AstraZeneca vaccine  Latest Update - ಈ ಕುರಿತು ಹೇಳಿಕೆ ನೀಡಿರುವ UK ಔಷಧಿ ನಿಯಂತ್ರಕ, ಕೊರೊನಾ ವೈರಸ್ ವಿರೋಧಿ ಲಸಿಕೆ ಹಾಕಿಸಿಕೊಂಡ ಬಳಿಕ ರಕ್ತ ಹೆಪ್ಪುಗಟ್ಟಿದ (Blood Clotting) ಒಟ್ಟು 30 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅವರಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಎಂದು ಹೇಳಿದೆ. ಆದರೆ, ಈ ಅಪಾಯದ ಹೋಲಿಕೆಯಲ್ಲಿ ಲಸಿಕೆಯ(Astrazeneca Vaccine) ಲಾಭಗಳು ಅಧಿಕವಾಗಿವೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಔಷಧಿ ಹಾಗೂ ಆರೋಗ್ಯ ರಕ್ಷಣೆ ನಿಯಂತ್ರಕ ಸಂಸ್ಥೆಯ ಹೇಳಿಕೆಯ ಪ್ರಕಾರ ರಕ್ತ ಹೆಪ್ಪುಗಟ್ಟುವಿಕೆಯಿಂದಾಗುವ ಅಪಾಯ ತೀರಾ ಕಡಿಮೆಯಾಗಿದ್ದು, ಜನರು ಲಸಿಕೆ (Corona Vaccine) ಹಾಕಿಸುವುದನ್ನು ಮುಂದುವರೆಸಬೇಕು ಎಂದು ಹೇಳಿದೆ.


ಈ ಎಲ್ಲಾ ಪ್ರಕರಣಗಳು ಮಾರ್ಚ್ 24ರವರೆಗೆ ಮಾತ್ರ ಬೆಳಕಿಗೆ ಬಂದಿವೆ. ಮಾರ್ಚ್ 24ರವರೆಗೆ ಸುಮಾರು 1.81 ಕೋಟಿ ಲಸಿಕೆಯ ಪ್ರಮಾಣಗಳನ್ನು ನೀಡಲಾಗಿದೆ ಹಾಗೂ ಫೈಜರ್-ಬಯೋ-ಎನ್-ಟೆಕ್ ಲಸಿಕೆಗೆ ಸಂಬಂಧಿಸಿದಂತೆ ಈ ರೀತಿಯ ಯಾವುದೇ ವರದಿಗಳು ಇದುವರೆಗೆ ಗಮನಿಸಲಾಗಿಲ್ಲ ಎಂದಿದೆ.


ಇದನ್ನೂ ಓದಿ-Covid 19: ತಾರಕಕ್ಕೇರಿದ ಕರೋನಾ, ಫ್ರಾನ್ಸ್‌ನಲ್ಲಿ ಮೂರನೇ ಬಾರಿಗೆ ಲಾಕ್‌ಡೌನ್ ಘೋಷಣೆ


Astrazenecaಗೆ ಸಂಬಂಧಿಸಿದ ಈ ಆತಂಕದ ಹಿನ್ನೆಲೆ ಕೆನಡಾ, ಫ್ರಾನ್ಸ್, ಜರ್ಮನಿ ಹಾಗೂ ನೆದರ್ಲ್ಯಾಂಡ್  ಗಳಂತಹ ಕೆಲ ದೇಶಗಳಲ್ಲಿ ವೃದ್ಧರಿಗೆ ಈ ಲಸಿಕೆಯನ್ನು ಹಾಕದಿರಲು ಸೂಚಿಸಲಾಗಿದೆ. 


ಇದನ್ನೂ ಓದಿ-ಭಾರತದ ಜೊತೆಗಿನ ವ್ಯಾಪಾರ ಪುನರಾರಂಭದ ವಿಚಾರವಾಗಿ ಯೂಟರ್ನ್ ಹೊಡೆದ ಪಾಕ್


ವಿಶ್ವಆರೋಗ್ಯ ಸಂಘಟನೆ ವಿವಿಧ ದೇಶಗಳಿಗೆ ಈ ಲಸಿಕೆಯ ಬಳಕೆಯನ್ನು ಜಾರಿಯಲ್ಲಿಡುವಂತೆ ಆಗ್ರಹಿಸಿದೆ. 


ಇದನ್ನೂ ಓದಿ- Yoga: ಈ ದೇಶದಲ್ಲಿ 28 ವರ್ಷಗಳಿಂದ ಯೋಗ ಬ್ಯಾನ್, ಕಾರಣ ಏನ್ ಗೊತ್ತಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.