Coronavirus : ಭಾರತೀಯರಿಗೆ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆಯಾ ? ಏನು ಹೇಳುತ್ತಿದೆ ಸರ್ಕಾರ

ಆರೋಗ್ಯ ಸಚಿವಾಲಯದ ಪ್ರಕಾರ, ಕೇರಳವು ಅತಿ ಹೆಚ್ಚು 144,000 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಅಂದರೆ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ 52 ರಷ್ಟು ಕೇರಳದಲ್ಲೇ ದಾಖಲಾಗಿದೆ. 

Written by - Ranjitha R K | Last Updated : Sep 30, 2021, 07:28 PM IST
  • ಮುಂಬರುವ ಹಬ್ಬಗಳ ದೃಷ್ಟಿಯಿಂದ ಕಳವಳ
  • ಈ ಬಾರಿ ಹಬ್ಬವನ್ನು ಆನ್‌ಲೈನ್‌ನಲ್ಲಿ ಆಚರಿಸುವಂತೆ ಕೇಂದ್ರ ಮನವಿ
  • ಬೂಸ್ಟರ್ ಡೋಸ್ ಬೇಕೇ ಅಥವಾ ಬೇಡವೇ?
Coronavirus : ಭಾರತೀಯರಿಗೆ ಬೂಸ್ಟರ್ ಡೋಸ್ ನೀಡುವ ಅಗತ್ಯವಿದೆಯಾ ? ಏನು ಹೇಳುತ್ತಿದೆ ಸರ್ಕಾರ  title=
ಈ ಬಾರಿ ಹಬ್ಬವನ್ನು ಆನ್‌ಲೈನ್‌ನಲ್ಲಿ ಆಚರಿಸುವಂತೆ ಕೇಂದ್ರ ಮನವಿ (file photo)

ನವದೆಹಲಿ : ಕೊರೊನಾವೈರಸ್ (Coronavirus)ಸಾಂಕ್ರಾಮಿಕದ ಮೂರನೇ ಅಲೆಯ ಚರ್ಚೆಯ ನಡುವೆ, ಮುಂಬರುವ ಹಬ್ಬಗಳ ದೃಷ್ಟಿಯಿಂದ ಕೇಂದ್ರ ಸರ್ಕಾರವು ಜನರಿಗೆ ವಿಶೇಷ ಮನವಿ ಮಾಡಿದೆ. ಇದರೊಂದಿಗೆ, ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhooshan),  ಕೇರಳದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಲು ಆರಂಭಿಸಿವೆ ಎಂದು ಹೇಳಿದ್ದಾರೆ.  

ಕೇರಳದಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು :
ಆರೋಗ್ಯ ಸಚಿವಾಲಯದ ಪ್ರಕಾರ, ಕೇರಳವು ಅತಿ ಹೆಚ್ಚು 144,000 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಅಂದರೆ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ 52 ರಷ್ಟು ಕೇರಳದಲ್ಲೇ (Kerala) ದಾಖಲಾಗಿದೆ. ಅದೇ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ (Maharastra) 40,000 ಸಕ್ರಿಯ ಕರೋನಾ ಪ್ರಕರಣಗಳಿವೆ. ತಮಿಳುನಾಡು 17,000, ಮಿಜೋರಾಂ 16,800, ಕರ್ನಾಟಕ 12,000 ಮತ್ತು ಆಂಧ್ರಪ್ರದೇಶ 11,000 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ದೇಶಾದ್ಯಂತ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿವೆ. ಚೇತರಿಕೆಯ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಚೇತರಿಕೆಯ ಪ್ರಮಾಣವು ಸುಮಾರು 98%ಆಗಿದೆ. 

ಇದನ್ನೂ ಓದಿ : ಎರಡು ಫೋನ್ ಗಳನ್ನು ಬಿಡುಗಡೆ ಮಾಡಿದ Vivo, ವಯರ್ ಲೆಸ್ ಚಾರ್ಜಿಂಗ್, ಅದ್ಬುತ ಕ್ಯಾಮೆರಾದೊಂದಿಗೆ ಇರಲಿದೆ ಈ ವೈಶಿಷ್ಟ್ಯ

'ಆನ್‌ಲೈನ್‌ನಲ್ಲಿ ಹಬ್ಬವನ್ನು ಆಚರಿಸಬೇಕು':
ಹಬ್ಬದ ವೇಳೆ,  ಜನಸಂದಣಿಯನ್ನು ತಪ್ಪಿಸಬೇಕು, ಮತ್ತು ಮಾಸ್ಕ್ (Mask) ಧರಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿಯು ಮನವಿ ಮಾಡಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಈ ಬಾರಿ ಹಬ್ಬವನ್ನು ಆನ್‌ಲೈನ್‌ನಲ್ಲಿ (online) ಆಚರಿಸಬೇಕು ಎಂದು ಅವರು ಹೇಳಿದ್ದಾರೆ.  ಈ ಬಗ್ಗೆ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ. ಕಂಟೈನ್‌ಮೆಂಟ್ ವಲಯದಲ್ಲಿ ಯಾವುದೇ ಜನದಟ್ಟಣೆಯ ಕಾರ್ಯಕ್ರಮವನ್ನು ಆಯೋಜಿಸದಂತೆ ಕಠಿಣ ಎಚ್ಚರಿಕೆ ನೀಡಿದೆ.

'ಯಾವುದೇ ಬೂಸ್ಟರ್ ಡೋಸ್ ಅಗತ್ಯವಿಲ್ಲ'
ಮತ್ತೊಂದೆಡೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಹಾನಿರ್ದೇಶಕ ಬಲರಾಮ್ ಭಾರ್ಗವ, 'ಹಬ್ಬಗಳು ಬರಲಿವೆ ಮತ್ತು ಜನರು ತಮ್ಮ ಮನೆಗಳಿಗೆ ಪ್ರಯಾಣಿಸಲು ಯೋಜಿಸುತ್ತಿದ್ದಾರೆ. ನೀವು ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸಲು ಯೋಚಿಸುತ್ತಿದ್ದರೆ, ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅಗತ್ಯವಿದ್ದಾಗ ಮಾತ್ರ ಖಾಸಗಿ ವಾಹನದಲ್ಲಿ ಪ್ರಯಾಣವನ್ನು ಮಾಡುವಂತೆ ಸಲಹೆ ನೀಡಿದೆ. ಅಲ್ಲದೆ ಹಬ್ಬಗಳನ್ನು ಸರಳತೆವಾಗಿ ಆಚರಿಸುವಂತೆಯೂ ಹೇಳಿದೆ. ಇನ್ನು ಬೂಸ್ಟರ್ ಡೋಸ್ ಬಗ್ಗೆ ಮಾತನಾಡಿದ ಭಾರ್ಗವ, ಬೂಸ್ಟರ್ ಡೋಸ್ (Booster dose) ಬಗ್ಗೆ ಸದ್ಯಕ್ಕೆ ಪ್ರಶ್ನೆಗಳು ಉದ್ಭವಿಸುವಿದಿಲ್ಲ ಎಂದಿದ್ದಾರೆ. ಈಗ ಎರಡು ಡೋಸ್‌ಗಳನ್ನು ಪೂರ್ಣಗೊಳಿಸುವುದು ಹೆಚ್ಚು ಮುಖ್ಯವಾಗಿದೆ ಎಂದಿದ್ದಾರೆ. 

ಇದನ್ನೂ ಓದಿ: ಮುಂಬೈ ವೈದ್ಯಕೀಯ ಕಾಲೇಜಿನಲ್ಲಿ 29 ವಿದ್ಯಾರ್ಥಿಗಳಿಗೆ ಕೊರೊನಾ ಧೃಡ

ಮೊದಲ ಡೋಸ್ ಪಡೆದ 69% ಜನಸಂಖ್ಯೆ :
ಕೇಂದ್ರ ಸರ್ಕಾರ  ಪ್ರಕಾರ ದೇಶದ ವಯಸ್ಕ ಜನಸಂಖ್ಯೆಯ 69% ಜನರು ಕೋವಿಡ್ -19 ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. 25 ಪ್ರತಿಶತದಷ್ಟು ಜನರು ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. 64.1 ರಷ್ಟು ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ಗ್ರಾಮೀಣ ಪ್ರದೇಶದಲ್ಲಿ ನೀಡಲಾಗಿದ್ದು, 35 ಪ್ರತಿಶತವನ್ನು ನಗರ ಪ್ರದೇಶಗಳಲ್ಲಿ ನೀಡಲಾಗಿದೆ. ಒಟ್ಟು 67.4 ಲಕ್ಷ ಡೋಸ್‌ಗಳನ್ನು ಗ್ರಾಮೀಣ/ನಗರ ಎಂದು ಪಟ್ಟಿ ಮಾಡದ ಇಮ್ಯುನೈಸೇಶನ್ ಕೇಂದ್ರಗಳಲ್ಲಿ ನೀಡಲಾಗಿದೆ.

zydus cadilla ಬೆಲೆ ನಿರ್ಧಾರವಾಗಿಲ್ಲ : 
zydus cadilla  COVID-19ಲಸಿಕೆಯ ಮೇಲೆ, ಸರ್ಕಾರವು ಜೈ ಕೋವ್-ಡಿ' ಮೂರು-ಡೋಸ್ ಸೂಜಿರಹಿತ ಲಸಿಕೆ ಮತ್ತು ಅದರ ಬೆಲೆಯನ್ನು ಪ್ರಸ್ತುತ ನಿರ್ವಹಿಸುತ್ತಿರುವ ಲಸಿಕೆಗಳಿಂದ ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತದೆ ಎಂದು ಹೇಳಿದೆ. ಅದರ ಬೆಲೆಯನ್ನು ನಿರ್ಧರಿಸಲು ತಯಾರಕರೊಂದಿಗೆ ಮಾತುಕತೆ ನಡೆಯುತ್ತಿದೆ. ನಿರ್ಧಾರ ತೆಗೆದುಕೊಂಡ ತಕ್ಷಣ ಅದನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News