Corona Vaccine: ಭಾರತ ಮತ್ತು ಭಾರತೀಯರಿಗೆ ಉತ್ತಮ ಸುದ್ದಿಯಿದೆ, ಭಾರತ್ ಬಯೋಟೆಕ್‌ನ ಕರೋನಾ ಲಸಿಕೆ ಕೋವಾಕ್ಸಿನ್ ಅನ್ನು ಆಸ್ಟ್ರೇಲಿಯಾ ಸೇರಿದಂತೆ ಇನ್ನೂ 5 ದೇಶಗಳು ಗುರುತಿಸಿವೆ. ಸೋಮವಾರ ಭಾರತ್ ಬಯೋಟೆಕ್‌ನ ಕರೋನಾ ಲಸಿಕೆ ಕೋವಾಕ್ಸಿನ್ ಪಡೆದವರಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಆಸ್ಟ್ರೇಲಿಯಾವು ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಇನ್ನೂ ಐದು ದೇಶಗಳು ಭಾರತದ ಲಸಿಕೆ ಪ್ರಮಾಣಪತ್ರವನ್ನು ಗುರುತಿಸಿವೆ. ಈ ಐದು ದೇಶಗಳು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ (Covishield) ಎರಡನ್ನೂ ಗುರುತಿಸಿವೆ.


COMMERCIAL BREAK
SCROLL TO CONTINUE READING

ಎಸ್ಟೋನಿಯಾ, ಕಿರ್ಗಿಸ್ತಾನ್, ಪ್ಯಾಲೆಸ್ಟೈನ್, ಮಾರಿಷಸ್ ಮತ್ತು ಮಂಗೋಲಿಯಾ ಸೇರಿದಂತೆ ಇನ್ನೂ ಐದು ದೇಶಗಳು ಭಾರತದ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಗುರುತಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ. 


ಇದನ್ನೂ ಓದಿ- Corona Vaccine: ಈ ಲಸಿಕೆಯಿಂದ ಎಚ್‌ಐವಿ ಅಪಾಯವಿದೆಯೇ? ದಕ್ಷಿಣ ಆಫ್ರಿಕಾದ ನಂತರ, ನಮೀಬಿಯಾದಲ್ಲಿ ಲಸಿಕೆ ನಿಷೇಧ


ಈ ಕುರಿತಂತೆ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು,  ಕೋವಿಡ್-19 ಲಸಿಕೆ (COVID-19 Vaccine) ಪ್ರಮಾಣಪತ್ರಗಳ ಪರಸ್ಪರ ಗುರುತಿಸುವಿಕೆ ಮುಂದುವರೆದಿದೆ ಎಂದು ಹೇಳಿದ್ದಾರೆ! ಎಸ್ಟೋನಿಯಾ, ಕಿರ್ಗಿಸ್ತಾನ್, ಪ್ಯಾಲೆಸ್ಟೈನ್, ಮಾರಿಷಸ್ ಮತ್ತು ಮಂಗೋಲಿಯಾ ಸೇರಿದಂತೆ ಇನ್ನೂ ಐದು ದೇಶಗಳು ಭಾರತದ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಗುರುತಿಸಿವೆ. ಮಾನ್ಯತೆ ಪಡೆದ ನಂತರ, ಈಗ ಭಾರತದಲ್ಲಿ ವ್ಯಾಕ್ಸಿನೇಷನ್ ಪಡೆದಿರುವವರು ಈ ದೇಶಗಳಲ್ಲಿ ಪ್ರಯಾಣ ಮಾಡಬಹುದು ಎಂದವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ- ಈಗ 2 ರಿಂದ 18 ವರ್ಷದ ಮಕ್ಕಳಿಗೂ ಭಾರತದಲ್ಲಿ ಕರೋನಾ ಲಸಿಕೆ, ಅನುಮೋದನೆ ನೀಡಿದ ಡಿಸಿಜಿಐ


ಗಮನಾರ್ಹವಾಗಿ, ಇದಕ್ಕೂ ಮುನ್ನ ಲಸಿಕೆ ಸ್ವೀಕರಿಸಿರುವ ಪ್ರಯಾಣಿಕರ ಪ್ರವೇಶವನ್ನು ಅನುಮತಿಸಲು ಆಸ್ಟ್ರೇಲಿಯಾವು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ಗೆ (COVAXIN) ಕೋವಿಶೀಲ್ಡ್‌ನೊಂದಿಗೆ ಮಾನ್ಯತೆ ನೀಡಿತ್ತು. ಆಸ್ಟ್ರೇಲಿಯನ್ ಡ್ರಗ್ ರೆಗ್ಯುಲೇಟರ್, ದಿ ಥೆರಪ್ಯೂಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ), ಆಸ್ಟ್ರೇಲಿಯಾದಲ್ಲಿ ನೋಂದಾಯಿಸದ ಇನ್ನೂ ಎರಡು ಕೋವಿಡ್-19 ಲಸಿಕೆಗಳನ್ನು ಗುರುತಿಸಿದೆ ಎಂದು ಘೋಷಿಸಿದೆ. ಆದರೆ ಭಾರತ್ ಬಯೋಟೆಕ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಆಸ್ಟ್ರೇಲಿಯಾ ಇತ್ತೀಚಿಗೆ ಗುರುತಿಸಿರುವ ಲಸಿಕೆಗಳಲ್ಲಿ ಕೋವಾಕ್ಸಿನ್ ಮತ್ತು ಬಿಬಿಐಬಿಪಿ ಸೇರಿವೆ. -CoRV (ಸಿನೋಫಾರ್ಮ್, ಚೀನಾದಿಂದ ತಯಾರಿಸಲ್ಪಟ್ಟಿದೆ) ಲಸಿಕೆಗಳು ಸೇರಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ