ದಕ್ಷಿಣ-ಉತ್ತರ ಕೊರಿಯಾವನ್ನು ರಸ್ತೆ-ರೈಲು ಮಾರ್ಗದ ಮೂಲಕ ಸಂಪರ್ಕಿಸಲು ಉಭಯ ದೇಶಗಳ ಸಮ್ಮತಿ
ಉತ್ತರ ಕೊರಿಯಾದಲ್ಲಿ ಜನಿಸಿರುವ ಐದು ಮಂದಿ, 100 ದಕ್ಷಿಣ ಕೊರಿಯಾ ನಾಗರೀಕರು ಸೇರಿದಂತೆ ಹಲವು ಅಧಿಕಾರಿಗಳನ್ನೊಳಗೊಂಡ ವಿಶೇಷ ರೈಲು ಬೆಳಿಗ್ಗೆ ಸಿಯೋಲ್ ರೈಲು ನಿಲ್ದಾಣದಿಂದ ಹೊರಟಿದೆ.
ಸಿಯೋಲ್: ದಕ್ಷಿಣ-ಉತ್ತರ ಕೊರಿಯಾ ಎರಡೂ ದೇಶವನ್ನು ಸಂಪರ್ಕಿಸುವ ರಸ್ತೆ ಮತ್ತು ರೈಲು ಮಾರ್ಗವನ್ನು ಮತ್ತೊಮ್ಮೆ ಜೋಡಿಸುವ ಕಾರ್ಯ ನಡೆದಿದೆ. ರಸ್ತೆ ಮತ್ತು ರೈಲ್ವೆ ಮಾರ್ಗಗಳನ್ನು ಮತ್ತೊಮ್ಮೆ ಕೊರಿಯನ್ ಪೆನಿನ್ಸುಲಾದೊಳಗೆ ಸಂಪರ್ಕಿಸಲು ಆಯೋಜಿಸಲಾಗಿದೆ. ದಕ್ಷಿಣ ಕೊರಿಯಾದ ಒಂದು ನಿಯೋಗ ಶಿಲಾನ್ಯಾಸಕ್ಕಾಗಿ ಇಂದು ಉತ್ತರ ಕೊರಿಯಾವನ್ನು ತಲುಪಿವೆ.
ಎರಡು ಕೊರಿಯಾ ದೇಶಗಳ ನಡುವಿನ ಪರಮಾಣು ನಿರಸ್ತ್ರೀಕರಣದ ಬಗ್ಗೆ ಮಾತುಕತೆ ನಡಿಸಿದ ಸಮಯದಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿದೆ.
ಉತ್ತರ ಕೊರಿಯಾದಲ್ಲಿ ಜನಿಸಿರುವ ಐದು ಮಂದಿ, 100 ದಕ್ಷಿಣ ಕೊರಿಯಾ ನಾಗರೀಕರು ಸೇರಿದಂತೆ ಹಲವು ಅಧಿಕಾರಿಗಳನ್ನೊಳಗೊಂಡ ವಿಶೇಷ ರೈಲು ಬೆಳಿಗ್ಗೆ ಸಿಯೋಲ್ ರೈಲು ನಿಲ್ದಾಣದಿಂದ ಹೊರಟಿದೆ. ಇಲ್ಲಿಂದ ಉತ್ತರ ಕೊರಿಯಾದ ಗಡಿ ನಗರ ಕಯಸೊಂಗ್ ಮಾರ್ಗವು ಎರಡು ಗಂಟೆಗಳ ಪ್ರಯಾಣ.
ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್
ದಕ್ಷಿಣ ಕೊರಿಯಾದ ರಾಷ್ಟ್ರಪತಿ ಮೂನ್ ಜೈ-ಇನ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಅವರು ಪಯೋಂಗ್ಯಾಂಗ್ನಲ್ಲಿ (ಸೆಪ್ಟೆಂಬರ್ನಲ್ಲಿ) ಮೂರನೇ ಶೃಂಗಸಭೆಯಲ್ಲಿ ವರ್ಷದ ಕೊನೆಯಲ್ಲಿ ಉಭಯ ದೇಶಗಳನ್ನು ಸಂಪರ್ಕಿಸುವ ರಸ್ತೆ-ರೈಲು ಮಾರ್ಗವನ್ನು ಮತ್ತೆ ಆರಂಭಿಸಲು ಸಮ್ಮತಿಸಿದರು.