Pakistan: ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದ ಬ್ರಿಟನ್

ಬ್ರಿಟನ್‌ನ ಈ ಕ್ರಮವನ್ನು ಪಾಕಿಸ್ತಾನ ವಿರೋಧಿಸಿದೆ. ಯುಕೆ ತನ್ನ ನಿರ್ಧಾರವನ್ನು ಪರಿಶೀಲಿಸಬೇಕು, ಏಕೆಂದರೆ ಅದು ಸತ್ಯಗಳನ್ನು ಆಧರಿಸಿಲ್ಲ ಎಂದು ಇಸ್ಲಾಮಾಬಾದ್ ಲಂಡನ್‌ಗೆ ಮನವಿ ಮಾಡಿದೆ.

Written by - Yashaswini V | Last Updated : Apr 13, 2021, 11:30 AM IST
  • ಕರೋನಾವೈರಸ್, ಹಣದುಬ್ಬರದಿಂದಾಗಿ ತತ್ತರಿಸಿರುವ ಪಾಕಿಸ್ತಾನಕ್ಕೆ ಬ್ರಿಟನ್ ಹೊಡೆತ
  • ಪಾಕಿಸ್ತಾನ ಭಯೋತ್ಪಾದಕರಿಗೆ ಸಹಾಯ ಮಾಡುವುದನ್ನು ಮುಂದುವರೆಸಿದೆ
  • ಈಗಾಗಲೇ ಎಫ್‌ಎಟಿಎಫ್ ನ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ
Pakistan: ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದ ಬ್ರಿಟನ್  title=
UK gives blow to Pakistan

ಲಂಡನ್: ಮೊದಲೇ ಕರೋನಾವೈರಸ್ ಹಾಗೂ ಹಣದುಬ್ಬರದಿಂದಾಗಿ ತತ್ತರಿಸಿರುವ ಪಾಕಿಸ್ತಾನ (Pakistan)ಕ್ಕೆ ಬ್ರಿಟನ್ (UK) ಬಲವಾದ ಹೊಡೆತ ನೀಡಿದ್ದು, ಹೆಚ್ಚಿನ ಅಪಾಯದ ದೇಶಗಳ ವಿಭಾಗದಲ್ಲಿ ಪಾಕಿಸ್ತಾನವನ್ನು ಸೇರಿಸಿದೆ. ವಾಸ್ತವವಾಗಿ ಯುನೈಟೆಡ್ ಕಿಂಗ್‌ಡಮ್ ಮನಿ ಲಾಂಡರಿಂಗ್, ಟೆರರ್ ಫೈನಾನ್ಸಿಂಗ್‌ಗೆ ಸಂಬಂಧಿಸಿದ ತನ್ನ ನಿಯಮಗಳನ್ನು ತಿದ್ದುಪಡಿ ಮಾಡಿದ್ದು ಇದರ ಅಡಿಯಲ್ಲಿ ಮನಿ ಲಾಂಡರಿಂಗ್ ಭಯೋತ್ಪಾದಕ ಹಣಕಾಸು ವ್ಯವಸ್ಥೆಗೆ ಹೆಚ್ಚು ಗುರಿಯಾಗುವ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ, ಸಿರಿಯಾ, ಜಿಂಬಾಬ್ವೆ, ಸಿರಿಯಾ, ಯೆಮೆನ್ ಜೊತೆಗೆ ಪಾಕಿಸ್ತಾನವು ಕೂಡ ಸ್ಥಾನ ಪಡೆದಿದೆ.

ಕಳೆದ ತಿಂಗಳು ತಿದ್ದುಪಡಿ ಮಾಡಲಾಗಿದೆ:
ಕಳೆದ ತಿಂಗಳು ಯುಕೆ ಮನಿ ಲಾಂಡರಿಂಗ್, ಟೆರರ್ ಫೈನಾನ್ಸಿಂಗ್ ಮತ್ತು ಫಂಡ್ಸ್ ಟ್ರಾನ್ಸ್ಫರ್ ಆಕ್ಟ್ 2017 ಅನ್ನು ತಿದ್ದುಪಡಿ ಮಾಡಿತು. ಈ ತಿದ್ದುಪಡಿ ಮಾರ್ಚ್ 26 ರಿಂದ ಜಾರಿಗೆ ಬಂದಿದೆ. ಈ ತಿದ್ದುಪಡಿಯ ಮೂಲಕ ಭಯೋತ್ಪಾದನೆಗೆ ಹಣಕಾಸು ಒದಗಿಸುವ ದೇಶಗಳಲ್ಲಿ ಪಾಕಿಸ್ತಾನವೂ ಒಂದು ಎಂದು ಬ್ರಿಟನ್ ಸ್ಪಷ್ಟಪಡಿಸಿದೆ. ಯುಕೆಯ ಈ ಕ್ರಮವು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಮ್ರಾನ್ ಖಾನ್ (Imran Khan) ಅವರ 'ಹೊಸ ಪಾಕಿಸ್ತಾನ'ದ ಚಿತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಇದನ್ನೂ ಓದಿ - Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ

ಯುಕೆ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಾಕಿಸ್ತಾನ :
ಅದೇ ಸಮಯದಲ್ಲಿ, ಬ್ರಿಟನ್‌ನ ಈ ಕ್ರಮವನ್ನು ಪಾಕಿಸ್ತಾನ (Pakistan) ವಿರೋಧಿಸಿದೆ. ಪಾಕಿಸ್ತಾನವು ಯುಕೆ ತನ್ನ ನಿರ್ಧಾರವನ್ನು ಪರಿಶೀಲಿಸಬೇಕು, ಏಕೆಂದರೆ ಅದು ಸತ್ಯಗಳನ್ನು ಆಧರಿಸಿಲ್ಲ ಎಂದು ಒತ್ತಾಯಿಸಿದೆ. ಈ ಕುರಿತಂತೆ ಯುಕೆಗೆ ಮನವಿ ಸಲ್ಲಿಸಿರುವ ಇಸ್ಲಾಮಾಬಾದ್ ಬ್ರಿಟನ್‌ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ರಾಜಕೀಯ ಪ್ರೇರಿತ ಕ್ರಮಗಳಿಂದ ದೂರವಿರಬೇಕು ಎಂದು ಕೋರಿದೆ. ಆದರೆ, ಪಾಕಿಸ್ತಾನದ ಮನವಿಗೆ ಬ್ರಿಟನ್ ಇನ್ನೂ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ - Pakistanಕ್ಕೆ ಬ್ಲಾಂಕ್ ಚೆಕ್ ಆಫರ್ ನೀಡಿಯ ರಷ್ಯಾ ಅಧ್ಯಕ್ಷ Vladimir Putin! ಪಾಕ್ ನಲ್ಲಿ ಕೋಲಾಹಲ

ಎಫ್‌ಎಟಿಎಫ್ ಈಗಾಗಲೇ ಕ್ರಮ ಕೈಗೊಂಡಿದೆ :
ಈಗಾಗಲೇ ಗ್ರೇ ಲಿಸ್ಟ್ ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ (Pakistan) ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್) ಹೊಡೆತ ನೀಡಿದೆ. ವಾಸ್ತವವಾಗಿ ಪಾಕಿಸ್ತಾನವು 2018 ರಿಂದ ಎಫ್‌ಎಟಿಎಫ್‌ನ ಗ್ರೇ ಪಟ್ಟಿಯಲ್ಲಿದೆ, ಇದರಿಂದಾಗಿ ಪಾಕಿಸ್ತಾನವು ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ, ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು ಆರ್ಥಿಕ ಅಪರಾಧಗಳನ್ನು ನಿಗ್ರಹಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾದ ಕಾರಣ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲಿ ಇರಿಸಿಕೊಳ್ಳಲು ಎಫ್‌ಎಟಿಎಫ್ ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ವಿಶ್ವಸಂಸ್ಥೆ ಪಟ್ಟಿ ಮಾಡಿದ ಭಯೋತ್ಪಾದಕರು ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಫ್‌ಎಟಿಎಫ್ ಖಡಕ್ ಸೂಚನೆ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News