Corona Vaccine Plan: ಲಸಿಕೆ ಯಾವಾಗ ಹಾಕಿಸಿಕೊಳ್ಳಬೇಕು, Covin ಆಪ್ ನೀಡಲಿದೆ ಮಾಹಿತಿ

Covin App ಸಹಾಯದಿಂದ ಸರ್ಕಾರ ಕೊರೊನಾ ವೈರಸ್ ವ್ಯಾಕ್ಸೀನ್ ನ ಪ್ರೋಕ್ಯೋರ್ಮೆಂಟ್, ಡಿಸ್ಟ್ರೀಬ್ಯೂಶನ್, ಸರ್ಕುಲೇಶನ್, ಸ್ಟೋರೇಜ್ ಹಾಗೂ ಡೋಸ್ ವೇಳಾಪಟ್ಟಿ ಕುರಿತು ಮಾಹಿತಿ ನೀಡಲಿದೆ.

Last Updated : Nov 21, 2020, 12:23 PM IST
  • ಕೋವಿಡ್ ಲಸಿಕೆ ರೋಲ್ ಔಟ್ ಗಾಗಿ ಭಾರತ ಸರ್ಕಾರ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಿದೆ.
  • ಇದಕ್ಕೆ ಕೋವಿನ್ (Covin) ಎಂದು ಹೆಸರಿಡಲಾಗಿದೆ.
  • ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಈ ಅಪ್ಲಿಕೇಶನ್ ಬಹಳ ಮುಖ್ಯ ಪಾತ್ರ ವಹಿಸಲಿದೆ.
Corona Vaccine Plan: ಲಸಿಕೆ ಯಾವಾಗ ಹಾಕಿಸಿಕೊಳ್ಳಬೇಕು, Covin ಆಪ್ ನೀಡಲಿದೆ ಮಾಹಿತಿ title=

ನವದೆಹಲಿ: ಕೋವಿಡ್ ಲಸಿಕೆ (Covid 19 Vaccine) ರೋಲ್ ಔಟ್ ಗಾಗಿ ಭಾರತ ಸರ್ಕಾರ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಿದೆ. ಇದಕ್ಕೆ ಕೋವಿನ್ (Covin) ಎಂದು ಹೆಸರಿಡಲಾಗಿದೆ. ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಈ ಅಪ್ಲಿಕೇಶನ್ ಬಹಳ ಮುಖ್ಯ ಪಾತ್ರ ವಹಿಸಲಿದೆ. ಈ ಮೂಲಕ ಲಸಿಕೆ ದಾಸ್ತಾನು, ವಿತರಣೆ, ಸಂಗ್ರಹಣೆ ಮುಂತಾದ ಪ್ರಮುಖ ಮಾಹಿತಿಯನ್ನು ಸರ್ಕಾರ ನೀಡಲಿದೆ ಮತ್ತು ಪಡೆಯಲಿದೆ. ಅದೇ ಸಮಯದಲ್ಲಿ, ಲಸಿಕೆಯನ್ನು ಹಾಕಿಸಿಕೊಳ್ಳುವ ವೇಳಾಪಟ್ಟಿ ಸಹ ಅಪ್ಲಿಕೇಶನ್‌ನಿಂದ ಲಭ್ಯವಾಗಲಿದೆ.ಕೋವಿನ್ ಅಪ್ಲಿಕೇಶನ್ ಮೂಲಕ, ಅಧಿಕಾರಿಗಳು ರಿಯಲ್ ಟೈಮ್ ಆಧಾರದ ಮೇಲೆ ಡೇಟಾವನ್ನು ಅಪ್‌ಲೋಡ್ ಮಾಡಲು ಮತ್ತು ಪ್ರವೇಶಿಸಲು ಸಾಧ್ಯವಾಗಲಿದೆ. ಅಪ್ಲಿಕೇಶನ್‌ನ ಡೇಟಾವನ್ನು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಂದ ನವೀಕರಿಸಲಾಗುವುದು, ಇದಲ್ಲದೆ, ದೇಶಾದ್ಯಂತ ನಿಯೋಜನೆಗೊಂಡಿರುವ 28,000 ಶೇಖರಣಾ ಕೇಂದ್ರಗಳಲ್ಲಿ ಸ್ಟಾಕ್ ಅನ್ನು ಕಂಡುಹಿಡಿಯಬಹುದು. ಟೆಂಪ್ಲೇಟ್ ಲಾಗರ್‌ಗಳು, ಲಸಿಕೆ ನಿಯೋಜನೆ ಮತ್ತು ಕೋಲ್ಡ್ ಚೈನ್ ವ್ಯವಸ್ಥಾಪಕರ ಮೇಲೂ ಈ ಅಪ್ಲಿಕೇಶನ್ ನಿಗಾ ಇಡಲಿದೆ. ಈ ಅಪ್ಲಿಕೇಶನ್‌ನ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.

ಇದನ್ನು ಓದಿ-Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ

ಪ್ರವಾಸದ ವೇಳೆ ವ್ಯಾಕ್ಸಿನ್ ತಾಪಮಾನದಲ್ಲಿ ಬದಲಾಗದಂತೆ ನಿಗಾ ವಹಿಸಲಿದೆ ಈ ಆಪ್
ಈ ಆ್ಯಪ್ ಮೂಲಕ ಶೇಖರಣಾ ಸ್ಥಳಗಳಲ್ಲಿ ತಾಪಮಾನ ಬದಲಾವಣೆಗಳನ್ನು ಸಹ ಪತ್ತೆಹಚ್ಚಲು ಸರ್ಕಾರಕ್ಕೆ ಸಾಧ್ಯವಾಗಲಿದೆ. ಲಸಿಕೆ ಬಳಸುವ ಮೊದಲು ಸುರಕ್ಷಿತವಾಗಿರಿಸಿಕೊಳ್ಳುವುದು ಬಹಳ ಮುಖ್ಯವಾದ ವಿಷಯವಾಗಿದೆ. ಲಸಿಕೆಯ ಶೇಖರಣಾ ಸೌಲಭ್ಯದಿಂದ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ ಅಥವಾ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಪ್ರಯಾಣವನ್ನು ಕೋವೆನ್ ಅಪ್ಲಿಕೇಶನ್ ಟ್ರ್ಯಾಕ್ ಟ್ರ್ಯಾಕ್ ಮಾಡಲಿದೆ. ಸ್ಟಾಕ್ ಎಲ್ಲೋ ಸಾಗುತ್ತಿದ್ದರೆ, ಈ ಅಪ್ಲಿಕೇಶನ್ ಅದರ ಮೇಲೆ ಅಧಿಸೂಚನೆಗಳನ್ನು ಜಾರಿಗೊಳಿಸಲಿದೆ.

ಇದನ್ನು ಓದಿ- Covid-19:ತನ್ನ ವ್ಯಾಕ್ಷಿನ್ ಶೇ.95ರಷ್ಟು ಯಶಸ್ವಿ ಎಂದ Pfizer, ಸುರಕ್ಷತೆಯ ಮಾನದಂಡಗಳ ಮೇಲೂ ಸೈ

ಎರಡು ಟೀಕೆಗಳನ್ನು ಹಾಕಿಸಿಕೊಂಡ ಬಳಿಕ ಸರ್ಟಿಫಿಕೆಟ್ ಕೂಡ ನೀಡಲಿದೆ ಈ ಆಪ್
ಕೋವಿನ್ ಆ್ಯಪ್ ಮೂಲಕ, ಜನರು ತಮ್ಮ ವ್ಯಾಕ್ಸಿನೇಷನ್ ವೇಳಾಪಟ್ಟಿ, ಸ್ಥಳ ಮತ್ತು ಲಸಿಕೆ ಯಾರಿಗೆ ಸಿಗುತ್ತದೆ ಎಂಬ ವಿವರಗಳನ್ನು ಸಹ ಪರಿಶೀಲಿಸಲು ಸಾಧ್ಯವಾಗಲಿದೆ. ಲಸಿಕೆಯ ಎರಡೂ ಟೀಕೆಗಳನ್ನು ಬಳಸಿದ ನಂತರ, ಅಪ್ಲಿಕೇಶನ್‌ನಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಂಡ ಪ್ರಮಾಣಪತ್ರ ಸಹ ರಚಿಸಲಾಗುತ್ತದೆ. ಇದನ್ನು ಡಿಜಿಲಾಕರ್‌ನಲ್ಲಿಯೂ ಶೇಖರಿಸಬಹುದು.

ಇದನ್ನು ಓದಿ- ಕೇವಲ ಎರಡೇ ಹನಿ ಮೂಗಿಗೆ ಹಾಕಿ... Corona ತೊಡೆದುಹಾಕಿ

Covin ಆಪ್ ನಲ್ಲಿ ಪ್ರತಿಯೊಂದು ಪ್ರಯಾರಿಟಿ ಗ್ರೂಪ್ ಸಹ ಇರಲಿದೆ
ಈ ಅಪ್ಲಿಕೇಶನ್ ಎಲ್ಲಾ ನಾಲ್ಕು ಆದ್ಯತೆಯ ಗುಂಪುಗಳನ್ನು ಹೊಂದಿದೆ - ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು, 50 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರು. ಜಿಲ್ಲಾ ಮಟ್ಟದಲ್ಲಿ, ಇದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರ ಡೇಟಾವನ್ನು ಪೋಷಿಸುತ್ತದೆ. ಅನುಮೋದನೆಯ ನಂತರ ಅವರಿಗೆ ಮೊದಲ ಲಸಿಕೆ ಡೋಸ್ ನೀಡಬೇಕು.

ಇದನ್ನು ಓದಿ- ದೇಶದ ಮೊದಲ ವೈಯಕ್ತಿಕ ಕೊವಿಡ್ Life Insurance ಪಾಲಸಿ ಬಿಡುಗಡೆ, ಸಿಗಲಿದೆ ಈ ಲಾಭ

ನಿಮ್ಮ ಬಳಿ ಹೇಗೆ ತಲುಪಲಿದೆ ವ್ಯಾಕ್ಸಿನ್?
ಲಸಿಕೆ ತಯಾರಕರಿಂದ ಕೇಂದ್ರ ಸರ್ಕಾರ ನೇರವಾಗಿ ಲಸಿಕೆಯ ಡೋಸ್ ಗಳನ್ನು ಖರೀದಿಸಲಿದೆ. ಆದ್ಯತಾ ಗುಂಪುಗಳು ಮೊದಲು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಇರುವ ನೆಟ್‌ವರ್ಕ್ ಸಹಾಯದಿಂದ ಲಸಿಕೆ ಪಡೆಯುತ್ತವೆ. ವ್ಯಾಕ್ಸಿನೇಷನ್ ಬೂತ್‌ಗಳಾಗಿ ಬಳಸಬಹುದಾದ ಕಟ್ಟಡಗಳನ್ನು ರಾಜ್ಯ ಸರ್ಕಾರಗಳು ಗುರಿತಿಸಲಿವೆ. ಇವುಗಳಲ್ಲಿ ಆರೋಗ್ಯ ಸೌಲಭ್ಯಗಳು ಮಾತ್ರ ಇರುವುದಿಲ್ಲ. ಕೋವಿಡ್ ಲಸಿಕೆಗಾಗಿ ಶಾಲೆಗಳು, ಪಂಚಾಯತಿ ಕಟ್ಟಡಗಳು ಮತ್ತು ಅಂಗನವಾಡಿ ಕೇಂದ್ರ ಕಟ್ಟಡಗಳನ್ನು ಬಳಸಬಹುದು. ವ್ಯಾಕ್ಸಿನೇಷನ್ ಪಟ್ಟಿಯಲ್ಲಿ ಸೇರಿಸಲಾದ ವ್ಯಕ್ತಿಯನ್ನು ಅದರ ಮೂಲಕ್ಕೆ ಲಿಂಕ್ ಮಾಡಲಾಗುತ್ತದೆ, ಇದರಿಂದ ನಕಲು ಸಾಧ್ಯವಾಗುವುದಿಲ್ಲ. ಯಾರು ಲಸಿಕೆ ಹಾಕಿಸಿಕೊಂಡಿದ್ದಾರೆ ಮತ್ತು ಯಾರು ಇಲ್ಲ ಎಂಬುದನ್ನು ಕೂಡ ಪತ್ತೆಹಚ್ಚಲು ಇದು ಸಹಾಯ ಮಾಡಲಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರ ಪ್ರಕಾರ, ಜುಲೈ 2021 ರೊಳಗೆ 25-30 ಕೋಟಿ ಭಾರತೀಯರು ಲಸಿಕೆ ಪಡೆದುಕೊಳ್ಳುವ ನಿರೀಕ್ಷೆ ಇದೆ.
 

Trending News