ಬೆಲ್ಜಿಯಂ: Coronavirus Rare Case - ಬೆಲ್ಜಿಯಂ ನಿಂದ ಬಂದ ವರದಿಯೊಂದು ಕೊರೊನಾವೈರಸ್ (Coronavirus) ಹೊಡೆತಕ್ಕೆ ಸಿಲುಕಿರುವ ಇಡೀ ವಿಶ್ವದ ಚಿಂತೆಯನ್ನು ಹೆಚ್ಚಿಸಿದೆ. ಅಲ್ಲಿನ 90 ವರ್ಷ ವಯಸ್ಸಿನ ಮಹಿಳೆಯೋಬ್ಬರಲ್ಲಿ ಏಕಕಾಲಕ್ಕೆ ಎರಡು ವಿಭಿನ್ನ ಕೊರೊನಾ ವೈರಸ್ ರೂಪಾಂತರಿಗಳು (Coronavirus Two Different Variants In One Body) ಪತ್ತೆಯಾಗಿವೆ. ಇದುವರೆಗೆ ಬಂದ ಪ್ರಕರಣಗಳಿಂದ ತೀರಾ ಭಿನ್ನವಾಗಿರುವ ಈ ಪ್ರಕರಣದ ಬಳಿಕ ವೈರಸ್ ವಿರುದ್ಧದ ಹೋರಾಟ ಮತ್ತಷ್ಟು ಕಠಿಣಗೊಳ್ಳಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್ ನ ಮೂರನೇ ಅಲೆಯ ಭೀತಿಯ ನಡುವೆಯೇ ವೈರಸ್ ನ ಡೆಲ್ಟಾ ವೇರಿಯಂಟ್ (Covid-19 Variants) ಸದ್ಯ ಹಲವು ದೇಶಗಳ ಚಿಂತೆಗೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಕೇವಲ ಐದೇ ದಿನಗಳಲ್ಲಿ ಪ್ರಾಣಕಳೆದುಕೊಂಡ ಮಹಿಳೆ
ಕೊರೊನಾ ವೈರಸ್ (Covid-19) ನ ಎರಡು ವಿಭಿನ್ನ ವೇರಿಯಂಟ್ ಇಂದ ಸೋಂಕಿಗೆ ಒಳಗಾದ ಬಳಿಕ ಬೆಲ್ಜಿಯಂ ಮೂಲದ ಈ ಮಹಿಳೆ ಮಾರ್ಚ್ 2021ರಲ್ಲಿ ಅಸು ನೀಗಿದ್ದಳು. ತಜ್ಞರು ಹೇಳುವ ಪ್ರಕಾರ 90 ವರ್ಷದ ಈ ಮಹಿಳೆ ಏಕಕಾಲಕ್ಕೆ ಕೊರೊನಾ ವೈರಸ್ ನ ಅಲ್ಫಾ ಹಾಗೂ ಬೀಟಾ ರೂಪಾಂತರಿ (Covid-19 Alpha And Beta Strains) ಸೊಂಕಿಗೆ ಗುರಿಯಾಗಿದ್ದಳು. ಮಹಿಳೆ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿರಲಿಲ್ಲ. ಇದರಿಂದ ಆಕೆಯ ಆರೋಗ್ಯ ಸ್ಥಿತಿ ಸುದಾರಣೆಯಾಗುವ ಬದಲು ಬಿಗಡಾಯಿಸುತ್ತಲೇ ಹೋಗಿದೆ. ಮಾರ್ಚ್ ನಲ್ಲಿ ಆಕೆಯನ್ನು ಓಎಲ್ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಅಲ್ಲಿ ಆಕೆ ಕೇವಲ ಐದೇ ದಿನಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ.


ಇದನ್ನೂ ಓದಿ-Study: ಈ ಜನರು Coronavirus ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತೆ ಸಂಶೋಧನೆ!


ಆಕಸ್ಮಿಕವಾಗಿ ಬಿಗಡಾಯಿಸಿದ ಸ್ಥಿತಿ 
ಆಸ್ಪತ್ರೆಯಲ್ಲಿ ಮಹಿಳೆಗೆ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಆಕೆಯ ವರದಿ ಪಾಸಿಟಿವ್ ಹೊರಬಂದಿತ್ತು. ಆರಂಭಿಕ ಹಂತದಲ್ಲಿ ಮಹಿಳೆಯ ಆಕ್ಸಿಜನ್ ಸರಿಯಾಗಿತ್ತು. ಆದರೆ, ನಂತರ ಆಕೆಯ ಸ್ಥಿತಿ ತುಂಬಾ ವೇಗವಾಗಿ ಬಿಗಡಾಯಿಸಿದೆ ಹಾಗೂ ಐದನೇ ದಿನ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಬಳಿಕ ಆಸ್ಪತ್ರೆಯ ವೈದ್ಯರು ಮಹಿಳೆಯಲ್ಲಿನ ಕೊರೊನಾ ವೇರಿಯಂಟ್ ಕುರಿತು ಪತ್ತೆಹಚ್ಚಿದ್ದು, ಮಹಿಳೆಯಲ್ಲಿ ಕೊರೊನಾ ವೈರಸ್ ನ ಅಲ್ಫಾ ಹಾಗೂ ಬೀಟಾ ವೇರಿಯಂಟ್ ಎರಡೂ ಪತ್ತೆಯಾಗಿವೆ. ಅಲ್ಫಾ ವೇರಿಯಂಟ್ (Alpha Variant) ಎಲ್ಲಕ್ಕಿಂತ ಮೊದಲು ಬ್ರಿಟನ್ ನಲ್ಲಿ ಪತ್ತೆಯಾಗಿತ್ತು ಮತ್ತು ಬೀಟಾ ವೇರಿಯಂಟ್ (Beta Variant) ಎಲ್ಲಕ್ಕಿಂತ ಮೊದಲು ದ.ಆಫ್ರಿಕಾದಲ್ಲಿ ಪತ್ತೆಯಾಗಿತ್ತು.


ಇದನ್ನೂ ಓದಿ-Alert! ಇಂದು ಅಥವಾ ನಾಳೆ ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ, ಪರಿಣಾಮ ತಿಳಿಯಲು ವರದಿ ಓದಿ


ಆತಂಕ ವ್ಯಕ್ತಪಡಿಸಿದ ತಜ್ಞರು
ವೈದ್ಯಕೀಯ ತಜ್ಞರು ಹೇಳುವ ಪ್ರಕಾರ, ಇದು ಕೊರೊನಾ ಜಂಟಿ-ಸೋಂಕಿನ ಮೊದಲ ಪ್ರಕರಣವಾಗಿದ್ದು,  ಈ ಪ್ರಕರಣದಲ್ಲಿ ಒಂದೇ ಶರೀರದಲ್ಲಿ ಎರಡು ರೂಪಾಂತರಿಗಳು ಪತ್ತೆಯಾಗಿವೆ. ಇಂತಹ ಪ್ರಕರಣಗಳು ಚಿಂತೆ ಹೆಚ್ಚಿಸುವ ವಿಷಯಗಳಾಗಿದ್ದು, ಇವುಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಈ ಕುರಿತು ಹೇಳಿಕೆ ನೀಡಿರುವ ಬೆಲ್ಜಿಯಂನ ಆಲಸ್ಟಾನಲ್ಲಿರುವ ಓಎಲ್ವಿ ಆಸ್ಪತ್ರೆಯ ಪ್ರಮುಖ ಸಂಶೋಧಕ ಡಾ. ಏನಿ ಬೆಂಕೆನ್ಬರ್ಗನ್, ಕೊರೋನಾದ ಅಲ್ಫಾ ಹಾಗೂ ಬೀಟಾ ವೇರಿಯಂಟ್ ಗಳು ಮೊದಲಿನಿಂದಲೇ ಬೆಲ್ಜಿಯಂನಲ್ಲಿವೆ. ಹೀಗಿರುವಾಗ ಓರ್ವ ಮಹಿಳೆ ಈ ಎರಡೂ ವೈರಸ್ ಸೊಂಕಿಗೆ ಗುರಿಯಾಗಿದ್ದಾರೆ. ಆದರೆ, ಮಹಿಳೆ ಕೊರೊನಾ ಸೋಂಕಿಗೆ ಹೇಗೆ ಗುರಿಯಾದಳು ಎಂಬುದು ಇದುವರೆಗೆ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ-How To Check BP At Home: ಎರಡು ಭುಜಗಳಲ್ಲಿನ BP ಅಂತರ ಅಪಾಯದ ಸಂಕೇತವೇ? ತಜ್ಞರು ಹೇಳುವುದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.