Corona Vaccine For Children - ಕರೋನಾದ ಮೂರನೇ ಅಲೆಯ ಭಯದ ನಡುವೆ ಮಕ್ಕಳಿಗೆ ಕರೋನಾ ಲಸಿಕೆಗಾಗಿ ಕಾಯುವ ಕಾಲ ಮುಕ್ತಾಯದ ಸನೀಹಕ್ಕೆ ಬಂದಿದೆ. ಫೈಜರ್ 5 ರಿಂದ 11 ವರ್ಷ ವಯಸ್ಸಿನ ಮಕ್ಕಳ ಮೇಲೆ ಯಶಸ್ವಿ ಪ್ರಯೋಗಗಳನ್ನು ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ತುರ್ತು ಬಳಕೆಗೆ ಅನುಮೋದನೆ ಪಡೆದ ನಂತರ, ಈ ಲಸಿಕೆಯನ್ನು ಮಕ್ಕಳಿಗೆ ನೀಡುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ತನ್ನ ಕಂಪನಿ ಅಭಿವೃದ್ಧಿ ಪಡಿಸಿರುವ ಕೋವಿಡ್ -19  (Covid-19)ಲಸಿಕೆ ಐದು ರಿಂದ 11 ವರ್ಷದೊಳಗಿನ ಮಕ್ಕಳ ಮೇಲೂ ಪರಿಣಾಮಕಾರಿಯಾಗಿದೆ ಎಂದು ಫೈಜರ್ (Pfizer) ಸೋಮವಾರ ಹೇಳಿದೆ. ಈ ನಿಟ್ಟಿನಲ್ಲಿ ಕಂಪನಿಯು US ನಿಂದ ಅನುಮೋದನೆ ಪಡೆಯಲು ಪ್ರಯತ್ನಿಸುತ್ತದೆ. ಮಕ್ಕಳ ರೋಗನಿರೋಧಕತೆಯ ದಿಕ್ಕಿನಲ್ಲಿ ಫೈಜರ್‌ನ ಈ ಹಂತವು ಮುಖ್ಯವಾಗಿದೆ. ಫೈಜರ್ ಮತ್ತು ಅದರ ಜರ್ಮನ್ ಪಾಲುದಾರ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆ (Corona Vaccine) ಈಗಾಗಲೇ 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಲಭ್ಯವಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-ಸಂಪ್ರದಾಯದ ಹೆಸರಿನಲ್ಲಿ ನಡೆಯಿತು 1500 ಡಾಲ್ಫಿನ್ ಗಳ ಮಾರಣ ಹೋಮ, ರಕ್ತಮಯವಾಯಿತು ಸಮುದ್ರ


ಪ್ರೈಮರಿ ಶಾಲೆಗೆ ಹೋಗುವ ಮಕ್ಕಳ ಮೇಲೆ ಟ್ರಯಲ್
ಇದೀಗ ಸಾಂಕ್ರಾಮಿಕ ರೋಗದ ನಡುವೆ ಶಾಲೆಗಳನ್ನು ತೆರೆದುಕೊಂಡಿರುವುದರಿಂದ ಮಕ್ಕಳಿಗೆ ಲಸಿಕೆ ಹಾಕುವುದು ಹೆಚ್ಚು ಮುಖ್ಯವಾಗಿದೆ ಏಕೆಂದರೆ ಡೆಲ್ಟಾ ರೂಪಾಂತರದ ಸೋಂಕು ಮಕ್ಕಳಲ್ಲಿ ವೇಗವಾಗಿ ಹರಡುವುದು ಅಪಾಯವಿದೆ. ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳ ಮೇಲೆ ಫೈಜರ್ ಲಸಿಕೆ ಪ್ರಮಾಣವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಪರೀಕ್ಷಿಸಲಾಗಿತ್ತು. ಈ ಪ್ರಮಾಣವು ಸಾಮಾನ್ಯ ಡೋಸ್‌ನ ಮೂರನೇ ಒಂದು ಭಾಗ ಮಾತ್ರ ಆಗಿದೆ. ಈ ಕುರಿತು ಹೇಳಿಕೆ ನೀಡಿರುವ ಫೈಜರ್  ಹಿರಿಯ ವಿಪಿ ಡಾ ಬಿಲ್ ಗ್ರೂಬರ್, ಈ ಲಸಿಕೆಯ ಎರಡನೇ ಡೋಸ್ ನಂತರ, 5 ರಿಂದ 11 ವರ್ಷ ವಯಸ್ಸಿನ ಮಕ್ಕಳಲ್ಲಿ ಕರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಹದಿಹರೆಯದವರು ಮತ್ತು ಯುವಕರಲ್ಲಿ ಕಂಡುಬರುವಷ್ಟು ಪ್ರಬಲವಾಗಿವೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ-Watch Video: ಅಪರಿಚಿತನ ಗುಂಡಿನ ದಾಳಿಗೆ 8 ಬಲಿ, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು!


ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೆಶನ್ ಅನುಮತಿಯೊಂದೇ ಬಾಕಿ
ಮಕ್ಕಳಿಗೆ ನೀಡಿದ ಪ್ರಮಾಣ ಸುರಕ್ಷಿತವೆಂದು ಸಾಬೀತಾಗಿದೆ, ಅವರಲ್ಲಿಯೂ ಕೂಡ ಹದಿಹರೆಯದವರಲ್ಲಿ ಕಂಡು ಬಂದ ಸಾಮಾನ್ಯ ಜ್ವರ, ಕೈಯಲ್ಲಿ ನೋವಿನಂತಹ ಪರಿಣಾಮಗಳನ್ನುಗಮನಿಸಲಾಗಿದೆ ಎಂದು ಡಾ.ಬಿಲ್ ಗ್ರೂಬರ್ ಹೇಳಿದ್ದಾರೆ ಹೀಗಾಗಿ "ನಾವು ಸರಿಯಾದ ನಿಸ್ಕರ್ಶಕ್ಕೆ  ತಲುಪಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ವೃತ್ತಿಯಲ್ಲಿ ಚಿಕ್ಕಮಕ್ಕಳ ತಜ್ಞರಾಗಿರುವ ಗ್ರೂಬರ್ ಹೇಳಿದ್ದಾರೆ. ಇದೀಗ ನಾವು 5 ರಿಂದ 11 ವರ್ಷ ವಯಸ್ಸಿನ ಮಕ್ಕಳ ಮೇಲೆ ಈ ಲಸಿಕೆಯ ತುರ್ತು ಬಳಕೆಯನ್ನು ಕೋರಿ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೆಶನ್ ಗಾಗಿ ಅರ್ಜಿ ಸಲ್ಲಿಸಲಿದ್ದೇವೆ. ಇದಲ್ಲದೆ ಯುರೋಪಿನ್ ಹಾಗೂ ಬ್ರಿಟಿಷ್ ಅಧಿಕಾರಿಗಳಿಗೂ ಕೂಡ ಈ ಕುರಿತು ಅರ್ಜಿ ಸಲ್ಲಿಸಲಾಗುವದು ಎಂದು ಬ್ರೂಬರ್ ಹೇಳಿದ್ದಾರೆ.


ಇದನ್ನೂ ಓದಿ-SpaceX Tour: ಕಕ್ಷೆಯಲ್ಲಿ ಯಶಸ್ವಿಯಾಗಿ 3 ದಿನ ಕಳೆದು ಭೂಮಿಗೆ ಮರಳಿದ ಪ್ರವಾಸಿಗರು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.