Corona Second Wave: ಕೋವಿಡ್ ನಿರ್ವಹಣೆಗೆ Googleನಿಂದ 135 ಕೋಟಿ ರೂ. ನೆರವು

ಗೂಗಲ್‌ ಕೊಡುವ ಹಣವನ್ನು ಆಮ್ಲಜನಕ ಮತ್ತು ಪರೀಕ್ಷಾ ಸಾಧನಗಳು ಸೇರಿದಂತೆ ತುರ್ತು ವೈದ್ಯಕೀಯ ಸರಬರಾಜುಗಳನ್ನು ಪಡೆಯಬಹುದು ಎಂದು ಸಂಸ್ಥೆ ಹೇಳಿದೆ. 

Written by - Yashaswini V | Last Updated : Apr 26, 2021, 12:29 PM IST
  • ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ (Covid 19) ಬಿಕ್ಕಟ್ಟನ್ನು ನೋಡಿ ಆತಂಕಕ್ಕೆ ಒಳಗಾಗಿದ್ದೇನೆ- ಗೂಗಲ್ ಸಂಸ್ಥೆಯ ಸಿಇಓ ಸುಂದರ್ ಪಿಚೈ
  • ಗೂಗಲ್ ಸಂಸ್ಥೆಯ ಪರವಾಗಿ ಭಾರತದ ಕೋವಿಡ್ ನಿರ್ವಹಣೆಗೆ 135 ಕೋಟಿ ರೂಪಾಯಿಗಳ ನೆರವು
  • ಗೂಗಲ್‌ ಕೊಡುವ ಹಣವನ್ನು ಆಮ್ಲಜನಕ ಮತ್ತು ಪರೀಕ್ಷಾ ಸಾಧನಗಳು ಸೇರಿದಂತೆ ತುರ್ತು ವೈದ್ಯಕೀಯ ಸರಬರಾಜುಗಳನ್ನು ಪಡೆಯಬಹುದು
Corona Second Wave: ಕೋವಿಡ್ ನಿರ್ವಹಣೆಗೆ Googleನಿಂದ 135 ಕೋಟಿ ರೂ. ನೆರವು title=
ಭಾರತದ ಕೋವಿಡ್ ನಿರ್ವಹಣೆಗೆ 135 ಕೋಟಿ ರೂ.ಗಳ ವೈದ್ಯಕೀಯ ನೆರವು ಘೋಷಿಸಿದ ಗೂಗಲ್

ನವದೆಹಲಿ: ದೇಶದಲ್ಲಿ ಎರಡನೇ ಸುತ್ತಿನ ಕೊರೋನಾ ಅಲೆ (Corona Second Wave) ವ್ಯಾಪಕವಾಗಿ ಹರಡುತ್ತಿದ್ದು ಆಘಾತಕಾರಿ ವಾತಾವರಣ ಸೃಷ್ಟಿಸುತ್ತಿದೆ.‌ ಪ್ರತಿದಿನ ಈಗ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾವೈರಸ್ ತಗುಲುತ್ತಿದೆ. ಮಹಾಮಾರಿ ಕೋವಿಡ್-19 (Covid-19) ದೇಶವನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿರುವುದರಿಂದ ಗೂಗಲ್ ಸಂಸ್ಥೆಯು (Google) ಭಾರತದ ಕೋವಿಡ್ ನಿರ್ವಹಣೆಗೆ 135 ಕೋಟಿ ರೂಪಾಯಿಗಳ ವೈದ್ಯಕೀಯ ನೆರವು ನೀಡುವುದಾಗಿ ಘೋಷಿಸಿದೆ.

ಗೂಗಲ್ (Google) ಸಂಸ್ಥೆಯು ಕೋವಿಡ್ ಬಿಕ್ಕಟ್ಟಿನಿಂದ ಹೆಚ್ಚು ತೊಂದರೆಗೊಳಗಾದ ಕುಟುಂಬಗಳಿಗೆ ಅವರ ದೈನಂದಿನ ಖರ್ಚುಗಳಿಗೆ ಸಹಾಯ ಮಾಡಲು ನಗದು ಸಹಾಯವನ್ನು ಒದಗಿಸುತ್ತದೆ ಎಂದು ಘೋಷಿಸಿದೆ. ಗೂಗಲ್‌ ಕೊಡುವ ಹಣವನ್ನು ಆಮ್ಲಜನಕ ಮತ್ತು ಪರೀಕ್ಷಾ ಸಾಧನಗಳು ಸೇರಿದಂತೆ ತುರ್ತು ವೈದ್ಯಕೀಯ ಸರಬರಾಜುಗಳನ್ನು ಪಡೆಯಬಹುದು ಎಂದು ಸಂಸ್ಥೆ ಹೇಳಿದೆ. 

ಇದನ್ನೂ ಓದಿ - Corona- ನಿಮ್ಮ ಒಳ್ಳೆಯ ಅಭ್ಯಾಸ ಕರೋನದ ಅಪಾಯವನ್ನು 31% ಕಡಿಮೆ ಮಾಡುತ್ತೆ

ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಗೂಗಲ್ ಸಂಸ್ಥೆಯ ಸಿಇಓ ಸುಂದರ್ ಪಿಚೈ (Google CEO Sundar Pichai)  "ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ (Covid 19) ಬಿಕ್ಕಟ್ಟನ್ನು ನೋಡಿ ಆತಂಕಕ್ಕೆ ಒಳಗಾಗಿದ್ದೇನೆ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗೂಗಲ್ ಸಂಸ್ಥೆಯ ಪರವಾಗಿ ಭಾರತದ ಕೋವಿಡ್ ನಿರ್ವಹಣೆಗೆ 135 ಕೋಟಿ ರೂಪಾಯಿಗಳ ನೆರವು ನೀಡುತ್ತಿರುವುದರಲ್ಲಿ ವೈಯಕ್ತಿಕವಾಗಿ ಸುಂದರ್ ಪಿಚೈ ಅವರು ಕೊಟ್ಟಿರುವ  5 ಕೋಟಿ ರೂಪಾಯಿಗಳ ಕೊಡುಗೆ ಕೂಡ ಇದೆ‌.

ಇದನ್ನೂ ಓದಿ - ಕರೋನಾ ಕಾಲದಲ್ಲಿ ಈ ಐದು ಮೆಡಿಕಲ್ ಉಪಕರಣ ಮನೆಯಲ್ಲಿರಲಿ.!

ಭಾರತದಲ್ಲಿ ಭಾನುವಾರ 3,52,991 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಈವರೆಗೆ ಒಟ್ಟು 1,73,13,163 ಜನರಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ. ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ಭಾನುವಾರ 2,812 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಕೊರೋನಾದಿಂದ ಬಲಿ ಆದವರ ಸಂಖ್ಯೆ 1,95,123ಕ್ಕೆ ಏರಿಕೆ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News