ಈಗ 2 ರಿಂದ 18 ವರ್ಷದ ಮಕ್ಕಳಿಗೂ ಭಾರತದಲ್ಲಿ ಕರೋನಾ ಲಸಿಕೆ, ಅನುಮೋದನೆ ನೀಡಿದ ಡಿಸಿಜಿಐ

ಭಾರತ್ ಬಯೋಟೆಕ್  ಮಕ್ಕಳ ಮೇಲೆ ಲಸಿಕೆಯ ಪ್ರಯೋಗಗಳನ್ನು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಿತ್ತು. ಕ್ಲಿನಿಕಲ್ ಪ್ರಯೋಗಗಳಲ್ಲಿ ಇದು ಸುಮಾರು 78 ಪ್ರತಿಶತದಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. 

Written by - Ranjitha R K | Last Updated : Oct 12, 2021, 02:10 PM IST
  • 2 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೂ ಕರೋನಾ ಲಸಿಕೆ
  • ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಗೆ ಅನುಮೋದನೆ ನೀಡಿದ ಡಿಸಿಜಿಐ
  • ಭಾರತದಲ್ಲಿ ಮಕ್ಕಳಿಗೆ ಅನುಮೋದನೆ ಪಡೆದ ಮೊದಲ ಲಸಿಕೆ ಇದು.
ಈಗ 2 ರಿಂದ 18 ವರ್ಷದ ಮಕ್ಕಳಿಗೂ ಭಾರತದಲ್ಲಿ ಕರೋನಾ ಲಸಿಕೆ, ಅನುಮೋದನೆ ನೀಡಿದ ಡಿಸಿಜಿಐ  title=
2 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೂ ಕರೋನಾ ಲಸಿಕೆ (file photo)

ನವದೆಹಲಿ : ಹೆಚ್ಚುತ್ತಿರುವ ಕೊರೊನಾ ಸೋಂಕಿನ ವಿರುದ್ದ ಹೋರಾಡಲು ಲಸಿಕೆಯೇ (Corona Vaccine) ಅತಿದೊಡ್ಡ ಅಸ್ತ್ರವಾಗಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ತುರ್ತು ಬಳಕೆಗಾಗಿ ಭಾರತ್ ಬಯೋಟೆಕ್ ನ ಕೊವಾಕ್ಸಿನ್ (Covaxin for Children) ಅನ್ನು  2 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಅನುಮೋದಿಸಿದೆ. ಭಾರತದಲ್ಲಿ ಮಕ್ಕಳಿಗೆ ಅನುಮೋದನೆ ಪಡೆದ ಮೊದಲ ಲಸಿಕೆ ಇದಾಗಿದೆ. 

ಪ್ರಯೋಗದಲ್ಲಿ 78 ಪ್ರತಿಶತ ಪರಿಣಾಮಕಾರಿ ಎಂದು ಸಾಬೀತಾದ ಕೋವಾಕ್ಸಿನ್ :
ಭಾರತ್ ಬಯೋಟೆಕ್ (Bharat Biotech) ಮಕ್ಕಳ ಮೇಲೆ ಲಸಿಕೆಯ ಪ್ರಯೋಗಗಳನ್ನು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಿತ್ತು. ಕ್ಲಿನಿಕಲ್ ಪ್ರಯೋಗಗಳಲ್ಲಿ ಇದು ಸುಮಾರು 78 ಪ್ರತಿಶತದಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಕಂಪನಿಯು ಡೇಟಾವನ್ನು ಸಲ್ಲಿಸಿದ ನಂತರ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಮೌಲ್ಯಮಾಪನದ ನಂತರ ಕಂಪನಿಯಿಂದ ಹೆಚ್ಚುವರಿ ಡೇಟಾವನ್ನು ಕೇಳಿತ್ತು. ನಿನ್ನೆ ತಜ್ಞರ ಸಮಿತಿಯೂ ಈ ಕುರಿತಂತೆ ಸಭೆ ನಡೆಸಿತ್ತು. ಇಂದು ನಡೆದ ಸಭೆಯಲ್ಲಿ, 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಾಕ್ಸಿನ್ (Covaxin) ಹಾಕಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ : ದೆಹಲಿ ಮಾಲಿನ್ಯ ತಡೆಗೆ ಸಿಎಂ ಕೇಜ್ರಿವಾಲ್ ಕಠಿಣ ಹೆಜ್ಜೆ, 'ರೆಡ್ ಲೈಟ್ ಆನ್ ಕಾರ್ ಆಫ್' ಅಭಿಯಾನಕ್ಕೆ ಚಾಲನೆ

ದೇಶದಲ್ಲಿ ಇದುವರೆಗೆ 95.89 ಕೋಟಿ ಡೋಸ್‌ ನೀಡಲಾಗಿದೆ :
ಭಾರತದಲ್ಲಿ ವ್ಯಾಕ್ಸಿನೇಷನ್ ಅಭಿಯಾನವನ್ನು  (Vaccination Campaign) ಜನವರಿ 16 ರಂದು ಆರಂಭಿಸಲಾಯಿತು. ಇಲ್ಲಿಯವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇದುವರೆಗೆ ದೇಶಾದ್ಯಂತ 95 ಕೋಟಿ 89 ಲಕ್ಷ 78 ಸಾವಿರದ 49 ಡೋಸ್ ಕೊರೊನಾ ಲಸಿಕೆ (Corona Vaccine) ನೀಡಲಾಗಿದೆ. ಭಾರತದಲ್ಲಿ 68 ಕೋಟಿ 65 ಲಕ್ಷ 80 ಸಾವಿರದ 570 ಜನರು ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದರೆ, 27 ಕೋಟಿ 23 ಲಕ್ಷ 97 ಸಾವಿರದ 479 ಜನರು ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ.

ಇದನ್ನೂ ಓದಿ : Vivo X70 Pro+ ಸ್ಮಾರ್ಟ್ಫೋನ್ ಖರೀದಿಯ ಮೇಲೆ ಬಂಪರ್ ಡಿಸ್ಕೌಂಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News