Corona Vaccine: ಲಸಿಕೆ ಹಾಕಿಸಿಕೊಂಡ ಬಳಿಕ ಮೂರು ದಿನಗಳ ಕಾಲ ಸಂಗಾತಿಯ ಜೊತೆಗೆ ಸಂಬಂಧ ಬೆಳೆಸಬೇಡಿ-ತಜ್ಞರು

Corona Vaccine - ಕರೋನಾ ಲಸಿಕೆ ಪಡೆದ ನಂತರ ಕನಿಷ್ಠ 3 ದಿನಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಾರದು ಎಂದು ರಷ್ಯಾದ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಇದು ದೈಹಿಕ ಒತ್ತಡ ಹೆಚ್ಚಿಸುವ ಕಾರಣ ಲಸಿಕೆ ಪಡೆದ ಕೂಡಲೇ ಶಾರೀರಿಕ ಸಂಬಂಧ ಬೆಳೆಸುವುದು ಒಳ್ಳೆಯದಲ್ಲ  ಎಂದು ಆರೋಗ್ಯ ಅಧಿಕಾರಿಗಳು (Health Experts) ಹೇಳಿದ್ದಾರೆ. 

Last Updated : Jul 11, 2021, 04:55 PM IST
  • ವ್ಯಾಕ್ಸಿನ್ ಹಾಕಿಸಿಕೊಂಡ 3 ದಿನಗಳವರೆಗೆ ಶಾರೀರಿಕ ಸಂಬಂಧ ಬೇಡ.
  • ರಷ್ಯಾ ಆರೋಗ್ಯ ಅಧಿಕಾರಿಗಳ ಗಂಭೀರ ಹೇಳಿಕೆ.
  • ಆದರೆ, ಅತಿಯಾದ ಶಾರೀರಿಕ ಸಂಬಂಧ ಅಪಾಯಕಾರಿ ಎಂದ ರಷ್ಯಾ CMO
Corona Vaccine: ಲಸಿಕೆ ಹಾಕಿಸಿಕೊಂಡ ಬಳಿಕ ಮೂರು ದಿನಗಳ ಕಾಲ ಸಂಗಾತಿಯ ಜೊತೆಗೆ ಸಂಬಂಧ ಬೆಳೆಸಬೇಡಿ-ತಜ್ಞರು title=

ಮಾಸ್ಕೋ:  Corona Vaccine - ಕೊರೊನಾ ವ್ಯಾಕ್ಸಿನ್ ಪಡೆದ ಬಳಿಕ ಆಹಾರದ ಮೇಲೆ ವಿಶೇಷ ಗಮನ ಕೇಂದ್ರೀಕರಿಸಲು ಹಾಗೂ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗುತ್ತಿದೆ. ಆದರೆ, ಈ ಕುರಿತು ಮಹತ್ವದ ಹೇಳಿಕೆ ನೀಡಿರುವ ರಷ್ಯಾ (Russia) ಆರೋಗ್ಯ ಅಧಿಕಾರಿಗಳು, ವ್ಯಾಕ್ಸಿನ್ ಹಾಕಿಸಿಕೊಂಡ ಕನಿಷ್ಠ 3 ದಿನಗಳವರೆಗೆ ಶಾರೀರಿಕ ಸಂಬಂಧ ಬೆಳೆಸುವುದರಿಂದ ದೂರ ಉಳಿಯುವ ಸಲಹೆ ನೀಡಿದ್ದಾರೆ. 

ಶಾರೀರಿಕ ಸಂಬಂಧ ಬೆಳೆಸಬಾರದು, ಕಾರಣ ಇಲ್ಲಿದೆ
ಈ ಕುರಿತು ಹೇಳಿಕೆ ನೀಡಿರುವ ಸೇರಾತೊವ್ ಉಪ ಆರೋಗ್ಯ ಸಚಿವ ಡಾ. ಡೆನಿಸ್ ಗ್ರಾಫರ್, "ಲೈಂಗಿಕ ಸಂಬಂಧ ಹೊಂದಿದ ನಂತರ ದೈಹಿಕ ಒತ್ತಡ ಹೆಚ್ಚಾಗುತ್ತದೆ ಮತ್ತು ಅದು ಲಸಿಕೆ ಪಡೆದ ನಂತರದ ಮೂರು ದಿನಗಳವರೆಗೆ ಉಚಿತವಲ್ಲ. ಶಾರೀರಿಕ ಸಂಬಂಧ ಬೆಳೆಸುವ (Sex After Vaccination) ವೇಳೆ ಸಾಕಷ್ಟು ಶಕ್ತಿಯ ಬಳಕೆ ಇರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಅದನ್ನು ತಪ್ಪಿಸಲು ನಾವು ಜನರಿಗೆ ಎಚ್ಚರಿಕೆ ನೀಡುತ್ತೇವೆ. ಲಸಿಕೆ ಪಡೆದ ನಂತರ, ಮುಂದಿನ 3 ದಿನಗಳವರೆಗೆ ಲೈಂಗಿಕತೆ (Sex) ಸೇರಿದಂತೆ ಎಲ್ಲಾ ರೀತಿಯ ದೈಹಿಕ ಚಟುವಟಿಕೆಗಳನ್ನು ತಪ್ಪಿಸಬೇಕು" ಎಂದು ಹೇಳಿದ್ದಾರೆ. 

ಇದನ್ನೂ ಓದಿ-How To Check BP At Home: ಎರಡು ಭುಜಗಳಲ್ಲಿನ BP ಅಂತರ ಅಪಾಯದ ಸಂಕೇತವೇ? ತಜ್ಞರು ಹೇಳುವುದೇನು?

ಅತಿಯಾದ ಶಾರೀರಿಕ ಸಂಬಂಧ ಅಪಾಯಕಾರಿ
ಆದರೆ ಸೇರೆತೊವ್ ನೀಡಿರುವ ಈ ಹೇಳಿಕೆಗೆ ಹಿರಿಯ ವೈದ್ಯಕೀಯ ಅಧಿಕಾರಿಯೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ.  ವ್ಯಾಕ್ಸಿನೇಷನ್ (Corona Vaccination) ಬಳಿಕ ಶಾರೀರಿಕ ಸಂಬಂಧ ಬೆಳೆಸುವುದರ ಕುರಿತು  ಉಲ್ಲೇಖಿಸುತ್ತಿರುವ ಗ್ರಾಫರ್‌ನ ಮೇಲಾಧಿಕಾರಿ ಒಲೆಗ್ ಕೋಸ್ಟಿನ್, ನೀವು ಶಾರೀರಿಕ ಸಂಬಂಧವನ್ನು ಬೆಳೆಸಬಹುದು. ಆದರೆ, ಎಚ್ಚರಿಕೆಯಿಂದ ಬೆಳೆಸಿ ಎಂದು ಹೇಳಿದ್ದಾರೆ. ರಷ್ಯನ್ನರು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು ಮತ್ತು ಶಾರೀರಿಕ ಸಂಬಂಧವನ್ನು ಅತಿಯಾಗಿ ಬೆಳೆಸಬಾರದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದಕ್ಕೂ ಮೊದಲು ರಷ್ಯಾದಲ್ಲಿ  ಜನರಿಗೆ ಲಸಿಕೆ ಹಾಕಿಸಿಕೊಂಡ ಬಳಿಕ ವೊಡ್ಕಾ ಕುಡಿಯುವುದು, ಧೂಮಪಾನ ಮಾಡುವುದು ಮತ್ತು ಸೌನಾ ಸ್ಟೀಮ್ ತೆಗೆದುಕೊಳ್ಳುವುದನ್ನು ತಪ್ಪಿಸಲು ಸಲಹೆ ನೀಡಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ. 

ಇದನ್ನೂ ಓದಿ- Global Hunger Index: ಹಸಿವಿನಿಂದ ವಿಶ್ವಾದ್ಯಂತ ನಿಮಿಷಕ್ಕೆ 11 ಜನರ ಸಾವು - ವರದಿ

ರಷ್ಯಾದಲ್ಲಿ ಕೇವಲ ಶೇ.13ರಷ್ಟು ಜನ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ
'ಡೈಲಿ ಮೇಲ್' ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಕೊರೊನಾ (Covid-19) ವಿರುದ್ಧದ ಹೋರಾಟದಲ್ಲಿ ಎರಡು ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ನಂತರವೂ ಕೂಡ ರಷ್ಯಾ ವಿಶ್ವದಲ್ಲಿಯೇ ಅತಿ ಕಡಿಮೆ ಲಸಿಕೆ ಹಾಕಿಸಿದ ದೇಶವಾಗಿದೆ. ರಷ್ಯಾದಲ್ಲಿ ಕೆವಲ ಶೇ.13ರಷ್ಟು ಜನರು ಮಾತ್ರ ಕೊರೊನಾ (Coronavirus) ವ್ಯಾಕ್ಸಿನ್ ನ ಎರಡೂ ಪ್ರಮಾಣಗಳನ್ನು ಪಡೆದುಕೊಂಡಿದ್ದಾರೆ. ಇತರ ಯುರೋಪಿಯನ್ ದೇಶಗಳಿಗೆ ಇದನ್ನು ಹೋಲಿಸಿದರೆ ಇದು ಸರಾಸರಿ ಶೇ.30ರಷ್ಟು ಹೆಚ್ಚಾಗಿದೆ. ವ್ಯಾಕ್ಸಿನೆಶನ್ ಅಭಿಯಾನದ ಕಡಿಮೆ ವೇಗದ ಕಾರಣ ರಷ್ಯಾ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ-New Way To Stop Covid 19 - Coronavirus ತಡೆಗಟ್ಟಲು ಹೊಸ ದಾರಿ ಕಂಡು ಹಿಡಿದ ವಿಜ್ಞಾನಿಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News