`Corona Vaccine ಫಾರ್ಮುಲಾ ಹಂಚಿಕೊಳ್ಳಲು ಅದು ಪಾಕ ವಿಧಾನ ಅಲ್ಲ`
Corona Vaccine: ಕೊರೊನಾ ವೈರಸ್ ಲಸಿಕೆಯ ಫಾರ್ಮುಲಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆಗೆ ಹಂಚಿಕೊಳ್ಳಬಾರದು ಎಂದು ಮೈಕ್ರೋಸಾಫ್ಟ್ ಸಹ ಸಂಪಾದಕ ಬಿಲ್ ಗೇಟ್ಸ್ ಹೇಳಿದ್ದಾರೆ.
ನ್ಯೂಯಾರ್ಕ್: Corona Vaccine - ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ ಹಾಗೂ ಜನರ ಪ್ರಾಣ ಉಳಿಸಲು ಆದಷ್ಟು ಬೇಗ ವ್ಯಾಕ್ಸಿನೇಷನ್ ಕೈಗೊಳ್ಳುವ ಸಲಹೆ ಕೂಡ ನೀಡಲಾಗುತ್ತಿದೆ. ಆದರೆ, ಇವೆಲ್ಲದವುಗಳ ನಡುವೆ ಕೊರೊನಾ ವ್ಯಾಕ್ಸಿನ್ ಫಾರ್ಮುಲಾವನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ (Developing Nations) ನೀಡಬಾರದು ಎಂದು ಮೈಕ್ರೋಸಾಫ್ಟ್ (Microsoft) ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಹೇಳಿದ್ದಾರೆ.
ಇದನ್ನೂ ಓದಿ- ಬಿಡೆನ್-ಮೋದಿ ದೂರವಾಣಿ ಮಾತುಕತೆ ನಂತರ ಭಾರತಕ್ಕೆ ತುರ್ತು ನೆರವು ನೀಡಲು ಸಿದ್ಧ ಎಂದ ಯುಎಸ್
ವ್ಯಾಕ್ಸಿನ್ ಫಾರ್ಮುಲಾ ಸಿಗಬಾರದು: ಬಿಲ್ ಗೇಟ್ಸ್
ಅಮೆರಿಕಾದ ಸ್ಕೈ ನ್ಯೂಸ್ ಸುದ್ದಿ ವಾಹಿನಿಗೆ ಹೀದಿರುವ ಒಂದು ಸಂದರ್ಶನದಲ್ಲಿ ಮಾತನಾಡಿರುವ ಬಿಲ್ ಗೇಟ್ಸ್, " ಕೊವಿಡ್-19 (Covid-19) ಫಾರ್ಮುಲಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೀಡಬಾರದು. ಈ ಕಾರಣದಿಂದ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳು ವ್ಯಾಕ್ಸಿನ್ ಗಾಗಿ ಸ್ವಲ್ಪ ಸಮಯ ಕಾಯಬೇಕಾಗಲಿದೆ ಆದರೆ, ವ್ಯಾಕ್ದೀನ್ ಫಾರ್ಮುಲಾ ಅನ್ನು ಅವರೊಂದಿಗೆ ಹಂಚಿಕೊಳ್ಳಬಾರದು" ಎಂದಿದ್ದಾರೆ.
ಇದನ್ನೂ ಓದಿ- Corona Second Wave: ಕೋವಿಡ್ ನಿರ್ವಹಣೆಗೆ Googleನಿಂದ 135 ಕೋಟಿ ರೂ. ನೆರವು
"ಯುಎಸ್ ನ ಜಾನ್ಸನ್ ಅಂಡ್ ಜಾನ್ಸನ್ ಫ್ಯಾಕ್ಟರಿ ಹಾಗೂ ಭಾರತದ ಯಾವುದಾದರೊಂದು ಫ್ಯಾಕ್ಟರಿಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ. ವ್ಯಾಕ್ಸಿನ್ ಅನ್ನು ನಾವು ನಮ್ಮ ಹಣ ಹಾಗೂ ತಜ್ಞತೆಯಿಂದ ತಯಾರಿಸುತ್ತೇವೆ. ವ್ಯಾಕ್ಸಿನ್ ಫಾರ್ಮುಲಾವನ್ನು ಯಾರೊಂದಿಗೂ ಹಂಚಿಕೊಳ್ಳಲು ಅದೊಂದು ರೆಸಿಪಿ ಅಲ್ಲ. ಇದಕ್ಕಾಗಿ ಅತಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ, ಟೆಸ್ಟಿಂಗ್ ನಡೆಸಬೇಕಾಗುತ್ತದೆ, ಟ್ರಯಲ್ ನಡೆಸಬೇಕಾಗುತ್ತದೆ. ವ್ಯಾಕ್ಸಿನ್ ತಯಾರಿಕೆಯ ವೇಳೆ ಪ್ರತಿಯೊಂದು ಸಂಗತಿಗಳನ್ನು ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ" ಎಂದು ಗೇಟ್ಸ್ ಹೇಳಿದ್ದಾರೆ.
ಇದನ್ನೂ ಓದಿ-Covid-19 Crisis: ಭಾರತದ ನೆರವಿಗೆ ಧಾವಿಸಿದ ಯುರೋಪಿಯನ್ ಒಕ್ಕೂಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.