ನವದೆಹಲಿ: COVID-19 ನ ಸಮೂಹಗಳ ಹೊರಹೊಮ್ಮುವಿಕೆಯ ನಂತರ ಪರಿಸ್ಥಿತಿಯು ಕಠೋರವಾಗಿರುವುದರಿಂದ ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಹೈಲರ್ಟ್ ಘೋಷಿಸಲಾಗಿದೆ.ಇನ್ನೊಂದೆಡೆಗೆ ಆರ್ಥಿಕ ಕೇಂದ್ರವಾದ ಶಾಂಘೈ ವೈರಸ್‌ನಿಂದ ಇನ್ನೂ 39 ಸಾವುಗಳು ಸಂಭವಿಸಿವೆ.ಶನಿವಾರದಂದು 21,796 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 1,566 ಸಕಾರಾತ್ಮಕ ಪ್ರಕರಣಗಳು ಮತ್ತು ಉಳಿದ ಲಕ್ಷಣರಹಿತ ಪ್ರಕರಣಗಳು ಹೆಚ್ಚಾಗಿ ಶಾಂಘೈನಲ್ಲಿ ಸೇರಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಶನಿವಾರದಂದು 22 ಹೊಸ ಸಮುದಾಯ ಪ್ರಕರಣಗಳನ್ನು ದಾಖಲಿಸಿದ ನಂತರ ಬೀಜಿಂಗ್ ನಲ್ಲಿ ಜನಸಂಖ್ಯೆಯ ಕೆಲವು ವರ್ಗಗಳನ್ನು ಪರೀಕ್ಷಿಸಲು ಮುಂದಾಗಿದ್ದರಿಂದ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ.ಶುಕ್ರವಾರದಂದು 10 ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ಧೃಡಪಟ್ಟ ನಂತರ ಈಗ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.ಅಷ್ಟೇ ಅಲ್ಲದೆ ನಗರದ ಅಧಿಕಾರಿಗಳು ಒಂದು ವಾರಗಳ ವರೆಗೆ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.


ಇದನ್ನೂ ಓದಿ: ವಿದ್ಯಾ ವೋಕ್ಸ್‌ : ʼಲೆಟ್‌ ಮಿ ಲವ್‌ ಯೂʼ ಗಾಯಕಿ ಬಗ್ಗೆ ಇಲ್ಲಿದೆ ಮಾಹಿತಿ


ಬೀಜಿಂಗ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್‌ನ ಉಪನಿರ್ದೇಶಕ ಪಾಂಗ್ ಕ್ಸಿಂಗುವೋ, ಪತ್ತೆಯಾಗದ ಸ್ಥಳೀಯ ಪ್ರಸರಣಗಳು ಸುಮಾರು ಒಂದು ವಾರದ ಹಿಂದೆ ನಗರದಲ್ಲಿ ಪ್ರಾರಂಭವಾಗಿದ್ದು ಮತ್ತು ಶಾಲೆಗಳು, ಪ್ರವಾಸ ಗುಂಪುಗಳು ಮತ್ತು ಕುಟುಂಬಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿವೆ ಎಂದು ಹೇಳಿದರು.


ಇದನ್ನೂ ಓದಿ: ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆ : ಮಹಾತ್ಕಾರ್ಯಕ್ಕೆ ಮುಂದಾದ ಅಶ್ವಿನಿ 


ಈಗ ಪ್ರವಾಸ ಗುಂಪುಗಳಲ್ಲಿದ್ದ ಹಿರಿಯ ನಾಗರಿಕರು, ಕಟ್ಟಡ ಕಾರ್ಮಿಕರು ಮತ್ತು ಕ್ಲಸ್ಟರ್ ಗುರುತಿಸಲಾದ ಶಾಲೆಯಲ್ಲಿ ಕೆಲಸ ಮಾಡುವ ಜನರ ಮೇಲೆ ಸಾಮೂಹಿಕ ಪರೀಕ್ಷೆಯನ್ನು ನಡೆಸುವುದಾಗಿ ಪಾಂಗ್ ಅವರು ತಿಳಿಸಿದ್ದಾರೆ.ಶುಕ್ರವಾರದಂದು ಬೀಜಿಂಗ್ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಕೈ ಕಿ, ಮೇಯರ್ ಚೆನ್ ಜಿನಿಂಗ್ ಮತ್ತು ಇತರ ನಗರ ನಾಯಕರು ನಿಯಂತ್ರಣ ಪ್ರಯತ್ನಗಳನ್ನು ಸಂಘಟಿಸಲು ಎರಡು ಬಾರಿ ಭೇಟಿಯಾದರು.


ಬೀಜಿಂಗ್ ನಲ್ಲಿ ಇದ್ದಕ್ಕಿದ್ದಂತೆ ಕೋರೋಣ ಪ್ರಕರಣಗಳನ್ನು ದಾಖಲಿಸಿದ್ದು, ಇಲ್ಲಿ ಅನೇಕ ಪ್ರಸರಣಗಳ ಸರಪಳಿಯನ್ನು ಒಳಗೊಂಡಿದೆ.ಹಾಗಾಗಿ ಈಗ ಪ್ರಕರಣಗಳ ದಾಖಲಿಸುವಿಕೆಯಿಂದಾಗಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಬೀಜಿಂಗ್ ಡೈಲಿ ವರದಿ ಮಾಡಿದೆ.ಹೊಸ ಕ್ಲಸ್ಟರ್‌ಗಳ ಹೊರಹೊಮ್ಮುವಿಕೆಯ ನಂತರ, ಬೀಜಿಂಗ್ ಪ್ರಮುಖ ಗುಂಪುಗಳಲ್ಲಿ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ಆಯೋಜಿಸುವುದು ಮತ್ತು ಭಾಗಶಃ ಮುಚ್ಚಿದ ನಿರ್ವಹಣೆ ಮತ್ತು ಪ್ರದೇಶಗಳಲ್ಲಿ ತರಗತಿಗಳನ್ನು ಅಮಾನತುಗೊಳಿಸುವುದು ಮತ್ತು ಪ್ರಕರಣಗಳನ್ನು ಗುರುತಿಸಿದ ಶಾಲೆ ಸೇರಿದಂತೆ ತ್ವರಿತ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.


ಇದನ್ನೂ ಓದಿ: ಇಂದು ವರನಟ ಡಾ.ರಾಜ್ ಕುಮಾರ್ 94 ಹುಟ್ಟುಹಬ್ಬ: ಅಭಿಮಾನಿ ಸಂಘಗಳಿಂದ ರಥೋತ್ಸವ


ಒಂದು ವಾರದ ಅವಧಿಯ ಕೊರೊನಾ ಪ್ರಸರಣ ಅವಧಿಯನ್ನು ಗಮನಿಸಿದರೆ, ವ್ಯಾಪಕವಾದ ಸೋಂಕುಗಳ ಅಪಾಯವು ಇನ್ನೂ ಹೆಚ್ಚಾಗಿರುತ್ತದೆ ಎಂದು ಪೀಕಿಂಗ್ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ವಿಭಾಗದ ಪ್ರಾಧ್ಯಾಪಕ ವಾಂಗ್ ಯುಯೆಡನ್ ಹೇಳಿದ್ದಾರೆ.ಆದರೆ ಸಾಂಕ್ರಾಮಿಕ ಪರಿಸ್ಥಿತಿಯು ಶಾಂಘೈನಂತೆ ತೀವ್ರವಾಗದಿರಬಹುದು ಎಂದು ಅವರು ಹೇಳಿದ್ದಾರೆ.


ಮುಂಬರುವ ಮೇ ತಿಂಗಳಲ್ಲಿ ರಜಾದಿನಗಳಲ್ಲಿ ಲಕ್ಷಾಂತರ ಜನರು ಪ್ರಯಾಣಿಸುವುದರಿಂದ ಪ್ರಕರಣಗಳ ಸಂಖ್ಯೆಯು ಅಧಿಕಗೊಳ್ಳುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಗಂಭೀರವಾಗಲಿದೆ ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.