ಖರ್ಗೆ ಅಧ್ಯಕ್ಷರಾಗುತ್ತಿದ್ದಂತೆ ಹಳೆ ಸಂಪ್ರದಾಯ ಮುರಿದ ಸೋನಿಯಾ ಗಾಂಧಿ..!

ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಪ್ಲ್ಯಾನ್ ಜನಪಥ್ ನಲ್ಲಿರುವ ಸೋನಿಯಾ ಗಾಂಧಿಯವರ ಮನೆಗೆ ತೆರಳುವುದಾಗಿತ್ತು, ಆದರೆ ಅವರು ಅಪಾಯಿಂಟ್ ಮೆಂಟ್ ಕೇಳಿದರೂ ಸೋನಿಯಾ ಗಾಂಧಿ ಅವರಿಗೆ ಕೊಡಲಿಲ್ಲ...!

Written by - Zee Kannada News Desk | Last Updated : Oct 19, 2022, 08:31 PM IST
  • ಇದಕ್ಕೂ ಮೊದಲು ರಾಹುಲ್ ಗಾಂಧಿ ತಮ್ಮ ಪಾತ್ರವನ್ನು ನೂತನ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.
  • ಸಾಮಾನ್ಯವಾಗಿ ಪಕ್ಷದ ಹೈಕಮಾಂಡ್ ಪಕ್ಷದ ಯಾವುದೇ ನಾಯಕರ ಮನೆಗೆ ಭೇಟಿ ನೀಡುವುದು ಅಪರೂಪ,
  • ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇದಕ್ಕೆ ಹೊರತಾಗಿದ್ದರು.
ಖರ್ಗೆ ಅಧ್ಯಕ್ಷರಾಗುತ್ತಿದ್ದಂತೆ ಹಳೆ ಸಂಪ್ರದಾಯ ಮುರಿದ ಸೋನಿಯಾ ಗಾಂಧಿ..! title=

ನವದೆಹಲಿ: ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಪ್ಲ್ಯಾನ್ ಜನಪಥ್ ನಲ್ಲಿರುವ ಸೋನಿಯಾ ಗಾಂಧಿಯವರ ಮನೆಗೆ ತೆರಳುವುದಾಗಿತ್ತು, ಆದರೆ ಅವರು ಅಪಾಯಿಂಟ್ ಮೆಂಟ್ ಕೇಳಿದರೂ ಸೋನಿಯಾ ಗಾಂಧಿ ಅವರಿಗೆ ಕೊಡಲಿಲ್ಲ...!

ಹೌದು, ಈಗ ಸೋನಿಯಾ ಗಾಂಧಿಯವರು ಖರ್ಗೆಯವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜಾಜಿ 10 ನೇ ಮಾರ್ಗ್ ದಲ್ಲಿರುವ ಖರ್ಗೆಯವರ ಮನೆಗೆ ಭೇಟಿ ನೀಡುವ ಮೂಲಕ ಹಳೆಯ ಸಂಪ್ರದಾಯಕ್ಕೆ ಈಗ ಕೊನೆ ಹಾಡಿದ್ದಾರೆ. ಆ ಮೂಲಕ ಈಗ ಪಕ್ಷದ ಶಕ್ತಿ ಕೇಂದ್ರ ಖರ್ಗೆಯವರ ಮನೆಯೇ ಆಗಿರುತ್ತದೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಸಾಮಾನ್ಯವಾಗಿ ಪಕ್ಷದ ಹೈಕಮಾಂಡ್ ಪಕ್ಷದ ಯಾವುದೇ ನಾಯಕರ ಮನೆಗೆ ಭೇಟಿ ನೀಡುವುದು ಅಪರೂಪ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇದಕ್ಕೆ ಹೊರತಾಗಿದ್ದರು.

ಇದನ್ನೂ ಓದಿ: ಬೆಂಕಿಯಲ್ಲಿ ಅರಳಿದ ಹೂ ಖರ್ಗೆ...!

2015 ರಲ್ಲಿ, ಕಲ್ಲಿದ್ದಲು ಹಗರಣದಲ್ಲಿ ಎರಡು ಬಾರಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಸಮನ್ಸ್ ನೀಡಿದ ನಂತರ ಇದನ್ನು ವಿರೋಧಿಸಿ ಸೋನಿಯಾ ಗಾಂಧಿ ಅವರು ತಮ್ಮ ಪಕ್ಷದ ಕಚೇರಿಯಿಂದ ಮನಮೋಹನ್ ಸಿಂಗ್ ಅವರ ಮನೆವರೆಗೂ ಹಮ್ಮಿಕೊಂಡಿದ್ದ  ಕಾಂಗ್ರೆಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮೊದಲು ರಾಹುಲ್ ಗಾಂಧಿ ತಮ್ಮ ಪಾತ್ರವನ್ನು ನೂತನ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News