Corona Vaccine ಹಾಕಿಸಿಕೊಂಡ ವಿಶ್ವದ ಮೊಟ್ಟಮೊದಲ ಪುರುಷ William Shakespeare ನಿಧನ

ವಿಲಿಯಂ ಷೇಕ್ಸ್‌ಪಿಯರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಯೂನಿವರ್ಸಿಟಿ ಆಸ್ಪತ್ರೆ ವರದಿ ಮಾಡಿದೆ. ಅವರು ತಮ್ಮ ಸಮುದಾಯಕ್ಕಾಗಿ ಹಲವು ದಶಕಗಳ ಕಾಲ ಕೆಲಸ ಮಾಡಿದ್ದಾರೆ. ಷೇಕ್ಸ್‌ಪಿಯರ್ ಪ್ಯಾರಿಷ್ ಕೌನ್ಸಿಲರ್ ಆಗಿ ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು. ಇದೇ ಆಸ್ಪತ್ರೆಯಲ್ಲಿ  ಅವರಿಗೆ ಕೊರೊನಾ (Coronavirus) ವ್ಯಾಕ್ಸಿನ್ ಹಾಕಲಾಗಿತ್ತು ಹಾಗೂ ಇದೇ ಆಸ್ಪತ್ರೆಯಲ್ಲಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

Written by - Nitin Tabib | Last Updated : May 26, 2021, 02:26 PM IST
  • ಕಳೆದ ವರ್ಷ ಡಿಸೆಂಬರ್ ನಲ್ಲಿ ಅವರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು.

    ಅವರಿಗೆ Pfizer-BioNTech ಲಸಿಕೆ ಹಾಕಲಾಗಿತ್ತು.
  • ಬೇರೆ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ತಮ್ಮ ಕೊನೆಯುಸಿರೆಳೆದಿದ್ದಾರೆ
Corona Vaccine ಹಾಕಿಸಿಕೊಂಡ ವಿಶ್ವದ ಮೊಟ್ಟಮೊದಲ ಪುರುಷ William Shakespeare ನಿಧನ title=
First Man In The World To Get Covid Jab Dies (File Photo)

ಲಂಡನ್: First Man In The World To Get Covid Jab - ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡ ವಿಶ್ವದ ಮೊಟ್ಟಮೊದಲ ವ್ಯಕ್ತಿ (First Man In The World To Get Covid Jab)  81 ವರ್ಷದ ವಿಲಿಯಂ ಷೇಕ್ಸ್ಪಿಯರ್ (William Shakespeare)  ನಿಧನರಾಗಿದ್ದಾರೆ. ಷೇಕ್ಸ್ಪಿಯರ್ ಬೇರೆ ಕಾಯಿಲೆಯೊಂದರಿಂದ ಬಳಲುತ್ತಿದ್ದರು. ಕಳೆದ ವರ್ಷ ಡಿಸೆಂಬರ್ ನಲ್ಲಿ ಅವರು Pfizer-BioNTech ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಇದರೊಂದಿಗೆ ಅವರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡ ವಿಶ್ವದ ಮೊದಲ ಪುರುಷ  ಎನಿಸಿಕೊಂಡಿದ್ದರು. ಅವರಿಗಿಂತ ಕೆಲವೇ ನಿಮಿಷ ಮುನ್ನ ಯೂನಿವರ್ಸಿಟಿ ಆಸ್ಪತ್ರೆ 91 ವರ್ಷದ ಮಾರ್ಗರೇಟ್ ಕಿನನ್ (Margaret Keenan) ಗೆ ವ್ಯಾಕ್ಸಿನ್ ನೀಡಿತ್ತು.

ಅವರಿಗೆ ನೀಡಲಾಗುವ ಬೆಸ್ಟ್ ಶ್ರದ್ಧಾಂಜಲಿ ಇದು
ಮ್ಮ ಪಾಲುದಾರ ವೆಬ್‌ಸೈಟ್ ಇಂಡಿಯಾ.ಕಾಂನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ವಿಲಿಯಂ ಗುರುವಾರ (ಮೇ 20) ನಿಧನರಾಗಿದ್ದಾರೆ ಎಂದು ಷೇಕ್ಸ್‌ಪಿಯರ್‌ನ ಸ್ನೇಹಿತ ಕೌನ್ಸಿಲರ್ ಜೆನ್ನೆ ಇನ್ನೆಸ್ ಹೇಳಿದ್ದಾರೆ. ಷೇಕ್ಸ್‌ಪಿಯರ್ ಹಲವಾರು ವಿಷಯಗಳಿಗೆ ಹೆಸರುವಾಸಿಯಾಗಿದ್ದರು ಎಂದು ಅವರು ಹೇಳಿದರು, ಅದರಲ್ಲಿ ಒಂದು ಕರೋನಾ (Covid-19) ಲಸಿಕೆಯನ್ನು ಮೊದಲು ಪಡೆದ ವಿಶ್ವದ ಮೊದಲ ವ್ಯಕ್ತಿ. ನನ್ನ ಗೆಳೆಯನಿಗೆ ಅತ್ಯುತ್ತಮ ಶ್ರದ್ಧಾಜಲಿ ನೀಡಲು ಮೊದಲು ಎಲ್ಲರು ಲಸಿಕೆ ಪಡೆಯಿರಿ ಎಂದು ಇನ್ಸ್ ಹೇಳಿದ್ದಾರೆ. ಇದು ನನ್ನ ಸ್ನೇಹಿತನಿಗೆ ನೀಡಲಾಗುವ ಬೆಸ್ಟ್ ಟ್ರಿಬ್ಯೂಟ್ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Alert! ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಕ್ಸಿನೆಶನ್ ಸರ್ಟಿಫಿಕೆಟ್ ಹಂಚಿಕೊಳ್ಳಬೇಡಿ

ಹೃದಯಾಘಾತದಿಂದ ನಿಧನ
ವಿಲಿಯಂ ಷೇಕ್ಸ್ಪಿಯರ್ ನಿಧನ ಹೃದಯಾಘಾತದಿಂದ ಸಂಭವಿಸಿದೆ ಎಂದು ವಿಶ್ವವಿದ್ಯಾಲಯ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅವರು ಹಲವು ದಶಕಗಳ ಕಾಲ ತನ್ನ ಸಮುದಾಯದ ಜನರಿಗಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ಯಾರೀಶ್ ಕೌನ್ಸಲರ್ ಆಗಿ ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅವರು ನಮ್ಮ ಆಸ್ಪತ್ರೆಯಲ್ಲಿಯೇ ಲಸಿಕೆ ಹಾಕಿಸಿಕೊಂಡಿದ್ದರು ಹಾಗೂ ನಮ್ಮ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಹೇಳಿದೆ. ಲಸಿಕೆಯ ಮೊದಲ ಪ್ರಮಾಣ ಹಾಕಿಸಿಕೊಂಡ ಅವರು, ಈ ಆಸ್ಪತ್ರೆಯ ಸಿಬ್ಬಂದಿಗಳು ತುಂಬಾ ಒಳ್ಳೆಯವರಾಗಿದ್ದಾರೆ ಎಂದು ಹೊಗಳಿದ್ದರು ಎಂದು ಆಸ್ಪತ್ರೆ ಹೇಳಿದೆ.

ಇದನ್ನೂ ಓದಿ-ಕರೋನಾದಿಂದ ತಮ್ಮವರನ್ನು ಕಳೆದುಕೊಂಡವರ ನೋವಿನಲ್ಲಿ ಭಾಗಿ ; ನರೇಂದ್ರ ಮೋದಿ

ತಮ್ಮ ಹಿಂದೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರ ಷೇಕ್ಸ್ಪಿಯರ್ 
ವಿಲಿಯಮ್ ಷೇಕ್ಸ್ಪಿಯರ್ ತಮ್ಮ ಹಿಂದೆ ತಮ್ಮ ಪತ್ನಿ ಜಾಯ್, ತಮ್ಮ ಇಬ್ಬರು ಗಂಡುಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಈ ಕುರಿತು ಹೇಳಿರುವ ವೆಸ್ಟ್ ಮಿಡ್ಲ್ಯಾಂಡ್ಸ್ ಲೇಬರ್ ಗ್ರೂಪ್, ಬಿಲ್ ಹೆಸರಿನಿಂದ ಕರೆಯಲಾಗುತ್ತಿದ್ದ ವಿಲಿಯಮ್ ಷೇಕ್ಸ್ಪಿಯರ್, ಕೊವಿಡ್-19 ಲಸಿಕೆ ಹಾಕಿಸಿಕೊಂಡ ಬಳಿಕ ಜಾಗತಿಕ ಮಟ್ಟದಲ್ಲಿ ಅಪಾರ ಹೆಡ್ ಲೈನ್ ಸೃಷ್ಟಿಸಿದ್ದರು ಎಂದಿದೆ. ಪಕ್ಷಕ್ಕೆ ಅವರು ಸಲ್ಲಿಸಿರುವ ದಶಕಗಳ ಸೇವೆಗೆ ಇತ್ತೀಚೆಗಷ್ಟೇ ಲೇಬರ್ ಪಕ್ಷದ ಮುಖಂಡ ಕೀರ್ ಸ್ಟಾರರ್ ಮಾನ್ಯತೆ ನೀಡಿದ್ದರು. ಈ ದುಃಖದ ಸಂದರ್ಭದಲ್ಲಿ ನಾವು ವಿಲಿಯಮ್ ಕುಟುಂಬ ಸದಸ್ಯರೊಂದಿಗೆ ಇದ್ದೇವೆ ಎಂದು ಪಕ್ಷ ಹೇಳಿದೆ.

ಇದನ್ನೂ ಓದಿ- Coronavirus Fake News Alert: 'Corona Vaccine ಹಾಕಿಸಿಕೊಂಡ 2 ವರ್ಷಗಳೊಳಗೆ ಸಾವು!' ಏನಿದರ ಹಿಂದಿನ ಸತ್ಯಾಸತ್ಯತೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News