ಲ್ಯಾನ್ಛೌ: ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮೊದಲಿಗೆ ವುಹಾನ್‌ನಿಂದ ಹುಟ್ಟಿದ ಕೊರೊನಾವೈರಸ್‌ (Coronavirus) ನೊಂದಿಗೆ ಜಗತ್ತು ಇನ್ನೂ ಹೋರಾಡುತ್ತಿದೆ, ಈ ಮಧ್ಯೆ ಚೀನಾದಲ್ಲಿ ಮತ್ತೊಂದು ವೈರಸ್ ಸದ್ದು ಮಾಡಿದೆ. ಚೀನಾ ಈಗ ಬ್ರೂಸೆಲೋಸಿಸ್ ವೈರಸ್ (Brucellosis Virus) ಎಂಬ ಜೂನೋಟಿಕ್ ಬ್ಯಾಕ್ಟೀರಿಯಾದ ಸೋಂಕಿನಿಂದ (Zoonotic bacterial infection) ಹಾನಿಗೊಳಗಾಗುತ್ತಿದೆ.


COMMERCIAL BREAK
SCROLL TO CONTINUE READING

ಎರಡು ತಿಂಗಳಲ್ಲಿ ದುಪ್ಪಟ್ಟಾದ ಪ್ರಕರಣ:
ಬ್ರೂಸೆಲೋಸಿಸ್ ವೈರಸ್‌ನಿಂದ 6 ಸಾವಿರಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಸರ್ಕಾರವು ಒಟ್ಟು 55,725 ಜನರ ಪರೀಕ್ಷೆಯನ್ನು ನಡೆಸಿದ್ದು, ಅದರಲ್ಲಿ 6,620 ಜನರಿಗೆ ಬ್ರೂಸೆಲೋಸಿಸ್ ವೈರಸ್ ಸೋಂಕು ತಗುಲಿದೆ. ಈ ಜನರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಚೀನಾದ (China) ಗನ್ಸು ಪ್ರಾಂತ್ಯದ ರಾಜಧಾನಿಯಾದ ಲ್ಯಾನ್ಛೌ ಆರೋಗ್ಯ ಇಲಾಖೆ ದೃಢಪಡಿಸಿದೆ. 


ಕರೋನವೈರಸ್ ಅನ್ನು ವುಹಾನ್ ಲ್ಯಾಬ್‌ನಲ್ಲಿಯೇ ತಯಾರಿಸಲಾಗಿದೆ- ಚೀನಾದ ವೈರಾಲಜಿಸ್ಟ್


ಸೆಪ್ಟೆಂಬರ್ 14ರ ಹೊತ್ತಿಗೆ 3,245 ಬ್ರೂಸೆಲೋಸಿಸ್ ವೈರಸ್ ಪ್ರಕರಣಗಳು ಕಂಡುಬಂದಿವೆ ಎಂದು ಸ್ಥಳೀಯ ಸರ್ಕಾರ ಒಪ್ಪಿಕೊಂಡಿದೆ. ಎರಡು ತಿಂಗಳಲ್ಲಿ ಈ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ.


ಸ್ವದೇಶದಲ್ಲಿ 3 ಗಂಭೀರ ಸಮಸ್ಯೆ ಎದುರಿಸುತ್ತಿರುವ ಚೀನಾ


ನಿರ್ಗಮಿಸಿದ ಜೈವಿಕ ಔಷಧೀಯ ಕಂಪನಿ:
ಬ್ರೂಸಿಲೋಸಿಸ್ ವೈರಸ್ ಅನ್ನು ಮಾಲ್ಟಾ ಫೀವರ್ ಎಂದೂ ಕರೆಯುತ್ತಾರೆ. ಚೀನಾದಲ್ಲಿ ಈ ಕಾಯಿಲೆಯ ರೋಗಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (World Health Organization) ಪ್ರಕಾರ ಸೋಂಕಿತ ಪ್ರಾಣಿಗಳು, ಡೈರಿ ಉತ್ಪನ್ನಗಳು ಅಥವಾ ಗಾಳಿಯೊಂದಿಗೆ ನೇರ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. ಈ ವೈರಸ್‌ನ ಲಕ್ಷಣಗಳು ಜ್ವರಕ್ಕೆ ಹೋಲುತ್ತವೆ. ಕಳೆದ ವರ್ಷ ಜೈವಿಕ ಔಷಧೀಯ ಕಂಪನಿಯೊಂದರಲ್ಲಿ ಉಂಟಾಗಿರುವ ಸೋರಿಕೆಯಿಂದಾಗಿ  ಚೀನಾದಲ್ಲಿ ಈ ವೈರಸ್ ಹರಡಿದೆ ಎಂದು ತಿಳಿದುಬಂದಿದೆ.