊಂಡ ಮೇಲೆ ಯುವತಿಯ ಹೆತ್ತವರು ೨೦ ವರ್ಷಗಳ ಹಿಂದೆ ಮಗನನ್ನು ಕೂಡಾ ದತ್ತು ಪಡೆದುಕೊಂಡಿದ್ದರು. ಹಾಗಾಗಿ ಯಾವುದೇ ಅಡೆತಡೆಗಳಿಲ್ಲದೆ ಈ ವಿವಾಹವನ್ನು ನೆರೆವೇರಿಸಲಾಯಿತು. 


ಇದನ್ನೂ ಓದಿ : Yoga: ಈ ದೇಶದಲ್ಲಿ 28 ವರ್ಷಗಳಿಂದ ಯೋಗ ಬ್ಯಾನ್, ಕಾರಣ ಏನ್ ಗೊತ್ತಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.