ಲಂಡನ್ : ರಾಜೀನಾಮೆ ಘೋಷಿಸಿದ ಬ್ರಿಟನ್‌ನ ಪ್ರಧಾನಿ ಲಿಜ್ ಟ್ರಸ್ ಅವರು ಗುರುವಾರದಂದು ತಾನು ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಯುಕೆ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ಡೌನಿಂಗ್ ಸ್ಟ್ರೀಟ್‌ನ ಹೊರಗಿನಿಂದ ಅವರು ಮಾಡಿದ ಭಾಷಣದಲ್ಲಿ ಅವರು ತಮ್ಮ ರಾಜೀನಾಮೆಯ ಬಗ್ಗೆ ಈಗಾಗಲೇ ಬ್ರಿಟನ್ ರಾಜನ ಜೊತೆ ಮಾತನಾಡಿದ್ದು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಅವರು ಪ್ರಧಾನಿಯಾಗಿರುವುದಾಗಿ ಹೇಳಿದ್ದಾರೆ.ಇತ್ತೀಚಿಗಿನ ಟ್ರುಸ್ ಅವರ ಆರ್ಥಿಕ ನೀತಿಯ ವಿಚಾರವಾಗಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು, ಹಾಗಾಗಿ ಕೇವಲ ಆರು ವಾರಗಳಲ್ಲಿ ಪ್ರಧಾನಿ ಹುದ್ದೆಯನ್ನು ತೊರೆಯುವ ಒತ್ತಡ ತೀವ್ರಗೊಂಡಿತ್ತು.


ಇದನ್ನೂ ಓದಿ : ಬಿಜೆಪಿ ಜೊತೆ ಮತ್ತೆ ನಿತೀಶ್ ಸಂಪರ್ಕದಲ್ಲಿದ್ದಾರೆ- ಪ್ರಶಾಂತ್ ಕಿಶೋರ್


'ನಾನು ದೊಡ್ಡ ಆರ್ಥಿಕ ಮತ್ತು ಅಂತರಾಷ್ಟ್ರೀಯ ಅಸ್ಥಿರತೆಯ ಸಮಯದಲ್ಲಿ ಅಧಿಕಾರಕ್ಕೆ ಬಂದಿದ್ದೇನೆ.ಕುಟುಂಬಗಳು ಮತ್ತು ವ್ಯವಹಾರಗಳು ತಮ್ಮ ಬಿಲ್‌ಗಳನ್ನು ಹೇಗೆ ಪಾವತಿಸಬೇಕೆಂದು ಚಿಂತಿತರಾಗಿದ್ದವು, ಉಕ್ರೇನ್‌ನಲ್ಲಿ ಪುಟಿನ್ ಅವರ ಅಕ್ರಮ ಯುದ್ಧವು ನಮ್ಮ ಇಡೀ ಖಂಡದ ಭದ್ರತೆಗೆ ಬೆದರಿಕೆ ಹಾಕುತ್ತದೆ ಮತ್ತು ಇದರಿಂದಾಗಿ ಆರ್ಥಿಕ ಬೆಳವಣಿಗೆ ಕುಸಿದಿದೆ' ಎಂದು ಅವರು ಹೇಳಿದರು.ಕನ್ಸರ್ವೇಟಿವ್ ಪಕ್ಷದಿಂದ ಚುನಾಯಿತನಾದ ಜನಾದೇಶವನ್ನು ನೀಡಲು ಸಾಧ್ಯವಿಲ್ಲ, ಹಾಗಾಗಿ ನಾನು ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಅವರು ಹೇಳಿದರು.


ಇದನ್ನೂ ಓದಿ : ಖರ್ಗೆ ಅಧ್ಯಕ್ಷರಾಗುತ್ತಿದ್ದಂತೆ ಹಳೆ ಸಂಪ್ರದಾಯ ಮುರಿದ ಸೋನಿಯಾ ಗಾಂಧಿ..!


'ಇಂದು ಬೆಳಿಗ್ಗೆ ನಾನು 1922 ರ ಸಮಿತಿಯ ಅಧ್ಯಕ್ಷ ಸರ್ ಗ್ರಹಾಂ ಬ್ರಾಡಿ ಅವರನ್ನು ಭೇಟಿಯಾದೆ.ಮುಂದಿನ ವಾರದೊಳಗೆ ಪೂರ್ಣಗೊಳ್ಳುವ ನಾಯಕತ್ವದ ಚುನಾವಣೆ ನಡೆಯಲಿದೆ ಎಂದು ನಾವು ಒಪ್ಪಿಕೊಂಡಿದ್ದೇವೆ. ಇದು ನಮ್ಮ ಹಣಕಾಸಿನ ಯೋಜನೆಗಳನ್ನು ತಲುಪಿಸುವ ಹಾದಿಯಲ್ಲಿ ಉಳಿಯುವುದನ್ನು ಖಚಿತಪಡಿಸುತ್ತದೆ. ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ನಾನು ಪ್ರಧಾನಿಯಾಗಿಯೇ ಇರುತ್ತೇನೆ,” ಎಂದು ಅವರು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.