ಸಂಪ್ರದಾಯದ ಹೆಸರಿನಲ್ಲಿ ನಡೆಯಿತು 1500 ಡಾಲ್ಫಿನ್ ಗಳ ಮಾರಣ ಹೋಮ, ರಕ್ತಮಯವಾಯಿತು ಸಮುದ್ರ

ಡೆನ್ಮಾರ್ಕ್‌ನಲ್ಲಿ ಈ ಭಯಾನಕ ಸಂಪ್ರದಾಯದ ಆಚರಣೆಯಲ್ಲಿ ಇದುವರೆಗೆ ಸುಮಾರು 1,500 ಡಾಲ್ಫಿನ್‌ಗಳ ಹತ್ಯೆ ಮಾಡಲಾಗಿದೆ. ಡಾಲ್ಫಿನ್‌ಗಳ ರಕ್ತದಿಂದಾಗಿ, ಫೈರೋ ದ್ವೀಪಗಳಲ್ಲಿ ಸಮುದ್ರ ಸಂಪೂರ್ಣ ರಕ್ತಮಯವಾಗಿದೆ.

Written by - Ranjitha R K | Last Updated : Sep 20, 2021, 06:12 PM IST
  • ಗ್ರೈಂಡ್‌ಡ್ರಾಪ್ ಸಮಯದಲ್ಲಿ ಡಾಲ್ಫಿನ್ ಗಳ ಹತ್ಯೆ
  • ಫೈರೋ ದ್ವೀಪಗಳಲ್ಲಿ ಆಚರಿಸಲಾಗುತ್ತದೆ ಈ ಸಂಪ್ರದಾಯ
  • ಸಾಮಾಜಿಕ ಮಾಧ್ಯಮದಲ್ಲಿ ಈ ಆಚರಣೆ ಬಗ್ಗೆ ಅಸಮಾಧಾನ
ಸಂಪ್ರದಾಯದ ಹೆಸರಿನಲ್ಲಿ ನಡೆಯಿತು 1500 ಡಾಲ್ಫಿನ್ ಗಳ ಮಾರಣ ಹೋಮ, ರಕ್ತಮಯವಾಯಿತು ಸಮುದ್ರ title=
ಗ್ರೈಂಡ್‌ಡ್ರಾಪ್ ಸಮಯದಲ್ಲಿ ಡಾಲ್ಫಿನ್ ಗಳ ಹತ್ಯೆ (photo zee news)

ನವದೆಹಲಿ: ಡೆನ್ಮಾರ್ಕ್ ನಲ್ಲಿ (Denmark) ಬಹಳ ಭಯಾನಕವಾದ ಆಚರಣೆಯೊಂದು ಜಾರಿಯಲ್ಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತದೆ. ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಸಂಪ್ರದಾಯದ ಹೆಸರಿನಲ್ಲಿ ಸಾವಿರಾರು ಡಾಲ್ಫಿನ್ ಗಳ ಮಾರಣ ಹೋಮ (Tradition To Kill Dolphins) ನಡೆಯುತ್ತದೆ. ಈ ಸಂಪ್ರದಾಯವನ್ನು ಡೆನ್ಮಾರ್ಕ್ ನ ಫೈರೋ ದ್ವೀಪದಲ್ಲಿ ಆಚರಿಸಲಾಗುತ್ತದೆ. ಈ ಆಚರಣೆ ವೇಳೆ, ಸಾವಿರಾರು ಜನರು ಸಮುದ್ರತೀರದಲ್ಲಿ ಸೇರುತ್ತಾರೆ.  

1500 ಡಾಲ್ಫಿನ್‌ಗಳ ಮಾರಣ ಹೋಮ :
ಡೆನ್ಮಾರ್ಕ್‌ನಲ್ಲಿ ಈ ಭಯಾನಕ ಸಂಪ್ರದಾಯದ ಆಚರಣೆಯಲ್ಲಿ ಇದುವರೆಗೆ ಸುಮಾರು 1,500 ಡಾಲ್ಫಿನ್‌ಗಳ ಹತ್ಯೆ ಮಾಡಲಾಗಿದೆ. ಡಾಲ್ಫಿನ್‌ಗಳ ರಕ್ತದಿಂದಾಗಿ, ಫೈರೋ ದ್ವೀಪಗಳಲ್ಲಿ ಸಮುದ್ರ ಸಂಪೂರ್ಣ ರಕ್ತಮಯವಾಗಿದೆ. ಈ ದೃಶ್ಯವು ನೋಡಲು ಭಯಾನಕವಾಗಿತ್ತು.

ಇದನ್ನೂ ಓದಿ : Watch Video: ಅಪರಿಚಿತನ ಗುಂಡಿನ ದಾಳಿಗೆ 8 ಬಲಿ, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು!

ಆನಿಮಲ್ ರೈಟ್ಸ್ ಕಾರ್ಯಕರ್ತರ ಪ್ರತಿಭಟನೆ :
ಆನಿಮಲ್ ರೈಟ್ಸ್  ಕಾರ್ಯಕರ್ತರು (Animal Rights Activists) ಡೆನ್ಮಾರ್ಕ್ ನಲ್ಲಿ 1,500 ಡಾಲ್ಫಿನ್ ಗಳ ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಯಾನಕ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಏನಿದು ಸಂಪ್ರದಾಯ : 
ಡಾಲ್ಫಿನ್‌ಗಳನ್ನು ಕೊಲ್ಲುವ ಈ ಪದ್ಧತಿಯನ್ನು ಗ್ರಿಂಡ್ಯಾಡ್‌ರಾಪ್ (Grindadrap)ಎಂದು ಕರೆಯಲಾಗುತ್ತದೆ. ಇದರಲ್ಲಿ ಜನರು ಮೋಟಾರು ದೋಣಿಗಳಲ್ಲಿ ಸವಾರಿ ಮಾಡುತ್ತಾರೆ ಮತ್ತು ಹಾರ್ಪೂನ್‌ಗಳ (Harpoons) ಸಹಾಯದಿಂದ ಸಮುದ್ರದ ಮಧ್ಯಕ್ಕೆ ಹೋಗಿ ಡಾಲ್ಫಿನ್‌ಗಳನ್ನು ಕೊಲ್ಲಲಾಗುತ್ತದೆ. ಈ ಆಚರಣೆಯಿಂದಾಗಿ, ಸಾವಿರಾರು ಡಾಲ್ಫಿನ್‌ಗಳು ಫೈರೋ ದ್ವೀಪಗಳ ಸಮುದ್ರತೀರದಲ್ಲಿ ಬಿದ್ದಿವೆ. ಸಾಮಾಜಿಕ ಮಾಧ್ಯಮದಲ್ಲಿ (Social media) ಅನೇಕ ಬಳಕೆದಾರರು ಡಾಲ್ಫಿನ್‌ಗಳನ್ನು ಕೊಲ್ಲುವ ಸಂಪ್ರದಾಯವನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ :SpaceX Tour: ಕಕ್ಷೆಯಲ್ಲಿ ಯಶಸ್ವಿಯಾಗಿ 3 ದಿನ ಕಳೆದು ಭೂಮಿಗೆ ಮರಳಿದ ಪ್ರವಾಸಿಗರು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News