ನವದೆಹಲಿ: China Created Coronavirus In Wuhan Lab -  ಕೊರೊನಾ ವೈರಸ್ (Coronavirus) ಎಲ್ಲಿಂದ ಬಂತು? ಇದನ್ನು ಚೀನಾದ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿದೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದು ಬಾಕಿ ಇದೆ. ವಿಶ್ವಾದ್ಯಂತ ಇರುವ ಸಂಶೋಧಕರು ಹಾಗೂ ವಿಜ್ಞಾನಿಗಳು ಕೊರೊನಾದ ಉತ್ಪತ್ತಿ (Origin Of Coronavirus) ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಹುಡುಕಾಟದಲ್ಲಿ ತೊಡಗಿದ್ದಾರೆ. ಇದೆ ಸರಣಿಯಲ್ಲಿ ಇದೀಗ ಬ್ರಿಟಿಷ್ ಪ್ರೊಫೆಸರ್ ಯಂಗಸ್ ಡಗ್ಲಿಷ್ ಹಾಗೂ ನಾರ್ವೆ ವಿಜ್ಞಾನಿ ಡಾ. ಸೋರೆನಸ್ (Norwegian Scientist Dr. Birger Sorensen), ಕೊರೊನಾ ವೈರಸ್ ಚೀನಾ ಲ್ಯಾಬ್ ನಲ್ಲಿ ತಯಾರಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಇಬ್ಬರೂ ವಿಜ್ಞಾನಿಗಳು ತಮ್ಮ ತಮ್ಮ ಸಂಶೋಧನಾ ವರದಿಯಲ್ಲಿ, ಕೊರೊನಾ ವೈರಸ್ ಸ್ಯಾಂಪಲ್ ನಲ್ಲಿ 'ಯುನಿಕ್ ಫಿಂಗರ್ ಪ್ರಿಂಟ್'ಗಳು ಕಂಡುಬಂದಿದ್ದು, 'ಇವು ಲ್ಯಾಬ್ ನಲ್ಲಿ ವೈರಸ್ ಜೊತೆಗೆ ಚೆಲ್ಲಾಟದ ಬಳಿಕ ಮಾತ್ರ ಸಾಧ್ಯ' ಎಂದು ಹೇಳಿದ್ದಾರೆ. ಬ್ರಿಟನ್ ನ ನ್ಯೂಸ್  ವೆಬ್ ಸೈಟ್ ಆಗಿರುವ 'ಡೆಲಿ ಮೇಲ್' ಈ ಕುರಿತಾದ ವರದಿಯನ್ನು ಪ್ರಕಟಿಸಿ, ಇಬ್ಬರೂ ವೈಜಾನಿಕರ ಮೂಲಕ ಬರೆಯಲಾಗಿರುವ ಸಂಶೋಧನಾ ವರದಿಯನ್ನು ಉಲ್ಲೆಖ್ಸೀದೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಚೀನಾ ವೈಜ್ಞಾನಿಕರು 'ಗೆನ್ ಆಫ್ ಫಂಕ್ಷನ್' ಪ್ರಾಜೆಕ್ಟ್ ಮೇಲೆ ಕೆಲಸ ಮಾಡುವಾಗ ವುಹಾನ್ ನ ಲ್ಯಾಬ್ (Wuhan Lab China) ನಲ್ಲಿ ಈ ವೈರಸ್ ಅನ್ನು ತಯಾರಿಸಿದ್ದರು ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ. 'ಗೆನ್ ಆಫ್ ಫಂಕ್ಷನ್' ರಿಸರ್ಚ್ ಮೇಲೆ ಅಮೆರಿಕಾದಲ್ಲಿ ಅನಿರ್ಧಿಷ್ಟಾವಧಿಗಾಗಿ ಬ್ಯಾನ್ ಮಾಡಲಾಗಿದೆ. ಈ ರಿಸರ್ಚ್ ನಲ್ಲಿ ನೈಸರ್ಗಿಕವಾಗಿ ಉತ್ಪನ್ನಗೊಂಡ ವೈರಸ್ ಅನ್ನು ಹೆಚ್ಚು ಸಾಂಕ್ರಾಮಿಕವಾಗಿಸಲು ಲ್ಯಾಬ್ ನಲ್ಲಿ ಡೆವಲಪ್ ಮಾಡಲಾಗುತ್ತದೆ ಮತ್ತು ಇದರಿಂದ ಇದು ಮನುಷ್ಯರಲ್ಲಿ ಮತ್ತಷ್ಟು ಮಾರಕವಾಗುತ್ತದೆ. 


ಸಂಶೋಧನೆಯ ಪ್ರಕಾರ, ಚೀನಾ ವಿಜ್ಞಾನಿಗಳು ಗುಹೆಯಲ್ಲಿ ದೊರೆತ ಬಾವಲಿಯ ಬೆನ್ನೆಲುಬಿನಿಂದ ನೈಸರ್ಗಿಕ ಕೊರೊನಾ ವೈರಸ್ ಅನ್ನು ಪಡೆದುಕೊಂಡಿದ್ದಾರೆ ಹಾಗೂ ಈ ವೈರಸ್ ನಲ್ಲಿ ಹೊಸ ಸ್ಪೈಕ್ ವೊಂದನ್ನು ಜೋಡಿಸಿದ್ದಾರೆ. ಈ ಕಾರಣದಿಂದ ಅದು ಅತ್ಯಂತ ಸಾಂಕ್ರಾಮಿಕ ಹಾಗೂ ಮಾರಕ ಕೊವಿಡ್-19 ವೈರಸ್ ಆಗಿ ಪರಿವರ್ತನೆಗೊಂಡಿದೆ. ಇದಲ್ಲದೆ ಇಂತಹ ವೈರಸ್ ನಲ್ಲಿ ನೈಸರ್ಗಿಕ ಕೊವಿಡ್-19 ನ ಹಳೆಯ ಪ್ರಮಾಣ ಅಥವಾ ಅಂಶ ಸಿಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಲ್ಲದೆ ಲ್ಯಾಬ್ ನಲ್ಲಿ ವೈರಸ್ ಜೊತೆಗೆ ಚೆಲ್ಲಾಟದ ಪತ್ತೆಯಾಗದೇ ಇರಲಿ ಎಂಬ ಕಾರಣಕ್ಕೆ ವೈರಸ್ ನಲ್ಲಿ ರಿವರ್ಸ್ ಇಂಜಿನೀಯರಿಂಗ್ ಮಾಡಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಇದನ್ನೂ ಓದಿ-ಕೊರೊನಾದ ಮೂಲ ಕಂಡು ಹಿಡಿಯಲು ಡೆಡ್ ಲೈನ್ ನಿಗದಿಪಡಿಸಿದ ಯುಎಸ್ ಅಧ್ಯಕ್ಷ ಜೋ ಬಿಡೆನ್


ಈ ಕುರಿತು ಡೈಲಿ ಮೇಲ್ ಡಾಟ್ ಕಾಂ ಜೊತೆಗೆ ಮಾತನಾಡಿರುವ ಬ್ರಿಟಿಶ್ ಪ್ರೊಫೆಸರ್ ಎಂಗಸ್ ಡಗ್ಲಿಶ್ (British Professor Angus Dalgeish), 'ರೆಟ್ರೋ ಇಂಜಿನೀಯರಿಂಗ್ ಮೂಲಕ ವೈರಸ್ ಅನ್ನು ತಯಾರಿಸಲಾಗಿತ್ತು ಎಂಬುದು ನಮ್ಮ ಅನಿಸಿಕೆ. ಆದರೆ, ಬಳಿಕ ಅದನ್ನು ಬದಲಾಯಿಸಿ ಅದಕ್ಕೆ ಹಲವು ವರ್ಷಗಳ ಮೊದಲ ಸ್ಥಿತಿಯಲ್ಲಿರುವ ಸಿಕ್ವೆನ್ಸಿಂಗ್ ನೀಡಲಾಗಿದೆ" ಎಂದಿದ್ದಾರೆ. ಇದಲ್ಲದೆ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ವುಹಾನ್ ಪ್ರಯೋಗಾಲಯದಲ್ಲಿ ಸಾಕ್ಷಾಧಾರಗಳನ್ನು ನಷ್ಟಪಡಿಸಿರುವುದರ ಕುರಿತು ಗಂಭೀರವಾಗಿ ಪ್ರಶ್ನಿಸಿ, ಈ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಬಯಸಿದ ವಿಜ್ಞಾನಿಗಳು ಇದುವರೆಗೆ ತಮ್ಮ ಬಾಯಿ ತೆರೆಯಲು ಯಶಸ್ವಿಯಾಗಿಲ್ಲ ಅಥವಾ ಅವರು ಕಣ್ಮರೆಯಾಗಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚಿನ ಕೆಲ ತಿಂಗಳಿನಲ್ಲಿ ವಿಶ್ವದ ಬಹುತೇಕ ವಿಜ್ಞಾನಿಗಳು ಈ ವೈರಸ್ ನೈಸರ್ಗಿಕವಾಗಿ ಉತ್ಪನ್ನವಾಗಿದ್ದು, ಪ್ರಾಣಿಗಳಿಂದ ಇದು ಮನುಷ್ಯರಿಗೆ ಹರಡಿದೆ ಎಂದಿದ್ದಾರೆ.  ಇತ್ತೀಚೆಗಷ್ಟೇ ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿಗೆ ನೀಡಲಾಗಿರುವ ಆರ್ಥಿಕ ನೆರವನ್ನು ಸಮರ್ಥಿಸಿ ಮಾತನಾಡಿದ್ದ ಅಮೆರಿಕಾದ ತಜ್ಞ ಡಾಕ್ಟರ್ ಅಂತೋನಿ ಫೌಚಿ, ಅಮೆರಿಕಾದ ಈ ಆರ್ಥಿಕ ನೆರವು 'ಗೆನ್ ಆಫ್ ಫಂಕ್ಷನ್' ಸಂಶೋಧನೆಗಾಗಿ ನೀಡಲಾಗಿರಲಿಲ್ಲ ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ- Corona Vaccine ಹಾಕಿಸಿಕೊಂಡ ವಿಶ್ವದ ಮೊಟ್ಟಮೊದಲ ಪುರುಷ William Shakespeare ನಿಧನ


ಇನ್ನೊಂದೆಡೆ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಕೂಡ ಅಮೆರಿಕಾದ ಗುಪ್ತಚರರಿಗೆ ಕೊರೊನಾ ವೈರಸ್ ಉತ್ಪತ್ತಿ ಹೇಗೆ ಆಗಿದೆ? ಈ ಕುರಿತು ಪತ್ತೆಹಚ್ಚಲು ನಿರ್ದೇಶನಗಳನ್ನು ನೀಡಿದ್ದಾರೆ. ಇದಕ್ಕೂ ಮೊದಲು ಜನವರಿ 2021 ರಲ್ಲಿ ವುಹಾನ್ ಗೆ ಭೇಟಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ (WHO) ತಂಡ, ಕೊರೊನಾ ವೈರಸ್ ನೈಸರ್ಗಿಕ ರೂಪದಲ್ಲಿ ಹುಟ್ಟಿಕೊಂಡಿದೆ ಎಂದಿತ್ತು. ಇದಲ್ಲದೆ ತಂಡ ವೈರಸ್ ಕುರಿತು ಇನ್ನಾವುದೇ ಥಿಯರಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು.


ಇದನ್ನೂ ಓದಿ-Covid-19 Outbreak: Corona ಹರಡುವುದಕ್ಕು ಮುನ್ನ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ Wuhan Labನ ಮೂವರು ಸಿಬ್ಬಂದಿಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.