WHO Chief: ವೇಗವಾಗಿ ಹರಡುತ್ತಿರುವ `ಕೊರೋನಾ` ಕಾರಣಗಳನ್ನು ವಿವರಿಸಿದ WHO ಮುಖ್ಯಸ್ಥ!
ವಿಶ್ವಾದ್ಯಂತ ಸುಮಾರು 78 ಕೋಟಿ ಜನರಿಗೆ ಲಸಿಕೆ
ಜಿನೀವಾ: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕರೋನವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ದೇಶದಲ್ಲಿ ಸತತ ಕಳೆದ ಮೂರು ದಿನಗಳಿಂದ ಪ್ರತಿದಿನ 1.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (World Health Organization) ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ವಿಶ್ವಾದ್ಯಂತ ಕರೋನಾ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಕೊರೋನಾವು ಇನ್ನೂ ದೀರ್ಘಕಾಲದವರೆಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಕರೋನಾ ವೈರಸ್ ಪ್ರಕರಣಗಳು ಏಕೆ ಹೆಚ್ಚುತ್ತಿವೆ?
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್(Tedros Adhanom), ಸಾರ್ವಜನಿಕ ಆರೋಗ್ಯ ಕ್ರಮಗಳಲ್ಲಿ ಸ್ಥಿರತೆಯ ಕೊರತೆಯಿಂದಾಗಿ ಕೋವಿಡ್ -19 ಸೋಂಕುಗಳು ಮತ್ತು ಸಾವುಗಳ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೆ, ಪ್ರಪಂಚದಾದ್ಯಂತದ ಜನರಲ್ಲಿ ರೋಗನಿರೋಧಕ ಶಕ್ತಿ ಮತ್ತು ಗೊಂದಲದಿಂದಾಗಿ, ಕರೋನದ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ.
ಇದನ್ನೂ ಓದಿ- Pakistan: ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದ ಬ್ರಿಟನ್
ಕೊರೋನಾ ಸಧ್ಯಕ್ಕೆ ಮುಗಿಯದು:
ಕರೋನಾ ಅಂತ್ಯೆ ಕಾಣಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ. ವಿಶ್ವಾದ್ಯಂತ ಸುಮಾರು 78 ಕೋಟಿ ಜನರಿಗೆ ಲಸಿಕೆ(Coronavirus Vaccine) ನೀಡಲಾಗಿದೆ, ಆದರೆ ಸೋಂಕನ್ನು ತಡೆಗಟ್ಟಲು, ಮಾಸ್ಕ್ ಗಳನ್ನು ಧರಿಸಿ ಸಾಮಾಜಿಕ ಅಂತರವನ್ನು ಅನುಸರಿಸುವುದು ಅವಶ್ಯಕ ಇದರಿಂದ ಸಾಂಕ್ರಾಮಿಕ ರೋಗವನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ- Pakistanಕ್ಕೆ ಬ್ಲಾಂಕ್ ಚೆಕ್ ಆಫರ್ ನೀಡಿಯ ರಷ್ಯಾ ಅಧ್ಯಕ್ಷ Vladimir Putin! ಪಾಕ್ ನಲ್ಲಿ ಕೋಲಾಹಲ
ವೈರಸ್ ಅನ್ನು ತಡೆಯಬಹುದು:
ಟೆಡ್ರೊಸ್ ಹೇಳುವ ಪ್ರಕಾರ, 'ಕೊರೊನದಿಂದ ಹದಗೆಟ್ಟಿರುವ ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುವುದನ್ನ ನಾವೆಲ್ಲರೂ ನೋಡಬೇಕೆಂದು ಕಾಯುತ್ತಿದ್ದೇವೆ. 2021 ರ ಮೊದಲ 2 ತಿಂಗಳಲ್ಲಿ ಕೊರೋನಾ ಪ್ರಕರಣಗಳು(Corona Cases) ಮತ್ತು ಮೃತರ ಸಂಖ್ಯೆ ಕಡಿಮೆಯಾಗಿತ್ತು. ಆದ್ರೆ ಇದನ್ನ ನಿಯಂತ್ರಣಕ್ಕೆ ತರುವ ಎಲ್ಲಾ ಪ್ರಯತ್ನಗಳು ಮಾಡಲಾಗುತ್ತಿದೆ. ಕೊರೋನಾವನ್ನ ನಿಯಂತ್ರಣ ಮಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ- Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ
ಭಾರತದಲ್ಲಿ 1.36 ಕೋಟಿ ಜನರು ಸೋಂಕಿತರು:
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1 ಲಕ್ಷ 61 ಸಾವಿರ 736 ಸೋಂಕಿತರು ಪತ್ತೆಯಾಗಿದ್ದರೆ. ಅಲ್ಲದೆ 879 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 97168 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 1 ಕೋಟಿ 22 ಲಕ್ಷದ 53 ಸಾವಿರಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ. ಈಗ ದೇಶದಲ್ಲಿ 12,64 ,698 ಸಕ್ರಿಯ ಪ್ರಕರಣಗಳಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಗಡಿಯಲ್ಲಿನ ಸ್ಥಿರತೆಗೆ ಬದ್ಧ ಎಂದ ಭಾರತ, ಚೀನಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.