Good News:`ಈ ದಿನ ಅಮೇರಿಕಾದಲ್ಲಿ Corona Vaccineನ ಮೊದಲ ಲಸಿಕೆ ನೀಡಲಾಗುವುದು`
ಕೊರೊನಾ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತವಾಗಿರುವ ಅಮೆರಿಕಾದ ದಿಗ್ಗಜ ಕಂಪನಿ Pfizer, US ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ಕೋರಿದೆ.
ನವದೆಹಲಿ: ಸದ್ಯ ಇಡೀ ವಿಶ್ವವೇ ಕೊರೊನಾ ವ್ಯಾಕ್ಸಿನ್ (Corona Vaccine) ಗಾಗಿ ತುದಿಗಾಲಲ್ಲಿ ಕಾಯುತ್ತಿದೆ. ಹಲವು ದೇಶಗಳು ತಮ್ಮ ಬಳಿ ವ್ಯಾಕ್ಸಿನ್ ಇರುವ ಕುರಿತು ವಿಶ್ವಾಸ ವ್ಯಕ್ತಪಡಿಸುತ್ತಿವೆ ಮತ್ತು ಶೀಘ್ರದಲ್ಲಿಯೇ ಅವು ಲಸಿಕೆಯನ್ನು ಬಿಡುಗಡೆ ಮಾಡುವ ಹಂತಕ್ಕೆ ತಲುಪಿವೆ. ಆದರೆ, ಈ ಭರವಸೆಗಳನ್ನು ಕೇವಲ ಬಾಯ್ಮಾತಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಆದರೆ, ಇದೀಗ ಅಮೆರಿಕಾದಲ್ಲಿ ಶೀಘ್ರವೇ ಲಸಿಕೆ ಹಾಕುವ ಕಾರ್ಯ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಇದನ್ನು ಓದಿ-Covid-19:ತನ್ನ ವ್ಯಾಕ್ಷಿನ್ ಶೇ.95ರಷ್ಟು ಯಶಸ್ವಿ ಎಂದ Pfizer, ಸುರಕ್ಷತೆಯ ಮಾನದಂಡಗಳ ಮೇಲೂ ಸೈ
ಭಾರಿ ಭರವಸೆ ವ್ಯಕ್ತಪಡಿಸಿದ Pfizer
ಕೊರೊನಾ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತವಾಗಿರುವ ಅಮೆರಿಕಾದ ದಿಗ್ಗಜ ಕಂಪನಿ Pfizer, US ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ವ್ಯಾಕ್ಸಿನ್ ನ ತುರ್ತು ಬಳಕೆಗೆ ಅನುಮತಿ ಕೋರಿದೆ. FDA ರಚಿಸಿರುವ ವ್ಯಾಕ್ಸಿನ್ ಸಲಹಾ ಸಮಿತಿ ಡಿಸೆಂಬರ್ 10 ರಂದು ಸಭೆ ಸೇರಲಿದೆ.
ಶೇ.95ರಷ್ಟು ಪರಿಣಾಮಕಾರಿಯಾಗಿದೆ ಫೈಜರ್ ವ್ಯಾಕ್ಸಿನ್
ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿದ್ದ ಫೈಜರ್ ಕಂಪನಿ, ಕೊರೊನಾ ಸೋಂಕನ್ನು ತಡೆಯಲು ಕಂಪನಿ ತಯಾರಿಸಿರುವ ವ್ಯಾಕ್ಸಿನ್ ಶೇ.95 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿಕೊಂಡಿದೆ. ಕಂಪನಿ ಮೂಡಿಸಿರುವ ಈ ಭರವಸೆ ಕೊರೊನಾ ವಿರುದ್ಧ ನಡೆಯುತ್ತಿರುವ ಸಮರದ ವಿಜಯ ಎಂದೇ ಬಿಂಬಿಸಲಾಗುತ್ತಿದೆ. ಏಕೆಂದರೆ ಈ ಮಹಾಮಾರಿಗೆ ಇದುವರೆಗೆ ಸುಮಾರು 10 ಲಕ್ಷ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಾಗತಿಕ ಅರ್ಥವ್ಯವಸ್ಥೆಯ ಪರಿಸ್ಥಿತಿಯೂ ಕೂಡ ಸರಿಯಾಗಿಲ್ಲ ಮತ್ತು ಜನಸಾಮಾನ್ಯರ ಜೀವನ ಕೂಡ ಇದರಿಂದ ಪ್ರಭಾವಿತಗೊಂಡಿದೆ.
ಇದನ್ನು ಓದಿ- Corona Vaccine Plan: ಲಸಿಕೆ ಯಾವಾಗ ಹಾಕಿಸಿಕೊಳ್ಳಬೇಕು, Covin ಆಪ್ ನೀಡಲಿದೆ ಮಾಹಿತಿ
ಜನಸಾಮಾನ್ಯರಿಗೆ ಡಿಸೆಂಬರ್ 12ರಿಂದ ಸಿಗಲಿವೆ ವ್ಯಾಕ್ಸಿನ್ ಲಾಭ
ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಅಮೆರಿಕಾದ ವ್ಯಾಕ್ಸಿನ್ ಕಾರ್ಯಕ್ರಮದ ಮುಖ್ಯಸ್ಥ ಮೊನ್ಸೆಫ್ ಸಲೌಯಿ, ಅಮೇರಿಕಾದಲ್ಲಿ ಕೊರೊನಾ ವ್ಯಾಕ್ಸಿನ್ ನ ಮೊದಲ ಡೋಸ್ ಡೋಸ್ ನೀಡಲಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಒಂದು ವೇಳೆ ನಮಗೆ ಅನುಮೋದನೆ ದೊರೆತರೆ ಮಾರನೆಯ ದಿನ ಅಂದರೆ ಡಿಸೆಂಬರ್ 12 ರಂದು ಜನಸಾಮಾನ್ಯರಿಗಾಗಿ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ- ಭಾರತದಲ್ಲಿ ಫೆಬ್ರುವರಿವರೆಗೆ Corona Vaccine ಸಿಗುವ ಸಾಧ್ಯತೆ, ಬೆಲೆ ಎಷ್ಟು ಇಲ್ಲಿದೆ ವಿವರ
ವ್ಯಾಕ್ಸಿನ್ ಗೆ ಅನುಮೋದನೆ ದೊರೆತ 24 ಗಂಟೆಯೊಳಗೆ ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿರುವ ಎಲ್ಲ ಪ್ರದೇಶಗಳಿಗೆ ವ್ಯಾಕ್ಸಿನ್ ತಲುಪಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಡಿಸೆಂಬರ್ 11 ಮತ್ತು 12 ರಂದು ಇದು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಲಸಿಕೆ ಅಧಿಕೃತಗೊಂಡರೆ ಪ್ರಾಥಮಿಕ ಹಂತದಲ್ಲಿ ಡೋಸ್ ಗಾಗಿ ಸಂಖ್ಯಾ ಸಮಿತಿ ಇರಲಿದ್ದು, ಕೊವಿಡ್ 19 ಲಸಿಕೆ ಎಷ್ಟು ಸಮಯದವರೆಗೆ ಸೋಂಕಿನಿಂದ ರಕ್ಷಣೆ ಒದಗಿಸಲಿದೆ? ಎಂಬಂತಹ ಪ್ರಶ್ನೆಗಳು ಸಹ ಇರಲಿವೆ ಎಂದು ಅವರು ಹೇಳಿದ್ದಾರೆ.