Covid-19 Outbreak: Corona ಹರಡುವುದಕ್ಕು ಮುನ್ನ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ Wuhan Labನ ಮೂವರು ಸಿಬ್ಬಂದಿಗಳು

Covid-19 Outbreak: ಕರೋನಾ ಸಾಂಕ್ರಾಮಿಕ ರೋಗ ಹರಡುವ ಮುನ್ನ, 2019 ರ ನವೆಂಬರ್‌ನಲ್ಲಿ, ವುಹಾನ್ ಲ್ಯಾಬ್‌ನ (Wuhan Lab) ಮೂವರು ಸಿಬ್ಬಂದಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು ಮತ್ತು  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಒಂದು ತಿಂಗಳ ನಂತರ, ಚೀನಾ ವತಿಯಿಂದ ಕರೋನಾ ಸಾಂಕ್ರಾಮಿಕ ರೋಗ ಹರಡುವ ವಿಷಯವನ್ನು ಬಹಿರಂಗಗೊಂಡಿತ್ತು.

Written by - Nitin Tabib | Last Updated : May 24, 2021, 02:15 PM IST
  • ಕೊರೊನಾಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಪ್ರಶ್ನೆ.
  • ವುಹಾನ್ ಲ್ಯಾಬ್ ನಲ್ಲಿ ಮೂವರು ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಾಗಿದ್ದರು.
  • ಅಮೆರಿಕಾದ ಗುಪ್ತಚರ ವರದಿಯಲ್ಲಿ ಈ ವಿಷಯ ಬಹಿರಂಗ.
Covid-19 Outbreak: Corona ಹರಡುವುದಕ್ಕು ಮುನ್ನ ಅನಾರೋಗ್ಯಕ್ಕೆ ತುತ್ತಾಗಿದ್ದರಂತೆ  Wuhan Labನ ಮೂವರು ಸಿಬ್ಬಂದಿಗಳು title=
Covid-19 Outbreak (File Photo)

ಬಿಜಿಂಗ್: Covid-19 Outbreak In ಚೀನಾ -  ಚೀನಾದ (China) ನಂತರ, ಕರೋನಾ ಸಾಂಕ್ರಾಮಿಕವು  ಇಡೀ ವಿಶ್ವಾದ್ಯಂತ  ಹರಡಿತು, ಅದು ಜನರ ಜೀವನವನ್ನು ಬದಲಾಯಿಸಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ. ಚೀನಾವು ಪ್ರಯೋಗಾಲಯದಲ್ಲಿ ವೈರಸ್ ತಯಾರಿಸಿದೆ ಮತ್ತು ಅದಕ್ಕೆ ಸಂಬಂಧಿಸಿದ ಡೇಟಾವನ್ನು ಮರೆಮಾಚಿದೆ ಎಂದು ಆರಂಭದಿಂದಲೂ ಆರೋಪಿಸಲಾಗುತ್ತಿದೆ. ಈ ಕುರಿತು ಇದೀಗ WHO ಸಹ ತನಿಖೆ ಮಾಡಿದೆ. ಈಗ ಚೀನಾದಲ್ಲಿನ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (Wuhan Institute of Virology) ಬಗ್ಗೆ ಮತ್ತೊಂದು ಗಂಭೀರ ಮತ್ತು ದೊಡ್ಡ ವಿಷಯವೊಂದು ಬಹಿರಂಗವಾಗಿದೆ.

ಮತ್ತೊಮ್ಮೆ ಚೀನಾ ವಿರುದ್ಧ ಎದ್ದ ಪ್ರಶ್ನೆಗಳು
ಕೋರೋನಾ ಸಾಂಕ್ರಾಮಿಕ ರೋಗ (Covid-19 Pandemic) ಹರಡುವ ಮುನ್ನ, 2019 ರ ನವೆಂಬರ್‌ನಲ್ಲಿ, ವುಹಾನ್ ಲ್ಯಾಬ್‌ನ ಮೂವರು ಸಿಬ್ಬಂದಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು ಮತ್ತು  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಒಂದು ತಿಂಗಳ ನಂತರ, ಚೀನಾ ವತಿಯಿಂದ ಕರೋನಾ ಸಾಂಕ್ರಾಮಿಕ ರೋಗ ಹರಡುವ ವಿಷಯವನ್ನು ಅಮೆರಿಕಾದ ಗುಪ್ತಚರ ಇಲಾಖೆಯ (US Intelligence Report) ಮಾಹಿತಿಯ ಆಧಾರದ ಮೇಲೆ ಸುದ್ದಿ ಸಂಸ್ಥೆ ರಾಯಿಟರ್ಸ್ ಬಹಿರಂಗಪಡಿಸಿದೆ.

ಅಮೆರಿಕಾದ ಈ ಗುಪ್ತಚರ ವರದಿಯಲ್ಲಿ ಲ್ಯಾಬ್ ಸಂಶೋಧಕರು ಆಸ್ಪತ್ರೆಗೆ ದಾಖಲಾದ ವೇಳೆ ಹಾಗೂ ಅವರ ದಾಖಲಾತಿಯ ಕುರಿತಾದ ಮಾಹಿತಿ ನೀಡಲಾಗಿದೆ. WHO ಮುಂದಿನ ಸಭೆಯಲ್ಲಿ ಕೊರೊನಾ ವೈರಸ್ ನ ಉತ್ಪತ್ತಿಯ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳ ಹಿನ್ನೆಲೆ, ಅಮೆರಿಕಾದ ಗುಪ್ತಚರ ಇಲಾಖೆ ನೀಡಿರುವ ಈ ಮಾಹಿತಿ ಭಾರಿ ಮಹತ್ವ ಪಡೆದುಕೊಂಡಿದೆ.

ಅಮೆರಿಕಾದ ಕಠಿಣ ನಿಲುವು ಮುಂದುವರಿಕೆ
ವರದಿಯ  ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು,  ಚೀನಾ ವಿರುದ್ದದ ತಮ್ಮ ಆರೋಪಗಳನ್ನು ಪುನರಾವರ್ತಿಸಿದ್ದಾರೆ. ವೈರಸ್ ಹರಡುವಿಕೆಯಲ್ಲಿ ಸತತವಾಗಿ ಒಪ್ಪಿಕೊಳ್ಳುತ್ತಿರುವ ಬಿಡೆನ್ ಆಡಳಿತ, ವೈರಸ್ ನ ಆರಂಭಿಕ ಹರಡುವಿಕೆಯಲ್ಲಿ ಚೀನಾವನ್ನು ಗಂಭೀರವಾಗಿ ಪ್ರಶ್ನಿಸುತ್ತಿದೆ.

ಇದನ್ನೂ ಓದಿ- ಹೊಸ ಕೊರೊನಾ ತಳಿ ವಿರುದ್ಧ Oxford, Pfizer ಲಸಿಕೆ ಶೇ 80 ರಷ್ಟು ಪರಿಣಾಮಕಾರಿ

ಈ ಬಗ್ಗೆ ಮಾತನಾಡಿರುವ ವಕ್ತಾರರು ಇನ್ನೂ ಹಲವು ಗಂಭೀರ ಪ್ರಶ್ನೆಗಳ ಉತ್ತರ ಸಿಗುವುದು ಬಾಕಿ ಇದೆ ಎಂದ ಅವರು, WHO ಕೂಡ ವೈರಸ್ ನ ಉತ್ಪತ್ತಿಯ ಕುರಿತು ತನ್ನ ತನಿಖೆ ಮುಂದುವರೆಸಿದೆ. ಇದೇ ವೇಳೆ ಇದರಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ- Corona Death: ವರದಿಯಾಗಿರುವುದು ಕೆಲವೇ ಅಂಕಿ-ಅಂಶ, ವಾಸ್ತವಿಕ ಸಂಖ್ಯೆ ದ್ವಿಗುಣವಾಗಿರಬಹುದು- WHO

ಅಮೇರಿಕಾ, ನಾರ್ವೆ, ಕೆನಡಾ ಹಾಗೂ ಬ್ರಿಟನ್ ಸೇರಿದಂತೆ ಹಲವು ದೇಶಗಳು ಕೊರೊನಾ 

(Coronavirus) ಉತ್ಪತ್ತಿಯ ಕುರಿತು WHO ವತಿಯಿಂದ ನಡೆಸಲಾಗುತ್ತಿರುವ ಅಧ್ಯಯನದ ವಿಧಾನವನ್ನು ಪ್ರಶ್ನಿಸಿವೆ. ಜೊತೆಗೆ ಈ ರಾಷ್ಟ್ರಗಳು ಚೀನಾ ಮೇಲೆ ವೈರಸ್ ನ ಆರಂಭಿಕ ಮಾಹಿತಿ ಮರೆಮಾಚಿದ ಆರೋಪ ಕೂಡ ಮಾಡಿವೆ. ಇದಲ್ಲದೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ವೈರಸ್ ಗೆ 'ಚೀನಾ ವೈರಸ್' ಎಂದೂ ಕೂಡ ಕರೆದಿದ್ದಾರೆ.

ಇದನ್ನೂ ಓದಿ-Alert: Coronavirus ನಿಂದ ಪುರುಷರಲ್ಲಿ ನಪುಂಸಕತ್ವ ಬರುವ ಸಾಧ್ಯತೆ ಎಂದ ಅಧ್ಯಯನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News