Coronavirus Spreading Through Air: ಗಾಳಿಯ ಮೂಲಕ ಹರಡುತ್ತಿದೆಯೇ ಕರೋನಾ, ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ
ಹೊರಗಿನ ಗಾಳಿಗಿಂತ ಕಟ್ಟಡಗಳ ಒಳಗೆ ವೈರಸ್ ಹರಡುವಿಕೆ ಅಪಾಯ ಹೆಚ್ಚಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
Coronavirus Spreading Through Air: ಕೋವಿಡ್ -19 ಸಾಂಕ್ರಾಮಿಕಕ್ಕೆ ಕಾರಣವಾದ SARS-Cove-2 ವೈರಸ್ ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ (ಗಾಳಿಯಲ್ಲಿ ಕೊರೊನಾವೈರಸ್) ಎಂದು ಸಾಬೀತುಪಡಿಸಲು ಬಲವಾದ ಪುರಾವೆಗಳಿವೆ ಎಂದು ಲ್ಯಾನ್ಸೆಟ್ ಜರ್ನಲ್ನಲ್ಲಿ ಶುಕ್ರವಾರ ಪ್ರಸಾರವಾದ ಹೊಸ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಹೊರಗಿನ ಗಾಳಿಗಿಂತ ಕಟ್ಟಡಗಳ ಒಳಗೆ ಎಂದರೆ ಹೊರಾಂಗಣಕ್ಕಿಂತ ಒಳಾಂಗಣದಲ್ಲಿ ವೈರಸ್ ಹರಡುವಿಕೆ ಅಪಾಯ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಬ್ರಿಟನ್, ಅಮೆರಿಕ ಮತ್ತು ಕೆನಡಾ ಮೂಲದ ಆರು ತಜ್ಞರ ಈ ಮೌಲ್ಯಮಾಪನದಲ್ಲಿ ವೈರಸ್ ಮುಖ್ಯವಾಗಿ ಗಾಳಿಯಿಂದ ಹರಡುವುದರಿಂದ ರೋಗದ ಚಿಕಿತ್ಸಾ ಕ್ರಮಗಳು ವಿಫಲವಾಗುತ್ತಿವೆ ಎಂದು ತಿಳಿಸಲಾಗಿದೆ. "ವೈರಸ್ (Coronavirus) ಗಾಳಿಯ ಮೂಲಕ ಹರಡುತ್ತಿದೆ ಎಂಬುದಕ್ಕೆ ಬಲವಾದ ಪುರಾವೆಗಳಿವೆ" ಎಂದು ಅಮೆರಿಕದ ಕೊಲೊರಾಡೋ ಮೂಲದ ಕೊಲೊರಾಡೋ ವಿಶ್ವವಿದ್ಯಾಲಯದ ಜೋಸ್ ಲೂಯಿಸ್ ಜಿಮೆನೆಜ್ ಹೇಳಿದ್ದಾರೆ.
ಇದನ್ನೂ ಓದಿ - ಕರೋನಾ ಬಿಕ್ಕಟ್ಟಿನ ಮಧ್ಯೆ ಸಂತರಿಗೆ ಪ್ರಧಾನಿ ಮೋದಿ ಮಾಡಿದ ಮನವಿ ಏನು ಗೊತ್ತಾ?
ವಿಶ್ವ ಆರೋಗ್ಯ ಸಂಸ್ಥೆ (World Health Organization) ಮತ್ತು ಇತರ ಆರೋಗ್ಯ ಸಂಸ್ಥೆಗಳು ವೈರಸ್ ಹರಡುವಿಕೆಯ ವೈಜ್ಞಾನಿಕ ಪುರಾವೆಗಳನ್ನು ಒಪ್ಪಿಕೊಳ್ಳುವುದು ಅವಶ್ಯಕ. ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವತ್ತ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ - Ayushman Bharat Yojana: ಈಗ ಉಚಿತವಾಗಿ ಸಿಗಲಿದೆ 5 ಲಕ್ಷದ Ayushman card
ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನವು, ಹನಿಗಳಿಗಿಂತ ಇಂತಹ ಪ್ರಸರಣವನ್ನು ಗಾಳಿಯ ಮೂಲಕ (ಏರೋಸಾಲ್) ಹರಡುವುದು ಸುಲಭ ಎಂದು ಹೇಳುತ್ತದೆ. ವಾಸ್ತವವಾಗಿ, ಕ್ಯಾರೆಂಟೈನ್ ಹೋಟೆಲ್‌ಗಳಲ್ಲಿ ಪಕ್ಕದ ಕೋಣೆಗಳಲ್ಲಿ ವಾಸಿಸುವ ಜನರ ನಡುವೆ ಪರಸ್ಪರರ ಕೋಣೆಗಳಿಗೆ ಹೋಗದೆ ಹರಡುವಿಕೆ ಕಂಡುಬಂದಿದೆ ಎಂದು ವರದಿ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.