22 ಜನರಿಗೆ ಕೊರೊನಾ ಹರಡಿದ ಸ್ಪಾನಿಶ್ ವ್ಯಕ್ತಿಯ ಮೇಲೆ ಪ್ರಕರಣ ದಾಖಲು

ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವ ಸ್ಪ್ಯಾನಿಷ್ ವ್ಯಕ್ತಿಯೊಬ್ಬರು ಕೆಲಸದ ಸಹೋದ್ಯೋಗಿಗಳಿಗೆ "ನಿಮ್ಮೆಲ್ಲರಿಗೂ ಕೊರೊನಾ ಹರಡಲಿದ್ದೇನೆ" ಎಂದು ಸೋಂಕು ತಗಲಲು ಕಾರಣಕರ್ತನಾದ ವ್ಯಕ್ತಿ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.

Last Updated : Apr 25, 2021, 05:36 PM IST
  • ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವ ಸ್ಪ್ಯಾನಿಷ್ ವ್ಯಕ್ತಿಯೊಬ್ಬರು ಕೆಲಸದ ಸಹೋದ್ಯೋಗಿಗಳಿಗೆ'ನಿಮ್ಮೆಲ್ಲರಿಗೂ ಕೊರೊನಾ ಹರಡಲಿದ್ದೇನೆ" ಎಂದು ಸೋಂಕು ತಗಲಲು ಕಾರಣಕರ್ತನಾದ ವ್ಯಕ್ತಿ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.
22 ಜನರಿಗೆ ಕೊರೊನಾ ಹರಡಿದ ಸ್ಪಾನಿಶ್ ವ್ಯಕ್ತಿಯ ಮೇಲೆ ಪ್ರಕರಣ ದಾಖಲು  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವ ಸ್ಪ್ಯಾನಿಷ್ ವ್ಯಕ್ತಿಯೊಬ್ಬರು ಕೆಲಸದ ಸಹೋದ್ಯೋಗಿಗಳಿಗೆ "ನಿಮ್ಮೆಲ್ಲರಿಗೂ ಕೊರೊನಾ ಹರಡಲಿದ್ದೇನೆ" ಎಂದು ಸೋಂಕು ತಗಲಲು ಕಾರಣಕರ್ತನಾದ ವ್ಯಕ್ತಿ ಮೇಲೆ ಈಗ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ- ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 67 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು

ಈಗ ಉದ್ದೇಶ ಪೂರಕವಾದ ಗಾಯವನ್ನು ಉಂಟು ಮಾಡಿದ ಹಿನ್ನಲೆಯಲ್ಲಿ ಈ ಕ್ರಮ ಪ್ರಕರಣ ದಾಖಲಿಸಲಾಗಿದೆ. ಮೆಡಿಟರೇನಿಯನ್ ದ್ವೀಪದ ಮಲ್ಲೋರ್ಕಾದಲ್ಲಿ 40 ವರ್ಷದ ವ್ಯಕ್ತಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ Coronavirus ಹರಡಿದ ನಂತರ ತನಿಖೆ ಪ್ರಾರಂಭಿಸಲಾಯಿತು ಎಂದು ಸ್ಪ್ಯಾನಿಷ್ ಪೊಲೀಸರು ತಿಳಿಸಿದ್ದಾರೆ.ಮೊದಲು, ವ್ಯಕ್ತಿಯಲ್ಲಿ COVID-19 ರೋಗಲಕ್ಷಣಗಳು ಕಂಡು ಬಂದಿದ್ದವು.ಆದರೆ ಸ್ವಯಂ-ಪ್ರತ್ಯೇಕವಾಗಲು ನಿರಾಕರಿಸಿದನು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ- ನಿಲ್ಲುತ್ತಿಲ್ಲ ಕರೋನಾಸುರ ಆರ್ಭಟ..! ಕಳೆದ 24 ಗಂಟೆಗಳಲ್ಲಿ 3.5 ಲಕ್ಷ ಜನರಿಗೆ ಸೋಂಕು

ಕೆಲಸದ ನಂತರ, ಮತ್ತು ಯಾವುದೇ ಸುಧಾರಣೆಯನ್ನು ಕಾಣದೇ ಇದ್ದಿದ್ದರಿಂದಾಗಿ ಮರುದಿನ ಕೆಲಸಕ್ಕೆ ಮರಳುವ ಮೊದಲು ಪಿಸಿಆರ್ ಪರೀಕ್ಷೆಗೆ ಮಾಡಿಸಲಾಯಿತು. ಆಗ 40 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತೋರಿಸಿದ ನಂತರ ಮನೆಗೆ ಹೋಗಲು ಅವರ ಮೇಲಧಿಕಾರಿಗಳು ಹೇಳಿದ್ದರೂ, ಆ ವ್ಯಕ್ತಿ ನಿರಾಕರಿಸಿದ ಎನ್ನಲಾಗಿದೆ.

ಇದನ್ನೂ ಓದಿ- ದೇಶದ ರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ

ಇದೇ ವೇಳೆ ಆ ವ್ಯಕ್ತಿ ತಮ್ಮ ಕೆಲಸದ ಪ್ರದೇಶದಲ್ಲಿ ರಾಜಾರೋಷವಾಗಿ ತಿರುಗಾಡಿದ್ದಾರೆ, ಮುಖವಾಡ ತೆಗೆದು ಜನರ ಮೇಲೆ ಕೆಮ್ಮುತ್ತಿದ್ದರು, "ನಾನು ನಿಮ್ಮೆಲ್ಲರಿಗೂ ಕೊರೊನಾ ಹರಡುತ್ತೇನೆ ಎಂದು ಹೇಳುತ್ತಿದ್ದರು "ಎಂದು ಪೊಲೀಸರು ತಿಳಿಸಿದ್ದಾರೆ.ಕೊನೆಯಲ್ಲಿ, ಅವರ ಪಿಸಿಆರ್ ಪರೀಕ್ಷೆಯು ಕೊರೊನಾ ಇರುವುದನ್ನು ಸ್ಪಷ್ಟಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News