Pakistanಕ್ಕೆ ಬ್ಲಾಂಕ್ ಚೆಕ್ ಆಫರ್ ನೀಡಿಯ ರಷ್ಯಾ ಅಧ್ಯಕ್ಷ Vladimir Putin! ಪಾಕ್ ನಲ್ಲಿ ಕೋಲಾಹಲ

ಕಳೆದ ವಾರ ತನ್ನ ಎರಡು ದಿನಗಳ ಭಾರತ ಭೇಟಿಗೆ ಬಂದ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲಾವರೋವ್ (Sergey lavrov), ಬಳಿಕ ಪಾಕಿಸ್ತಾನದ ಇಸ್ಲಾಮಾಬಾದ್ ತಲುಪಿದ್ದರು. ಅವರ ಈ ಪಾಕ್ ಯಾತ್ರೆಯ ಬಳಿಕ ಪಾಕಿಸ್ತಾನದಲ್ಲಿ ಭಾರಿ ಹಲ್ ಚಲ್ ಸೃಷ್ಟಿಯಾಗಿದೆ.

Written by - Nitin Tabib | Last Updated : Apr 12, 2021, 10:57 PM IST
  • ಪಾಕಿಸ್ತಾನಕ್ಕೆ ಬ್ಲಾಂಕ್ ಚೆಕ್ ಆಫರ್ ನೀಡಿದ ರಷ್ಯಾ.
  • ವ್ಲಾಡಿಮಿರ್ ಪುಟಿನ್ ಸಂದೇಶ ಓದಿ ಹೇಳಿದ ರಷ್ಯಾ ವಿದೇಶಾಂಗ ಸಚಿವರು.
  • ಬಳಿಕ ಪಾಕ್ ನಲ್ಲಿ ಭಾರಿ ಹಲ್ ಚಲ್ ಸೃಷ್ಟಿ ಕಾರಣ ಏನು?
Pakistanಕ್ಕೆ ಬ್ಲಾಂಕ್ ಚೆಕ್ ಆಫರ್ ನೀಡಿಯ ರಷ್ಯಾ ಅಧ್ಯಕ್ಷ Vladimir Putin! ಪಾಕ್ ನಲ್ಲಿ ಕೋಲಾಹಲ title=
Russia Blank Cheque Offer To Pakistan (File Photo)

ನವದೆಹಲಿ: ಕಳೆದ ವಾರ ತನ್ನ ಎರಡು ದಿನಗಳ ಭಾರತ ಭೇಟಿಗೆ ಬಂದ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲಾವರೋವ್ (Sergey lavrov), ಬಳಿಕ ಪಾಕಿಸ್ತಾನದ ಇಸ್ಲಾಮಾಬಾದ್ ತಲುಪಿದ್ದರು. ಅವರ ಈ ಪಾಕ್ ಯಾತ್ರೆಯ ಬಳಿಕ ಪಾಕಿಸ್ತಾನದಲ್ಲಿ ಭಾರಿ ಹಲ್ ಚಲ್ ಸೃಷ್ಟಿಯಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ (Vladimir Putin) ಅವರ ಸಂದೇಶವೊಂದನ್ನು ಅಲ್ಲಿನ ವಿದೇಶಾಂಗ ಸಚಿವರು ಪಾಕಿಸ್ತಾನದಲ್ಲಿ ಓದಿ ಹೇಳಿದಾಗ ಇಮ್ರಾನ್ (Imran Khan) ಸರ್ಕಾರ ಅವಾಕ್ಕಗಿದೆ. 

9 ವರ್ಷಗಳಲ್ಲಿ ಇದು ಮೊದಲ ಅವಕಾಶ 
ಕಳೆದ 9 ವರ್ಷಗಳಲ್ಲಿ ರಷ್ಯಾದ ವಿದೇಶಾಂಗ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ಭೇಟಿ ನೀಡಿದ್ದು ಇದೇ ಮೊದಲು. ಇದಕ್ಕೂ ಮುನ್ನ 2012 ರಲ್ಲಿ ಲಾವ್ರೊವ್ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿಯ ಪ್ರಕಾರ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲವ್ರೊವ್ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಾಕಿಸ್ತಾನಕ್ಕೆ ಏನಾದರೂ ಬೇಕಾದರೆ ರಷ್ಯಾ ಅವುಗಳನ್ನು ಕೊಡಲು ಸಿದ್ಧವಿದೆ ಎಂಬ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಗ್ಯಾಸ್ ಪೈಪ್‌ಲೈನ್, ಕಾರಿಡಾರ್, ರಕ್ಷಣಾ ಮತ್ತು ಇನ್ನಾವುದೇ ಮಾರ್ಗಗಳಲ್ಲಿ ರಷ್ಯಾ ಯಾವುದೇ ರೀತಿಯ ಮಾಡಲು ಸಿದ್ಧವಿದೆ ಎಂದು ಹೇಳಿದೆ.

ಇದನ್ನೂ ಓದಿ- Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ

ಪಾಕಿಸ್ತಾನದ ಜೊತೆಗಿದ್ದು ಉಗ್ರವಾದದೊಂದಿಗೆ ಹೋರಾಟ ಹೇಗೆ?
ತನ್ನ ಯಾತ್ರೆಯ ವೇಳೆ ಸುದ್ದಿಗೊಷ್ಟಿಯೊಂದರಲ್ಲಿ ಮಾತನಾಡಿರುವ ರಷ್ಯಾದ (Russia) ವಿದೇಶಾಂಗ ಸಚಿವರು, ರಷ್ಯಾ ಉಗ್ರವಾದದ ವಿರುದ್ಧ ತನ್ನ ಹೋರಾಟ ಮುಂದುವರೆಸಲಿದೆ. ತನ್ನ ಭಯೋತ್ಪಾದನಾ ವಿರೋಧಿ ಕ್ಷಮತೆಯನ್ನು ಹೆಚ್ಚಿಸಲು ರಷ್ಯಾ ತನ್ನ ವಿಶೇಷ ಸೇನಾ ಉಪಕರಣಗಳನ್ನು ನೀಡಲು ಸಿದ್ಧವಿದೆ ಎಂದು ಹೇಳಿದೆ ಎಂದಿದ್ದರು. ಇದಲ್ಲದೆ ಅವರು ಪಾಕಿಸ್ತಾನಕ್ಕೆ ಬ್ಲಾಂಕ್ ಚೆಕ್ ಆಫರ್ ಕೂಡ ನೀಡಿದ್ದಾರೆ. ರಷ್ಯಾದ ಈ ವಿಶಾಲ ಹೃದಯದ ಆಫರ್ ಬಳಿಕ ಪಾಕಿಸ್ತಾನದಲ್ಲಿ ಭಾರಿ ಹಲ್ ಚಲ್ ಸೃಷ್ಟಿಯಾಗಿದೆ.

ಇದನ್ನೂ ಓದಿ-ಗಡಿಯಲ್ಲಿನ ಸ್ಥಿರತೆಗೆ ಬದ್ಧ ಎಂದ ಭಾರತ, ಚೀನಾ

ರಷ್ಯಾ ವಿದೇಶಾಂಗ ಸಚಿವರ ಪಾಕ್ ಭೇಟಿಯ ವೇಳೆ ಅವರ ಒಂದು ಭಾವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಕುರೇಶಿ, ರಷ್ಯಾದ ವಿದೇಶಾಂಗ ಸಚಿವರನ್ನು ಸ್ವಾಗತಿಸಿ  ಬಳಿಕ ಉಭಯ ಮುಖಂಡರು ಪರಸ್ಪರ ಮಾತುಕತೆ ನಡೆಸುತ್ತಾ ಮುನ್ನಡೆಯುತ್ತಾರೆ. ಇದಾದ ಬಳಿಕ ಭಾವಚಿತ್ರವೊಂದು ಪ್ರಕಟಗೊಂಡಿದ್ದು, ಈ ಭಾವಚಿತ್ರದಲ್ಲಿ ರಷ್ಯಾದ ವಿದೇಶಾಂಗ ಸಚಿವರು ತಮ್ಮ ಕೊಡೆಯನ್ನು ಕೈಯಲ್ಲಿ ಹಿಡಿದಿದ್ದಾರೆ. ಆದರೆ, ಪಾಕ್ ವಿದೇಶಾಂಗ ಸಚಿವರ ಕೊಡೆಯನ್ನು ಅರ್ದಲಿ ಹಿಡಿದಿದ್ದಾರೆ. ಈ ಭಾವಚಿತ್ರ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನದ ಕಾಲೆಳೆಯಲಾಗಿದೆ.

ಇದನ್ನೂ ಓದಿ- Jack Ma ದುಬಾರಿಯಾಗಿ ಪರಿಣಮಿಸಿದ Xi Jinping ಟೀಕೆ, ಚೀನಾ ಸರ್ಕಾರದಿಂದ ಭಾರಿ ದಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News